ಶಾರುಖ್ ಖಾನ್​​​​​​ಗಿಂತ ನಾನು ಗ್ರೇಟ್​ ಎಂದ ಕಂಗನಾ ರಣಾವತ್​; ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​

ಕಂಗನಾ ತಮ್ಮನ್ನು ತಾವು ಶಾರುಖ್​ ಖಾನ್​ಗೆ ಹೋಲಿಕೆ ಮಾಡಿಕೊಂಡಿದ್ದು, ಪರೋಕ್ಷವಾಗಿ ಶಾರುಖ್​ ಖಾನ್​ಗಿಂತ ತಾವು ಗ್ರೇಟ್​ ಎಂದು ಹೇಳಿಕೊಂಡಿದ್ದು ಅನೇಕರಿಗೆ ಇಷ್ಟವಾಗಿಲ್ಲ.

ಶಾರುಖ್ ಖಾನ್​​​​​​ಗಿಂತ ನಾನು ಗ್ರೇಟ್​ ಎಂದ ಕಂಗನಾ ರಣಾವತ್​; ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​
ಶಾರುಖ್​- ಕಂಗನಾ
Follow us
ರಾಜೇಶ್ ದುಗ್ಗುಮನೆ
|

Updated on: Apr 28, 2021 | 8:23 PM

ನಟಿ ಕಂಗನಾ ರಣಾವತ್​ ಯಾವುದೇ ಹಿನ್ನೆಲೆ ಇಲ್ಲದೆ ಬಾಲಿವುಡ್​ಗೆ ಕಾಲಿಟ್ಟವರು. ಅವರ ಮೊದಲ ಸಿನಿಮಾ ಗ್ಯಾಂಗ್​ಸ್ಟರ್ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಚಿತ್ರ ತೆರೆಕಂಡು 15 ವರ್ಷ ಕಳೆದಿದೆ. ಈ ಖುಷಿಗೆ ಕಂಗನಾ ಸರಣಿ ಟ್ವೀಟ್​ ಮಾಡಿದ್ದಾರೆ. ಅಷ್ಟೇ ಅಲ್ಲ ತಮ್ಮನ್ನು ತಾವು ಶಾರುಖ್​ ಖಾನ್​ ಜತೆ ಹೋಲಿಕೆ ಮಾಡಿಕೊಂಡಿದ್ದಾರೆ. ಕೆಲವರು ಇದನ್ನು ಟ್ರೋಲ್​ ಮಾಡಿದರೆ, ಇನ್ನೂ ಕೆಲವರು ಕಂಗನಾ ಅವರನ್ನು ಹೊಗಳಿದ್ದಾರೆ.

2006ರಲ್ಲಿ ತೆರೆಗೆ ಬಂದ ಗ್ಯಾಂಗ್​ಸ್ಟರ್​ ಸಿನಿಮಾ ಮೂಲಕ ಬಣ್ಣ ಬದುಕು ಆರಂಭಿಸಿದವರು ಕಂಗನಾ. ಇಮ್ರಾನ್​ ಹಶ್ಮಿ ಈ ಚಿತ್ರದ ಹೀರೋ. ಅಂದಿನ ಕಾಲದಲ್ಲಿ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್​ ಮಾಡಿತ್ತು. ನಂತರ ಕಂಗನಾಗೆ ಸಾಲು ಸಾಲು ಸಿನಿಮಾ ಆಫರ್​ಗಳು ಬರೋಕೆ ಪ್ರಾರಂಭವಾದವು. 15 ವರ್ಷಗಳ ಜರ್ನಿಯಲ್ಲಿ ಕಂಗನಾ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ.

15 ವರ್ಷಗಳ ಹಿಂದೆ ಗ್ಯಾಂಗ್​ಸ್ಟರ್​ ರಿಲೀಸ್​ ಆಗಿತ್ತು. ನನ್ನದು ಹಾಗೂ ಶಾರುಖ್​ ಖಾನ್​​ ಇಬ್ಬರದ್ದೂ ದೊಡ್ಡ ಸಕ್ಸಸ್​ ಸ್ಟೋರಿಗಳಿವೆ. ನಮ್ಮಿಬ್ಬರಿಗೆ ವ್ಯತ್ಯಾಸ ಇಷ್ಟೆ. ಶಾರುಖ್​ ದೆಹಲಿಯಿಂದ ಬಂದವರು. ಕಾನ್ವೆಂಟ್​ನಲ್ಲಿ ಓದಿದವರು. ಅವರ ಪಾಲಕರು ಸಿನಿಮಾ ಇಂಡಸ್ಟ್ರಿಯನ್ನು ಹತ್ತಿರದಿಂದ ಕಂಡವರು. ಆದರೆ, ನನಗೆ ಒಂದಕ್ಷರ ಇಂಗ್ಲಿಷ್​ ಬರುತ್ತಿರಲಿಲ್ಲ. ಹಿಮಾಚಲ ಪ್ರದೇಶದ ಕುಗ್ರಾಮದಿಂದ ಬಂದವಳು ನಾನು. ನನ್ನ ಪ್ರತಿ ದಿನವೂ ಹೋರಾಟವೇ ಆಗಿತ್ತು ಎಂದು ಕಂಗನಾ ಹೇಳಿಕೊಂಡಿದ್ದಾರೆ.

ಕಂಗನಾ ತಮ್ಮನ್ನು ತಾವು ಶಾರುಖ್​ ಖಾನ್​ಗೆ ಹೋಲಿಕೆ ಮಾಡಿಕೊಂಡಿದ್ದು, ಪರೋಕ್ಷವಾಗಿ ಶಾರುಖ್​ ಖಾನ್​ಗಿಂತ ತಾವು ಗ್ರೇಟ್​ ಎಂದು ಹೇಳಿಕೊಂಡಿದ್ದು ಅನೇಕರಿಗೆ ಇಷ್ಟವಾಗಿಲ್ಲ. ಇದನ್ನು ಸಾಕಷ್ಟು ಜನರು ಟ್ರೋಲ್​ ಮಾಡಿದ್ದಾರೆ. ಶಾರುಖ್​ ತಂದೆ-ತಾಯಿಗೂ ಚಿತ್ರರಂಗಕ್ಕೂ ಎಲ್ಲಿ ಸಂಬಂಧ ಇತ್ತು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಕೊರೊನಾ ವೈರಸ್​ ಎರಡನೇ ಅಲೆಗೆ ಸಿನಿಮಾ ರಂಗ ಮತ್ತೆ ತೊಂದರೆಗೆ ಸಿಲುಕಿದೆ. ಚಿತ್ರಮಂದಿರಗಳಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಕೆಲವೆಡೆ ಚಿತ್ರಮಂದಿರ ಮುಚ್ಚಲಾಗಿದೆ ಇದರಿಂದಾಗಿ ಅನೇಕ ಸಿನಿಮಾಗಳ ರಿಲೀಸ್​ ದಿನಾಂಕ ಮುಂದೂಡಲ್ಪಡುತ್ತಿದೆ. ಈ ಸಾಲಿಗೆ ಕಂಗನಾ ರಣಾವತ್​ ನಟನೆಯ ತಲೈವಿ ಸಿನಿಮಾ ಕೂಡ ಸೇರ್ಪಡೆ ಆಗಿತ್ತು. ಚಿತ್ರತಂಡದಿಂದ ಮುಂದಿನ ರಿಲೀಸ್​ ದಿನಾಂಕ ಯಾವಾಗ ಎಂಬುದು ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಕೊರೊನಾ ಪ್ರಕರಣಗಳು ಕಡಿಮೆ ಆದ ನಂತರದಲ್ಲಿ ಸಿನಿಮಾ ತೆರೆಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ರಾಮ ಜನ್ಮಭೂಮಿ ವಿವಾದ ಇತ್ಯರ್ಥ ಸಮಿತಿಯಲ್ಲಿ ಪಾಲ್ಗೊಳ್ಳಲು ಶಾರುಖ್​ ಖಾನ್​ಗೂ ಇತ್ತು ಆಹ್ವಾನ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ