AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಾಟ: ಇನ್ನು ಉಳಿದ ಐಪಿಎಲ್​ ಪಂದ್ಯಗಳೆಲ್ಲವೂ ಸುರಕ್ಷಿತವಾಗಿ ಮುಂಬೈನಲ್ಲೇ? ಏನಿದು ಬಿಸಿಸಿಐ ಚಿಂತನೆ, ಇಲ್ಲಿದೆ ವಿವರ

ಆದರೆ ಇದು ಸಾಧ್ಯವಾ? ಎಲ್ಲಾ ಆಟಗಾರರರನ್ನೂ, ಎಲ್ಲಾ ತಂಡಗಳನ್ನು ಒಂದೇ ಊರಿನಲ್ಲಿ ಒಟ್ಟಿಗೇ ಕೂಡಿಹಾಕುವುದು ಸಾಧ್ಯಾವದೀತಾ? ಎಂಬ ಪ್ರಶ್ನೆಯೂ ಎದ್ದಿದೆ. ಏಕೆಂದರೆ ಅಷ್ಟೂ ಆಟಗಾರರು, ಸಿಬ್ಬಂದಿಗೆ ಬಯೋ ಬಬಲ್ ವ್ಯವಸ್ಥೆಯಲ್ಲಿ ವಿವಿಧ ಹೋಟೆಲ್​ಗಳಲ್ಲಿ ವಾಸ್ತವ್ಯ ಹೂಡಬೇಕಿದೆ. ಅಷ್ಟೇ ಅಲ್ಲ ಅಷ್ಟೂ ಮಂದಿ ಅಭ್ಯಾಸದಲ್ಲಿ ತೊಡಗುವುದೂತೊಡಕುಂಟಾದೀತು. ಆಟಗಾರರ ಕ್ಷಮತೆಗೆ ಇದರಿಂದ ಕುಂದುಂಟಾದೀತು ಎಂಬ ಮಾತುಗಳೂ ಕೇಳಿಬರುತ್ತಿದೆ.

ಕೊರೊನಾ ಕಾಟ: ಇನ್ನು ಉಳಿದ ಐಪಿಎಲ್​ ಪಂದ್ಯಗಳೆಲ್ಲವೂ ಸುರಕ್ಷಿತವಾಗಿ ಮುಂಬೈನಲ್ಲೇ? ಏನಿದು ಬಿಸಿಸಿಐ ಚಿಂತನೆ, ಇಲ್ಲಿದೆ ವಿವರ
ಐಪಿಎಲ್ 2022
Follow us
ಸಾಧು ಶ್ರೀನಾಥ್​
|

Updated on: May 04, 2021 | 9:40 AM

ಕೊರೊನಾ ಕ್ರಿಮಿ ಮನೆ ಅಂಗಳಕ್ಕೆ ನುಗ್ಗಿ ಯಾವುದೋ ಕಾಲವಾಯಿತು. ಇಡೀ ಮನೆಮಂದಿಯನ್ನೆಲ್ಲ ಹೈರಾಣಗೊಳಿಸಿ ಅಟ್ಟಹಾಸ ಮೆರೆಯುತ್ತಿದೆ ಆ ಮಹಾಮಾರಿ. ಅದೀಗ ಕ್ರಿಕೆಟ್​ ಅಂಕಣದೊಳಕ್ಕೂ ಪ್ರವೇಶಿಸಿಬಿಟ್ಟಿದೆ. ಆಟಗಾರರ ಸುರಕ್ಷೆತೆಯ ದೃಷ್ಟಿಯಿಂದ ಪ್ರೇಕ್ಷಕರನ್ನು ಹೊರಗಿಟ್ಟು, ಕೊರೊನಾದಿಂದಾಗಿ ಮನೆಯಲ್ಲೇ ಕುಳಿತಿರುವವರ ಭರಪೂರ ಮನರಂಜನೆಗಾಗಿ ಬರೀ ಆಟಗಾರರನ್ನಷ್ಟೇ ಸ್ಟೇಡಿಯಂನೊಳಕ್ಕೆ ಬಿಟ್ಟು ಬಿಸಿಸಿಐ ಕಳೆದ ವರ್ಷದ ಐಪಿಎಲ್ ಟೂರ್ನಿ ಸೇರಿದಂತೆ ಈ ಬಾರಿಯ ಐಪಿಎಲ್ ಅನ್ನೂ ಆಡಿಸತೊಡಗಿತ್ತು. ಆಟಗಾರರು ಇದಕ್ಕೆ ಸ್ಪಂದಿಸಿದ್ದರು. ಪ್ರೇಕ್ಷಕರ ಪ್ರಭುಗಳೂ ಒಂಚೂರು ಕೊರೊನಾ ಮರೆತು, ಅಟದಲ್ಲಿ ಮಗ್ನರಾದರು. ಆದರೆ ಈ ಬಾರಿ ಮಾಹಾಮಾರಿ ತೀವ್ರವಾಗಿದೆ. ಸಖತ್​ ಬ್ಯಾಟ್​ ಬೀಸುತ್ತಿದೆ. ಸಿಕ್ಕಸಿಕ್ಕವರೆನ್ನೆಲ್ಲಾ ಆಪೋಷನ ತೆಗೆದುಕೊಳ್ಳುತ್ತಿದೆ. ಆಟಗಾರರನ್ನೂ ಕಾಡತೊಡಗಿದೆ. ಕೆಲವೆರು ಅದಾಗಲೇ ಆಟ ಬಿಟ್ಟು ಮನೆ ಸೇರಿಕೊಂಡಿದ್ದಾರೆ. ಈ ಬೆಳವಣಿಗೆಗಳ ಸಮ್ಮುಖದಲ್ಲಿ ಇನ್ನು ಉಳಿದ ಐಪಿಎಲ್​ ಪಂದ್ಯಗಳನ್ನು ಸುರಕ್ಷತೆಯ ದೃಷ್ಟಿಯಿಂದ ಒಂದೇ ಊರಿನಲ್ಲಿ ಅಂದ್ರೆ ಆಟಗಾರರನ್ನು ಹೆಚ್ಚಾಗಿ ಓಡಾಡಿಸದೆ, ಮುಂಬೈನಲ್ಲೇ ಆಡಿಸಲು ಬಿಸಿಸಿಐ ನಿರ್ಧರಿಸಿದಂತಿದೆ. ಈ ಬಗ್ಗೆ ಯಾವುದೇ ಕ್ಷಣ ಅಧಿಕೃತ ಪ್ರಕಟಣೆ ಹೊರಬೀಳುವ ಅಂದಾಜಿದೆ.

ಇಂಡಿಯನ್​ ಪ್ರೀಮಿಯರ್​ ಲೀಗ್ 2021 (Indian Premier League -IPL) ಟೂರ್ನಿಯ ಉಳಿದ ಪಂದ್ಯಗಳನ್ನು ಮುಂಬೈನ ಮೂರು ಸ್ಟೇಡಿಯಂಗಳಲ್ಲಿ ಆಡಿಸುವ ಬಗ್ಗೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (Board of Control for Cricket -BCCI) ಚಿಂತಿಸುತ್ತಿದೆ. ವಾಂಖೇಡೆ, ಡಿ ವೈ ಪಾಟೀಲ್ ಮತ್ತು ಬ್ರಬೋರ್ನ್​ ಸ್ಟೇಡಿಯಂಗಳಲ್ಲಿ ಮುಂದಿನ ಪಂದ್ಯಗಳು ಜರುಗುವ ಸಾಧ್ಯತೆಯಿದೆ.

ಆಟಗಾರರನ್ನು ಬಯೋಬಬಲ್ (bio-bubble) ಸುರಕ್ಷತೆಯಲ್ಲಿಟ್ಟು ಆಡಿಸುತ್ತಿದ್ದ ಬಿಸಿಸಿಐ ವಿರುದ್ಧ ಸಾಕಷ್ಟು ಟೀಕೆಗಳು ಬಂದಿದ್ದವು. ಸಾಕು ನಿಲ್ಲಿಸಿ, ಆಟ ಎಂದು ಕೆಲವರು ಬೊಬ್ಬಿಟ್ಟಿದ್ದರು. ಆದರೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ಇದೀಗ ಜಾಣ ಉಪಾಯವೊಂದನ್ನು ಕಂಡುಕೊಂಡಿದ್ದು, ಎಲ್ಲ ಪಂದ್ಯಗಳನ್ನೂ ಮುಂಬೈನ ಮೂರು ಸ್ಟೇಡಿಯಂಗಳಲ್ಲಿ ಆಡಿಸುವ ನಿರ್ಧಾರಕ್ಕೆ ಬಂದಂತಿದೆ. ಅಷ್ಟೇ ಅಲ್ಲ.. IPL 2021 ಫೈನಲ್​ ಪಂದ್ಯವನ್ನು ಮೇ 30 ಭಾನುವಾರದ ಬದಲಿಗೆ ಕೊರೊನಾ ಆರ್ಭಟ ಸ್ವಲ್ಪ ಕಡಿಮೆ ಆಗುವುದನ್ನು ನೋಡಿಕೊಂಡು ಜೂನ್ ತಿಂಗಳಲ್ಲಿ ಆಡಿಸಲು ಸಹ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಆದರೆ ಇದು ಸಾಧ್ಯವಾ? ಎಲ್ಲಾ ಆಟಗಾರರರನ್ನೂ, ಎಲ್ಲಾ ತಂಡಗಳನ್ನು ಒಂದೇ ಊರಿನಲ್ಲಿ ಒಟ್ಟಿಗೇ ಕೂಡಿಹಾಕುವುದು ಸಾಧ್ಯಾವದೀತಾ? ಎಂಬ ಪ್ರಶ್ನೆಯೂ ಎದ್ದಿದೆ. ಏಕೆಂದರೆ ಅಷ್ಟೂ ಆಟಗಾರರು, ಸಿಬ್ಬಂದಿಗೆ ಬಯೋ ಬಬಲ್ ವ್ಯವಸ್ಥೆಯಲ್ಲಿ ವಿವಿಧ ಹೋಟೆಲ್​ಗಳಲ್ಲಿ ವಾಸ್ತವ್ಯ ಹೂಡಬೇಕಿದೆ. ಅಷ್ಟೇ ಅಲ್ಲ ಅಷ್ಟೂ ಮಂದಿ ಅಭ್ಯಾಸದಲ್ಲಿ ತೊಡಗುವುದೂತೊಡಕುಂಟಾದೀತು. ಆಟಗಾರರ ಕ್ಷಮತೆಗೆ ಇದರಿಂದ ಕುಂದುಂಟಾದೀತು ಎಂಬ ಮಾತುಗಳೂ ಕೇಳಿಬರುತ್ತಿದೆ. ಒಟ್ಟಿನಲ್ಲಿ ಬಿಸಿಸಿಐಗೆ ಈ ಬಾರಿ ಉಳಿದ ಐಪಿಎಲ್ ಟೂರ್ನಿಯನ್ನು ಯಾವುದೇ ಅಪಾಯಕ್ಕೆ ಸಿಲುಕಿಕೊಳ್ಳದಂತೆ, ಯಶಸ್ವಿಯಾಗಿ ಮುಗಿಸುವ ಗುರುತರ ಜವಾಬ್ದಾರಿ ನಿಭಾಯಿಸಬೇಕಿದೆ.

ಇದೆಲ್ಲದ ಮಧ್ಯೆ ಮುಂಬೈ ಮಹಾ ಪರಿಸ್ಥಿತಿ ಹೇಗಿದೆಯೆಂದರೆ IPL 2021 ಟೂರ್ನಿ ಆರಂಭವಾದಾಗ ದಿನಕ್ಕೆ ವಾಣಿಜ್ಯನಗರಿಯಲ್ಲಿ 10,000 ಕೊರೊನಾ ಕೇಸುಗಳು ಪತ್ತೆಯಾಗಿ ಹಾಟ್​ಸ್ಪಾಟ್​ ಎನಿಸಿತ್ತು. ಆದರೆ ಕೊರೊನಾ ಕಾಟ ಕೊಂಚ ತಗ್ಗಿದೆ. ದಿನಕ್ಕೆ 2,500 ಕೇಸುಗಳು ಮಾತ್ರವೇ ವರದಿಯಾಗುತ್ತಿವೆ. ಹಾಗಾಗಿ ಮುಂಬೈ ಸೇಫ್​ ಎಂಬ ಲೆಕ್ಕಾಚಾರವಿದೆ.

(BCCI planning remaining IPL 2021 matches to be played in Mumbai amid raging Covid 19)

ಇದನ್ನೂ ಓದಿ:

ಕೊರೊನಾ ಎಂಬ ಬ್ರಹ್ಮ ರಾಕ್ಷಸ ನಮ್ಮ ಜೀವ ಹಿಂಡಿಹಿಪ್ಪೆ ಮಾಡಿದ: ಮೊದಲು ಮಾಸ್ಕ್​ ಹಾಕಿಕೊಳ್ಳಿ, ಲಸಿಕೆ ತೆಗೆದುಕೊಳ್ಳಿ: ಕ್ರಿಕೆಟರ್ ಅಶ್ವಿನ್ ಪತ್ನಿ

ಭಾರತದಲ್ಲಿ ಒಂದೇ ದಿನ 3,689 ಜನ ಕೊರೊನಾ ಸಾಂಕ್ರಾಮಿಕ ಕಾಯಿಲೆಗೆ ಬಲಿ

ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು