Narendra Modi: ಮೋದಿಯಿಂದಾಗಿ ಜಪಾನ್​ನಲ್ಲಿ ಕೊರೊನಾ 2ನೇ ಅಲೆ ಶುರು ಆಗಿದ್ಯಾ? ಕಂಗನಾ ಖಡಕ್​ ಪ್ರಶ್ನೆ

Kangana Ranaut twitter: ಕಂಗನಾ ಅವರ ಈ ಮಾತಿಗೆ ನೆಟ್ಟಿಗರು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕಂಗನಾ ಮತ್ತು ಅವರ ತಂಡಕ್ಕೆ ದಿನವಿಡೀ ಮೋದಿಯ ಚಾಕರಿ ಮಾಡುವುದೇ ಕೆಲಸ ಎಂದು ಕೆಲವರು ಕಾಲೆಳೆದಿದ್ದಾರೆ.

Narendra Modi: ಮೋದಿಯಿಂದಾಗಿ ಜಪಾನ್​ನಲ್ಲಿ ಕೊರೊನಾ 2ನೇ ಅಲೆ ಶುರು ಆಗಿದ್ಯಾ? ಕಂಗನಾ ಖಡಕ್​ ಪ್ರಶ್ನೆ
ಕಂಗನಾ ರಣಾವತ್​ - ನರೇಂದ್ರ ಮೋದಿ
Follow us
ಮದನ್​ ಕುಮಾರ್​
|

Updated on:May 04, 2021 | 8:43 AM

ತಮಗೆ ಸಂಬಂಧ ಇರಲಿ ಇಲ್ಲದೇ ಇರಲಿ, ಕಂಗನಾ ರಣಾವತ್​ ಎಲ್ಲದಕ್ಕೂ ಪ್ರತಿಕ್ರಿಯೆ ನೀಡುತ್ತಾರೆ. ಕಳೆದ ವರ್ಷ ಸುಶಾಂತ್​ ಸಿಂಗ್​ ರಜಪೂತ್​ ನಿಧನದ ಬಳಿಕ ಶುರುವಾದ ಅವರ ಕಿರುಚಾಟಗಳು ಇಂದಿಗೂ ನಿಂತಿಲ್ಲ. ಹಲವು ವಿವಾದಗಳನ್ನು ಅವರು ತಾವಾಗಿಯೇ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಸದ್ಯ ದೇಶದೆಲ್ಲೆಡೆ ಹರಡಿರುವ ಕೊವಿಡ್​ ಮಹಾಮಾರಿಯ ಕುರಿತಾಗಿಯೂ ಅವರು ಸರಣಿ ಟ್ವೀಟ್​ ಮಾಡುತ್ತಿದ್ದಾರೆ. ಅಲ್ಲದೆ, ಪದೇಪದೇ ಮೋದಿ ಪರವಾಗಿ ವಾದ ಮಂಡಿಸುತ್ತಿದ್ದಾರೆ. ಈಗ ಕಂಗನಾ ಮಾಡಿರುವ ಒಂದು ಟ್ವೀಟ್​ ವೈರಲ್​ ಆಗುತ್ತಿದೆ.

ಕೊರೊನಾದಿಂದಾಗಿ ಭಾರತ ಮಾತ್ರವಲ್ಲದೇ ಇತರೆ ದೇಶಗಳು ಕೂಡ ಕಷ್ಟ ಅನುಭವಿಸುತ್ತಿವೆ. ಜಪಾನ್​ನಲ್ಲಿಯೂ ಕೊರೊನಾ ವೈರಸ್​ ಕಾಟ ಕೊಡುತ್ತಿದೆ. ಹಾಗಾಗಿ ಅಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಪಾನ್​ನ ಕೆಲವು ಪ್ರಮುಖ ನಗರಗಳಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಲಾಗಿದೆ ಎಂಬ ಸುದ್ದಿಗೆ ಈಗ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಅವರು ಮೋದಿ ಹೆಸರನ್ನು ಎಳೆದು ತಂದಿದ್ದಾರೆ.

‘ನನಗೆ ಜಪಾನ್​ ಪ್ರಧಾನಿಯ ಹೆಸರು ಕೂಡ ಗೊತ್ತಿಲ್ಲ. ಯಾಕೆಂದರೆ ಅವರು ತಮ್ಮ ದೇಶವನ್ನು ಕುಗ್ಗಲು ಬಿಟ್ಟಿಲ್ಲ. ಅಂದರೆ ಜಪಾನ್​ ಜನರು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಅರ್ಥ. ಭಾರತೀಯರ ರೀತಿ ಮೂರ್ಖರಲ್ಲ. ಅವರ ಸರ್ಕಾರ ತುಂಬ ಚೆನ್ನಾಗಿದೆ ಎಂಬುದಾದರೆ ಜಪಾನ್​ನಲ್ಲಿ ಯಾಕೆ ಕೊವಿಡ್​ ಎಮರ್ಜೆನ್ಸಿ ಜಾರಿ ಮಾಡಲಾಗಿದೆ? ಅಲ್ಲಿ ಎರಡನೇ ಅಲೆ ಎಬ್ಬಿಸಿದವರು ಯಾರು? ಮೋದಿನಾ?’ ಎಂದು ಕಂಗನಾ ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದಾರೆ.

ಕಂಗನಾ ಅವರ ಈ ಮಾತಿಗೆ ನೆಟ್ಟಿಗರು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಕಂಗನಾ ಪರವಾಗಿ ಮಾತನಾಡಿದ್ದರೆ ಮತ್ತೆ ಕೆಲವರು ಅವರನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಈ ಕಂಗನಾ ಮತ್ತು ಅವರ ತಂಡಕ್ಕೆ ದಿನವಿಡೀ ಮೋದಿಯ ಚಾಕರಿ ಮಾಡುವುದೇ ಕೆಲಸ ಎಂದು ಕೆಲವರು ಕಾಲೆಳೆದಿದ್ದಾರೆ. ಸದ್ಯ ಎಲ್ಲ ಕಡೆ ಆಕ್ಸಿಜನ್​ಗಾಗಿ ಹಾಹಾಕಾರ ಶುರುವಾಗಿದೆ. ಈ ಸಂದರ್ಭದಲ್ಲಿ ಹೆಚ್ಚು ಮರಗಳನ್ನು ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂಬುದಾಗಿಯೂ ಕಂಗನಾ ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ಸಂದರ್ಭದಲ್ಲಿ ಸಹಾಯ ಮಾಡದೆ ಸುಮ್ಮನಿರುವ ಕಂಗನಾಗೆ ಕ್ಲಾಸ್​

ಶಾರುಖ್ ಖಾನ್​​​​​​ಗಿಂತ ನಾನು ಗ್ರೇಟ್​ ಎಂದ ಕಂಗನಾ ರಣಾವತ್​; ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​

Published On - 7:57 am, Tue, 4 May 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ