ಕೊರೊನಾ 3ನೇ ಅಲೆ ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್ ಅನಿವಾರ್ಯ, ಈ ಅಂಶಗಳತ್ತ ಗಮನಹರಿಸದಿದ್ದರೆ ಅಪಾಯ: ಏಮ್ಸ್ ನಿರ್ದೇಶಕ ಸೂಚನೆ

Corona 3rd Wave in India: ಭಾರತದಲ್ಲಿ ಕೊರೊನಾ ಮೂರನೇ ಅಲೆ ಕಂಡುಬರುವ ಸಾಧ್ಯತೆ ಇದೆ. ಆದರೆ, ಬಹಳಷ್ಟು ಮಂದಿ ಲಸಿಕೆ ತೆಗೆದುಕೊಂಡರೆ ಸದ್ಯದ ಪರಿಸ್ಥಿತಿಯಷ್ಟು ಕೆಟ್ಟ ದಿನವನ್ನು ನಾವು ಮುಂದೆ ನೋಡಬೇಕಾಗಿ ಬರುವುದಿಲ್ಲ ಎಂದು ಗುಲೆರಿಯಾ ಮಾಹಿತಿ ನೀಡಿದರು‌.

ಕೊರೊನಾ 3ನೇ ಅಲೆ ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್ ಅನಿವಾರ್ಯ, ಈ ಅಂಶಗಳತ್ತ ಗಮನಹರಿಸದಿದ್ದರೆ ಅಪಾಯ: ಏಮ್ಸ್ ನಿರ್ದೇಶಕ ಸೂಚನೆ
ಡಾ. ರಣದೀಪ್ ಗುಲೇರಿಯಾ
Follow us
| Updated By: ganapathi bhat

Updated on:Aug 23, 2021 | 12:51 PM

ದೆಹಲಿ: ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಕಠಿಣ ಲಾಕ್‌ಡೌನ್ ಜಾರಿಗೊಳಿಸುವುದು ಅನಿವಾರ್ಯವಾಗಿದೆ.‌ ಹಾಗೊಂದುವೇಳೆ ಅಂತಹ ನಿರ್ಧಾರ ಕೈಗೊಳ್ಳದೆ ಹೋದರೆ ದೇಶದಲ್ಲಿ ಕೊವಿಡ್-19 ಮೂರನೇ ಅಲೆ ಎದುರಾಗುವ ಸಾಧ್ಯತೆ ಇದೆ ಎಂದು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸಸ್‌ನ (AIIMS) ನಿರ್ದೇಶಕ ಡಾ. ರಣದೀಪ್ ಗುಲೆರಿಯಾ ಇಂದು (ಮೇ 5) ತಿಳಿಸಿದರು. ಕೊರೊನಾ ವೈರಾಣು ಹೀಗೇ ರೂಪಾಂತರ ಕಾಣುತ್ತಾ ಹೋದರೆ ಪರಿಸ್ಥಿತಿ ಬಹಳ ಹದಗೆಡಬಹುದು ಎಂದು ಗುಲೆರಿಯಾ ಎಚ್ಚರಿಕೆ ನೀಡಿದರು‌. ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಲಾಕ್‌ಡೌನ್‌ಗಳು ವೈರಸ್ ಸರಪಳಿಯನ್ನು ತಡೆಯಲು ಅಷ್ಟೊಂದು ಪರಿಣಾಮಕಾರಿ ವಿಧಾನವಲ್ಲ ಎಂದೂ ಅವರು ಹೇಳಿದರು.

ಈ ಮೂರು ಅಂಶಗಳತ್ತ ಗಮನಹರಿಸಿ ದೇಶಾದ್ಯಂತ ನಿಗದಿತ ಅವಧಿಗೆ ಲಾಕ್‌ಡೌನ್ ವಿಧಿಸುವುದು ಅನಿವಾರ್ಯವಾಗಿದೆ. ವೈರಾಣುವಿನ ರೂಪಾಂತರ ಮತ್ತು ಹರಡುವಿಕೆ ತಡೆಯಲು ಈ ಕ್ರಮ ಬೇಕಾಗಿದೆ‌. ಮತ್ತು ಈ ಅವಧಿಯಲ್ಲಿ ಮೂರು ವಿಚಾರಗಳ ಕಡೆಗೆ ಗಮನಹರಿಸಬೇಕಿದೆ ಎಂದು ಗುಲೆರಿಯಾ ತಿಳಿಸಿದರು. ಅವು ಈ ರೀತಿ ಇದೆ: – ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿ – ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುವಂತೆ ನೋಡಿಕೊಳ್ಳುವುದು ಹಾಗೂ – ಲಸಿಕೆ ಅಭಿಯಾನವನ್ನು ಚುರುಕುಗೊಳಿಸುವುದು

ಕೊರೊನಾ ವೈರಾಣು ಹರಡುವಿಕೆ ತಡೆಗಟ್ಟಲು, ಮಾನವ ಸಂಪರ್ಕವನ್ನು ಆದಷ್ಟು ಕಡಿಮೆ ಮಾಡಬೇಕಿದೆ. ಹಾಗಾದಾಗ ಕೊವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು. ಭಾರತದಲ್ಲಿ ಕೊರೊನಾ ಮೂರನೇ ಅಲೆ ಕಂಡುಬರುವ ಸಾಧ್ಯತೆ ಇದೆ. ಆದರೆ, ಬಹಳಷ್ಟು ಮಂದಿ ಲಸಿಕೆ ತೆಗೆದುಕೊಂಡರೆ ಸದ್ಯದ ಪರಿಸ್ಥಿತಿಯಷ್ಟು ಕೆಟ್ಟ ದಿನವನ್ನು ನಾವು ಮುಂದೆ ನೋಡಬೇಕಾಗಿ ಬರುವುದಿಲ್ಲ ಎಂದು ಗುಲೆರಿಯಾ ಮಾಹಿತಿ ನೀಡಿದರು‌.

ಇದಕ್ಕೂ ಮೊದಲು ಪಿಟಿಐ ಜೊತೆಗೆ ಮಾತನಾಡಿದ್ದ ಗುಲೆರಿಯಾ, ಕೊವಿಡ್ ಸಾಂಕ್ರಾಮಿಕ ಪ್ರಕರಣಗಳ ಪ್ರಮಾಣ ಶೇಕಡಾ 10ಕ್ಕಿಂತ ಜಾಸ್ತಿ ಇರುವೆಡೆ ಅಥವಾ ಆಸ್ಪತ್ರೆ ಹಾಸಿಗೆಗಳು ಶೇಕಡಾ 60ಕ್ಕಿಂತ ಹೆಚ್ಚು ಭರ್ತಿಯಾಗಿದ್ದರೆ ಅಲ್ಲಿ ಲಾಕ್‌ಡೌನ್ ಜಾರಿಗೊಳಿಸಬೇಕು ಎಂದು ಹೇಳಿದ್ದರು. ಕೊರೊನಾ ಪ್ರಕರಣಗಳು ಹೆಚ್ಚಾಗಿರುವ ಪ್ರದೇಶದಿಂದ ಕಡಿಮೆ ಇರುವ ಸ್ಥಳಗಳಿಗೆ ಜನರು ಪ್ರಯಾಣ ಬೆಳೆಸುವುದನ್ನು ಆದಷ್ಟು ಕಡಿಮೆ ಮಾಡಬೇಕು ಅಥವಾ ಅಂಥಾ ಸಂದರ್ಭದಲ್ಲಿ ಕಠಿಣ ನಿಯಮಾವಳಿಗಳನ್ನು ಸೂಚಿಸಬೇಕು ಎಂದು ಅವರು ತಿಳಿಸಿದ್ದರು.

ಭಾರತದಲ್ಲಿ ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಈ ಆತಂಕಕಾರಿ ಪರಿಸ್ಥಿತಿಯಲ್ಲಿ ಗುಲೆರಿಯಾ ಮಾತನಾಡಿ, ಇಷ್ಟೊಂದು ಪ್ರಕರಣಗಳನ್ನು ಯಾವ ಆರೋಗ್ಯ ಮೂಲಸೌಕರ್ಯವೂ ಯಶಸ್ವಿಯಾಗಿ ನಿಭಾಯಿಸುವುದು ಕಷ್ಟವೇ ಆಗಿದೆ ಎಂದು ಹೇಳಿದರು.

ಇದನ್ನೂ ಓದಿ: Rahul Gandhi: ಕೊರೊನಾ ವಿರುದ್ಧ ಹೋರಾಡಲು ಲಾಕ್​ಡೌನ್​ ಒಂದೇ ಅಸ್ತ್ರ: ರಾಹುಲ್ ಗಾಂಧಿ ಟ್ವೀಟ್

Covid Lockdown: ಕೋವಿಡ್ 2ನೇ ಅಲೆಗೆ ಕಡಿವಾಣ ಹಾಕಲು ಲಾಕ್​ಡೌನ್ ಹೇರಿ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್​ ಸೂಚನೆ

Published On - 5:41 pm, Wed, 5 May 21

‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?