ಕೃತಕ ಬೆಡ್ ಕೊರತೆ ಸೃಷ್ಟಿ; ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡ ಲೋಕಾಯುಕ್ತ ಸಂಸ್ಥೆ

| Updated By: ganapathi bhat

Updated on: Aug 23, 2021 | 12:51 PM

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಆರೋಗ್ಯ ಇಲಾಖೆ ಆಯುಕ್ತರು ಸೇರಿ 31 ಜನರಿಗೆ ನೋಟಿಸ್ ನೀಡಲಾಗಿದೆ. ಅಷ್ಟೇ ಅಲ್ಲದೆ ನೋಟಿಸ್​ಗೆ​ ಉತ್ತರಿಸಲು ಅಧಿಕಾರಿಗಳಿಗೆ 3 ವಾರಗಳ ಗಡುವು ಕೂಡ ನೀಡಲಾಗಿದೆ.

ಕೃತಕ ಬೆಡ್ ಕೊರತೆ ಸೃಷ್ಟಿ; ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡ ಲೋಕಾಯುಕ್ತ ಸಂಸ್ಥೆ
ಕರ್ನಾಟಕ ಲೋಕಾಯುಕ್ತ
Follow us on

ಬೆಂಗಳೂರು: ನಗರದಲ್ಲಿ ಕೊವಿಡ್ ಬೆಡ್ ಬುಕಿಂಗ್​ ಹಗರಣಕ್ಕೆ ಸಂಬಂಧಿಸಿ ಲೋಕಾಯುಕ್ತರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕೃತಕವಾಗಿ ಬೆಡ್ ಕೊರತೆ ಸೃಷ್ಟಿಸಲಾಗಿದೆ. ದಿನಪ್ರತಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಈ ವರದಿ ಆಧರಿಸಿ ಲೋಕಾಯುಕ್ತ ಸಂಸ್ಥೆ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದೆ. ಪ್ರಕರಣ ಸಂಬಂಧ 31 ಹಿರಿಯ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಆರೋಗ್ಯ ಇಲಾಖೆ ಆಯುಕ್ತರು ಸೇರಿ 31 ಜನರಿಗೆ ನೋಟಿಸ್ ನೀಡಲಾಗಿದೆ. ಅಷ್ಟೇ ಅಲ್ಲದೆ ನೋಟಿಸ್​ಗೆ​ ಉತ್ತರಿಸಲು ಅಧಿಕಾರಿಗಳಿಗೆ 3 ವಾರಗಳ ಗಡುವು ಕೂಡ ನೀಡಲಾಗಿದೆ. ಪ್ರಕರಣ ಸಂಬಂಧ ಸರಿಯಾದ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ಲೋಕಾಯುಕ್ತ ಎಡಿಜಿಪಿ 3 ವಾರದೊಳಗೆ ವರದಿ ಸಲ್ಲಿಸಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಆದೇಶ ಹೊರಡಿಸಿದ್ದಾರೆ.

ಕೊವಿಡ್ ವಾರ್​ ರೂಮ್ ಮೇಲೆ ಸಿಸಿಬಿ ದಾಳಿ
ನಗರದ ಎಲ್ಲಾ ವಲಯದ ವಾರ್ ರೂಮ್ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ ಮಾಡಿದ್ದರು. ದಾಖಲೆಗಳು ಮತ್ತು ಅಂಕಿಅಂಶಗಳ ಹುಡುಕಾಟ ನಡೆಸಿದ್ದರು. ಬೆಡ್ ಬುಕ್ಕಿಂಗ್ ಪ್ರಕರಣದಲ್ಲಿ‌ ಇದುವರೆಗೆ ನಾಲ್ಕು ಜನರ ಬಂಧನವಾಗಿದೆ. ಒಟ್ಟು ಎರಡು ಪ್ರಕರಣ ದಾಖಲಾಗಿದೆ. ಸಾಫ್ಟ್‌ವೇರ್ ಮೂಲಕ ವಂಚನೆ ಮಾಡುವ ಮಾಹಿತಿ ಇದೆ. ಬಂಧಿತ ಇಬ್ಬರು ಡಾಕ್ಟರ್​ಗಳು ವಾರ್ ರೂಮ್ ಇನ್​ಚಾರ್ಜ್​ಗಳಾಗಿದ್ದರು. ಅವರು ಸರ್ಕಾರಿ ವೈದ್ಯರಾಗಿದ್ದರು. ಸಿಸಿಬಿ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸ್ತಾ ಇದ್ದಾರೆ ಎಂದು ನಗರ ಪೊಲೀಸ್ ಅಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದರು.

ಬೆಡ್ ಬ್ಲಾಕಿಂಗ್ ಹಗರಣದ ಕುರಿತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದರು. ಬೆಡ್​ಗಳನ್ನು ನೀಡುವ ಕಾರ್ಯ ನಿರ್ವಹಣೆ ಕುರಿತು ಬೆಡ್ ಬುಲೆಟಿನ್ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಬೆಡ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 8 ಜನರ ವಿಚಾರಣೆ ನಡೆಯುತ್ತಿದೆ. ಸಿಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದರು.

ಇದನ್ನೂ ಓದಿ: ಕೊರೊನಾ 3ನೇ ಅಲೆ ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್ ಅನಿವಾರ್ಯ, ಈ ಅಂಶಗಳತ್ತ ಗಮನಹರಿಸದಿದ್ದರೆ ಅಪಾಯ: ಏಮ್ಸ್ ನಿರ್ದೇಶಕ ಸೂಚನೆ

Covid-19 Karnataka Update: ಕರ್ನಾಟಕದಲ್ಲಿ ಒಂದೇ ದಿನ 50 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು, ಇದು ಈವರೆಗಿನ ದಾಖಲೆ

(Bed Blocking Case Covid19 Corona Virus Suomoto Case registered by Karnataka Lokayukta)

Published On - 9:45 pm, Wed, 5 May 21