ಕೇಂದ್ರ ಸಚಿವ ಗೆಹ್ಲೋಟ್ ಪುತ್ರಿ ಕೊರೊನಾಗೆ ಬಲಿ
ಯೋಗಿತಾರಿಗೆ ಕಳೆದ 2 ವಾರಗಳ ಹಿಂದೆ ಸೋಂಕು ತಗುಲಿತ್ತು. ಇತ್ತೀಚೆಗೆ ಅವರು ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ರು. ಸೋಂಕಿನ ತೀವ್ರತೆಯಿಂದ ಯೋಗಿತಾ ಅವರ ಶ್ವಾಸಕೋಶ ಶೇ 80ರಷ್ಟು ಹಾನಿಗೀಡಾಗಿತ್ತು. ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
ಇಂದೋರ್: ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೋಟ್ ಅವರ ಪುತ್ರಿ ಯೋಗಿತಾ ಸೋಲಂಕಿ(42) ಅವರು ಕೊರೊನಾದಿಂದ ಮಧ್ಯಪ್ರದೇಶದ ಇಂದೋರ್ನ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಸೌಲಭ್ಯದ ಉನ್ನತ ಅಧಿಕಾರಿ ತಿಳಿಸಿದ್ದಾರೆ.
ಯೋಗಿತಾರಿಗೆ ಕಳೆದ 2 ವಾರಗಳ ಹಿಂದೆ ಸೋಂಕು ತಗುಲಿತ್ತು. ಇತ್ತೀಚೆಗೆ ಅವರು ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ರು. ಸೋಂಕಿನ ತೀವ್ರತೆಯಿಂದ ಯೋಗಿತಾ ಅವರ ಶ್ವಾಸಕೋಶ ಶೇ 80ರಷ್ಟು ಹಾನಿಗೀಡಾಗಿತ್ತು. ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
ಆರಂಭದಲ್ಲಿ, ಯೋಗಿತಾರನ್ನು ಉಜ್ಜಯಿನಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರ ಸ್ಥಿತಿ ಹದಗೆಟ್ಟ ನಂತರ ಅವರನ್ನು ಇಂದೋರ್‌ಗೆ ಸ್ಥಳಾಂತರಿಸಲಾಯಿತು ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ. ಗೃಹಿಣಿಯಾಗಿದ್ದ ಯೋಗಿತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 23 ವರ್ಷದ ಮಗಳು ಮತ್ತು 20 ವರ್ಷದ ಮಗ ಇದ್ದಾರೆ.
ಇದನ್ನೂ ಓದಿ: Narendra Modi: ಮೋದಿಯಿಂದಾಗಿ ಜಪಾನ್ನಲ್ಲಿ ಕೊರೊನಾ 2ನೇ ಅಲೆ ಶುರು ಆಗಿದ್ಯಾ? ಕಂಗನಾ ಖಡಕ್ ಪ್ರಶ್ನೆ