Rahul Gandhi: ಕೊರೊನಾ ವಿರುದ್ಧ ಹೋರಾಡಲು ಲಾಕ್​ಡೌನ್​ ಒಂದೇ ಅಸ್ತ್ರ: ರಾಹುಲ್ ಗಾಂಧಿ ಟ್ವೀಟ್

Full Lockdown: ಕಳೆದ ಬಾರಿ ದೇಶದಲ್ಲಿ ಕೊರೊನಾ ಸೋಂಕಿನಿಂದ ಕೇಂದ್ರ ಸರ್ಕಾರ ಲಾಕ್​ಡೌನ್​ ಜಾರಿಗೊಳಿಸಿತ್ತು. ಯೋಜಿತವಲ್ಲದ ಲಾಕ್​ಡೌನ್​ನಿಂದಾಗಿ ದೇಶದಲ್ಲಿ ವಲಸಿಗರು ಸಂಕಷ್ಟವನ್ನು ಅನುಭವಿಸಿದ್ದರು ಎಂದು ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.

Rahul Gandhi: ಕೊರೊನಾ ವಿರುದ್ಧ ಹೋರಾಡಲು ಲಾಕ್​ಡೌನ್​ ಒಂದೇ ಅಸ್ತ್ರ: ರಾಹುಲ್ ಗಾಂಧಿ ಟ್ವೀಟ್
ರಾಹುಲ್​ ಗಾಂಧಿ
Follow us
sandhya thejappa
|

Updated on:May 04, 2021 | 11:38 AM

ದೆಹಲಿ: ಅಸಮರ್ಥೆಯ ಲಾಕ್​ಡೌನ್​ನಿಂದಾಗಿ ದೇಶದ ಜನರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಈ ಹಿಂದೆ ಹೇಳಿದ್ದ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಇದೀಗ ದೇಶದಲ್ಲಿ ಲಾಕ್​ಡೌನ್​ ಮಾಡುವುದು ಸೂಕ್ತ ಎಂದು ಟ್ವೀಟ್ ಮಾಡಿದ್ದಾರೆ. ಕೊವಿಡ್ ವಿರುದ್ಧ ಹೋರಾಡಲು ಲಾಕ್​ಡೌನ್​ ಒಂದೇ ಅಸ್ತ್ರ. ನ್ಯಾಯ ಯೋಜನೆ ಜಾರಿ ಜೊತೆ ಲಾಕ್​ಡೌನ್​ ಜಾರಿ ಮಾಡಿ. ಸರ್ಕಾರದ ನಿಷ್ಕ್ರಿಯತೆಯಿಂದ ಅಮಾಯಕರು ಸಾಯುತ್ತಿದ್ದಾರೆ ಎಂದು ಟ್ವೀಟ್​ನಲ್ಲಿ ಹೇಳಿದರು.

ಕಳೆದ ಬಾರಿ ದೇಶದಲ್ಲಿ ಕೊರೊನಾ ಸೋಂಕಿನಿಂದ ಕೇಂದ್ರ ಸರ್ಕಾರ ಲಾಕ್​ಡೌನ್​ ಜಾರಿಗೊಳಿಸಿತ್ತು. ಯೋಜಿತವಲ್ಲದ ಲಾಕ್​ಡೌನ್​ನಿಂದಾಗಿ ದೇಶದಲ್ಲಿ ವಲಸಿಗರು ಸಂಕಷ್ಟವನ್ನು ಅನುಭವಿಸಿದ್ದರು ಎಂದು ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ಕೊರೊನಾ ವಿರುದ್ಧ ಹೋರಾಡಲು ಲಾಕ್​ಡೌನ್​ ಅನಿವಾರ್ಯವೆಂದು ಇದೀಗ ಟ್ವೀಟ್​ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ

Vaccine Utsav: ಭಾರತೀಯರೆಲ್ಲರಿಗೂ ಕೊರೊನಾ ಲಸಿಕೆ ನೀಡಬೇಕು; ಪ್ರಧಾನಿ ಮೋದಿಗೆ ಪತ್ರ ಬರೆದ ರಾಹುಲ್ ಗಾಂಧಿ

ಕೊರೊನಾ ಕಾಟ: ಇನ್ನು ಉಳಿದ ಐಪಿಎಲ್​ ಪಂದ್ಯಗಳೆಲ್ಲವೂ ಸುರಕ್ಷಿತವಾಗಿ ಮುಂಬೈನಲ್ಲೇ? ಏನಿದು ಬಿಸಿಸಿಐ ಚಿಂತನೆ, ಇಲ್ಲಿದೆ ವಿವರ

(Rahul Gandhi says it was appropriate to implement a lockdown in country to fight corona in twitter)

Published On - 10:52 am, Tue, 4 May 21