ರಾಮ ಜನ್ಮಭೂಮಿ ವಿವಾದ ಇತ್ಯರ್ಥ ಸಮಿತಿಯಲ್ಲಿ ಪಾಲ್ಗೊಳ್ಳಲು ಶಾರುಖ್​ ಖಾನ್​ಗೂ ಇತ್ತು ಆಹ್ವಾನ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ಇಂದು ನಿವೃತ್ತರಾದ ಎಸ್.ಎ.ಬೋಬ್ಡೆ ಅವರ ವಿದಾಯ​ ಸಮಾರಂಭದಲ್ಲಿ ಸುಪ್ರೀಂಕೋರ್ಟ್​ ಬಾರ್​ ಅಸೋಸಿಯೇಷನ್​ ಮುಖ್ಯಸ್ಥ ವಿಕಾಸ್​ ಸಿಂಗ್​ ಈ ವಿಚಾರ ಬಹಿರಂಗಪಡಿಸಿದ್ದಾರೆ.

ರಾಮ ಜನ್ಮಭೂಮಿ ವಿವಾದ ಇತ್ಯರ್ಥ ಸಮಿತಿಯಲ್ಲಿ ಪಾಲ್ಗೊಳ್ಳಲು ಶಾರುಖ್​ ಖಾನ್​ಗೂ ಇತ್ತು ಆಹ್ವಾನ
ಶಾರುಖ್​ ಖಾನ್​
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 23, 2021 | 9:58 PM

ಹಲವು ದಶಕಗಳ ರಾಮ ಜನ್ಮಭೂಮಿ ವಿವಾದಕ್ಕೆ 2019ರಲ್ಲಿ ತೆರೆ ಬಿದ್ದಿತ್ತು. ರಾಮ ಜನ್ಮಭೂಮಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ನ್ಯಾಯಪೀಠದಲ್ಲಿ ನ್ಯಾಯಮೂರ್ತಿ ಎಸ್.​ಎ. ಬೋಬ್ಡೆ ಕೂಡ ಇದ್ದರು. ಈ ವಿವಾದ ಇತ್ಯರ್ಥ ಮಾಡಲು ರಚಿಸಲಾದ ಮಧ್ಯಸ್ಥಿಕೆ ಸಮಿತಿಯಲ್ಲಿ ಬಾಲಿವುಡ್​ ನಟ ಶಾರುಖ್​ಖಾನ್​ ಅವರನ್ನು ಸೇರಿಸಿಕೊಳ್ಳುವ ಆಲೋಚನೆ ಬೋಬ್ಡೆ ಅವರದ್ದಾಗಿತ್ತಂತೆ. ಇದಕ್ಕೆ ಶಾರುಖ್​ ಕೂಡ ಆಸಕ್ತಿ ತೋರಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಇದು ನೆರವೇರಲಿಲ್ಲ

ಬೋಬ್ಡೆ ಅವರು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ನಿವೃತ್ತಿ ಹೊಂದಿದ್ದಾರೆ. ಕೊರೊನಾ ವೈರಸ್​ ಹೆಚ್ಚುರತ್ತಿರುವುದರಿಂದ ವರ್ಚುವಲ್​ ಸಮಾರಂಭದ​ ಮೂಲಕ ಅವರಿಗೆ ವಿದಾಯ ಹೇಳಲಾಗಿದೆ. ಈ ವಿದಾಯ​ ಸಮಾರಂಭದಲ್ಲಿ ಸುಪ್ರೀಂಕೋರ್ಟ್​ ಬಾರ್​ ಅಸೋಸಿಯೇಷನ್​ ಮುಖ್ಯಸ್ಥ ವಿಕಾಸ್​ ಸಿಂಗ್​ ಈ ವಿಚಾರ ಬಿಚ್ಚಿಟ್ಟಿದ್ದಾರೆ.

ಅಯೋಧ್ಯೆ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಸಮಿತಿ ಒಂದನ್ನು ರಚಿಸಲು ಸುಪ್ರೀಂಕೋರ್ಟ್ ನಿರ್ಧರಿಸಿತ್ತು​. ಈ ಕಮಿಟಿಯಲ್ಲಿ ಪಾಲ್ಗೊಳ್ಳಲು ಶಾರುಖ್​ ಖಾನ್​ ಅವರಿಗೆ ಆಸಕ್ತಿ ಇದೆಯೇ ಎಂಬುದನ್ನು ವಿಚಾರಿಸಿ ಎಂದು ಬೋಬ್ಡೆ ನನಗೆ ಸೂಚಿಸಿದ್ದರು. ನಾನು ಶಾರುಖ್​ ಬಳಿ ಮಾತನಾಡಿದೆ. ಅವರು ಖುಷಿಪಟ್ಟರು. ಆದರೆ, ಕೊನೇ ಕ್ಷಣದಲ್ಲಿ ಇದು ನೆರವೇರಲಿಲ್ಲ ಎಂದು ವಿಕಾಸ್​ ಸಿಂಗ್​ ತಿಳಿಸಿದ್ದಾರೆ.

ಅಯೋಧ್ಯೆ ವಿವಾದ ಬಗೆ ಹರಿಸಲು ಸುಪ್ರೀಂಕೋರ್ಟ್​ ಸಮಿತಿ ಒಂದನ್ನು ರಚನೆ ಮಾಡಿತ್ತು. ಈ ಸಮಿತಿಯಲ್ಲಿ ಎಫ್​ಎಂಐ ಕಲಿಫುಲ್ಲಾ, ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್​ ಹಾಗೂ ಹಿರಿಯ ವಕೀಲ ಶ್ರೀರಾಮ್​ ಪಾಂಚು ಇದ್ದರು. ಆದರೆ, ಮಧ್ಯಸ್ಥಿಕೆ ಯಶಸ್ವಿಯಾಗದ ಕಾರಣ, ಸುಪ್ರೀಂಕೋರ್ಟ್​ ತಾನೇ ಪ್ರಕರಣವನ್ನು ಕೈಗೆತ್ತಿಕೊಂಡು ತೀರ್ಪು ನೀಡಿತ್ತು.

2019ರಲ್ಲಿ ಸುಪ್ರೀಂಕೋರ್ಟ್​ ರಾಮ ಜನ್ಮಭೂಮಿ ಬಗ್ಗೆ ಮಹತ್ವದ ತೀರ್ಪೊಂದನ್ನು ನೀಡಿತ್ತು. ವಿವಾದಿತ ಜಾಗವನ್ನು ರಾಮ ಮಂದಿರ ನಿರ್ಮಾಣ ಮಾಡಲು ಹಸ್ತಾಂತರ ಮಾಡಲಾಗಿತ್ತು ಹಾಗೂ ಮಸೀದಿ ನಿರ್ಮಾಣ ಮಾಡಲು ಪ್ರತ್ಯೇಕ ಜಾಗ ನೀಡಲಾಗಿತ್ತು.

ಇದನ್ನೂ ಓದಿ: ಸಂಸ್ಕೃತವನ್ನು ದೇಶದ ಅಧಿಕೃತ ಭಾಷೆಯಾಗಿಸುವ ಇಚ್ಛೆ ಅಂಬೇಡ್ಕರ್ ಅವರಿ​ಗಿತ್ತು: ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಬೋಬ್ಡೆ

ಇದನ್ನೂ ಓದಿ: IPL 2021: ಚೆನ್ನೈ- ಕೋಲ್ಕತ್ತಾ ನಡುವೆ ಇಂದು 25ನೇ ಐಪಿಎಲ್ ಪಂದ್ಯ .. ಶಾರುಖ್​ ತಂಡದೆದುರು ಧೋನಿ ತಂಡದ್ದೆ ಮೇಲುಗೈ!