IPL 2021 Suspended: ಐಪಿಎಲ್​​ 2021 ಸ್ಥಗಿತ; ಈ ಬಾರಿ ಯಾರಿಗೂ ಕಪ್​ ಇಲ್ಲ!

IPL 2021: ಒಬ್ಬರಾದ ಮೇಲೊಬ್ಬರು ಆಟಗಾರರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವ ಕಾರಣ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದ್ದು, ಈ ಬಾರಿಯ ಸರಣಿ ಅರ್ಧಕ್ಕೆ ಮೊಟಕುಗೊಂಡಂತಾಗಿದೆ.

IPL 2021 Suspended: ಐಪಿಎಲ್​​ 2021 ಸ್ಥಗಿತ; ಈ ಬಾರಿ ಯಾರಿಗೂ ಕಪ್​ ಇಲ್ಲ!
ಈ ಬಾರಿ ಕಪ್​ ಯಾರಿಗೂ ಇಲ್ಲ.. ಕೊರೊನಾ ಕಾರಣದಿಂದ ಐಪಿಎಲ್​ ಸ್ಥಗಿತ
Follow us
Skanda
|

Updated on:May 04, 2021 | 1:44 PM

ಐಪಿಎಲ್​ 2021 ಸರಣಿ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದೆ. ಒಬ್ಬರಾದ ಮೇಲೊಬ್ಬರು ಆಟಗಾರರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವ ಕಾರಣ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದ್ದು, ಈ ಬಾರಿಯ ಸರಣಿ ಅರ್ಧಕ್ಕೆ ಮೊಟಕುಗೊಂಡಂತಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಬಿಸಿಸಿಐ, ಕೊರೊನಾ ಉಲ್ಬಣಿಸುತ್ತಿರುವ ಕಾರಣದಿಂದ ಸರಣಿಯನ್ನು ನಿಲ್ಲಿಸುವ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಿದೆ. ನಿನ್ನೆ (ಮಾರ್ಚ್​ 3) ಆರ್​ಸಿಬಿ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ಪಂದ್ಯ ಆರಂಭವಾಗಬೇಕಿದ್ದ ಕೆಲ ಸಮಯದ ಮುಂಚಿತವಾಗಿ ಕೆಕೆಆರ್​ ತಂಡದ ವರುಣ್​ ಚಕ್ರವರ್ತಿಗೆ ಹಾಗೂ ಸಂದೀಪ್ ವಾರಿಯರ್​ಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿರುವುದು ವರದಿಯಾಗಿತ್ತು. ಈ ಕಾರಣದಿಂದಾಗಿ ನಿನ್ನೆಯ ಪಂದ್ಯವನ್ನೂ ಮುಂದೂಡಲಾಗಿತ್ತು.

ಆದರೆ, ಅವರಿಬ್ಬರಿಗೆ ಕೊರೊನಾ ಕಾಣಿಸಿಕೊಂಡ ಬೆನ್ನಲ್ಲೇ ಇಂದು (ಮಾರ್ಚ್​ 4) ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಅಮಿತ್​ ಮಿಶ್ರಾ ಹಾಗೂ ಸನ್​ರೈಸರ್ಸ್​ ತಂಡದ ವೃದ್ಧಿಮಾನ್​ ಸಹಾಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಜತೆಗೆ, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಬೌಲಿಂಗ್​ ಕೋಚ್ ಎಲ್​.ಬಾಲಾಜಿ ಹಾಗೂ ಬಸ್​ ಕ್ಲೀನರ್​ಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.

ಕಳೆದ ಬಾರಿ ಕೊರೊನಾ ಆತಂಕದ ನಡುವೆಯೂ ಯುಎಈನಲ್ಲಿ ಸರಣಿ ಆಯೋಜಿಸಲಾಗಿದ್ದು, ಯಶಸ್ವಿಯಾಗಿ ಪೂರ್ಣಗೊಂಡಿತ್ತು. ಆದರೆ, ಈ ಬಾರಿ ಹೊರದೇಶಗಳಲ್ಲಿ ಆಯೋಜನೆ ಮಾಡಲು ನಿರಾಕರಿಸಿ ಬಯೋ ಬಬ್ಬಲ್​ ಮೂಲಕ ಸುರಕ್ಷಿತವಾಗಿ ಭಾರತದಲ್ಲೇ ಸರಣಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿತ್ತು. ಅದಕ್ಕಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನೂ ತೆಗೆದುಕೊಂಡು ಪಂದ್ಯಗಳನ್ನು ಆಯೋಜಿಸಿತ್ತು. ಆದರೆ, ಇದೀಗ ಒಬ್ಬೊಬ್ಬರೇ ಆಟಗಾರರಿಗೆ ಸೋಂಕು ಕಾಣಿಸಿಕೊಳ್ಳಲಾರಂಭಿಸಿದ ಕಾರಣ ಬಿಸಿಸಿಐ ಸರಣಿಯನ್ನೇ ಸ್ಥಗಿತಗೊಳಿಸಿದೆ.

ಇದನ್ನೂ ಓದಿ: ಬಿಸಿಸಿಐ ಮಾನ ಆಸ್ಟ್ರೇಲಿಯಾದಲ್ಲಿ ಹರಾಜು! ಆಸಿಸ್​ ಆಟಗಾರನಿಂದ ಹೊರಬಿತ್ತು ಐಪಿಎಲ್​ನಲ್ಲಿ ಕೊರೊನಾ ಸ್ಫೋಟ ವಿಚಾರ 

ಭಾರತೀಯರಿಗಾಗಿ ಮಿಡಿದ ಕ್ರಿಕೆಟಿಗರ ಹೃದಯ! ಈ ಐಪಿಎಲ್​ನಲ್ಲಿ ನನ್ನ ಆಟಕ್ಕೆ ಸಿಗುವ ಅಷ್ಟೂ ಹಣವನ್ನು ಆಮ್ಲಜನಕ ಪೂರೈಕೆಗೆ ನೀಡುತ್ತಿದ್ದೇನೆ; ಧವನ್

Published On - 1:07 pm, Tue, 4 May 21

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ