AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಬಿಕ್ಕಟ್ಟು: ಜರ್ಮನಿಯಿಂದ 23 ಆಮ್ಲಜನಕ ಉತ್ಪಾದನಾ ಘಟಕಗಳ ಏರ್​ಲಿಫ್ಟ್​ಗೆ ಮುಂದಾದ ಭಾರತ

ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ದೇಶದಲ್ಲಿ ಕೊವಿಡ್-19 ಸೋಂಕು ಸೃಷ್ಟಿಸಿರುವ ತಲ್ಲಣದ ಹಿನ್ನೆಲೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ಮೂರು ಸೇನಾ ಪಡೆಗಳಿಗೆ ಮತ್ತು ಇತರ ರಕ್ಷಣಾ ಸಂಸ್ಥೆಗಳಿಗೆ ತುರ್ತು ಆರ್ಥಿಕ ಅಧಿಕಾರವನ್ನು ನೀಡಿದ 4 ದಿನಗಳ ನಂತರ ಅವರ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ.

ಕೊವಿಡ್ ಬಿಕ್ಕಟ್ಟು: ಜರ್ಮನಿಯಿಂದ 23 ಆಮ್ಲಜನಕ ಉತ್ಪಾದನಾ ಘಟಕಗಳ ಏರ್​ಲಿಫ್ಟ್​ಗೆ ಮುಂದಾದ ಭಾರತ
ಆಕ್ಸಿಜನ್ ಟ್ಯಾಂಕರ್​ಗಳನ್ನು ಏರ್​ಲಿಫ್ಟ್ ಮಾಡಲು ಭಾರತೀಯ ವಾಯುಪಡೆಯ ನೆರವು ಪಡೆಯಲಾಗಿದೆ.
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Apr 23, 2021 | 9:52 PM

ನವದೆಹಲಿ: ವೈದ್ಯಕೀಯ ಬಳಕೆಯ ಆಮ್ಲಜನಕ (ಮೆಡಿಕಲ್ ಆಕ್ಸಿಜನ್) ತೀವ್ರ ಅಭಾವ ದೇಶದಲ್ಲಿ ತಲೆದೋರಿರುವುದರಿಂದ, ಜರ್ಮನಿಯಿಂದ 23 ಆಮ್ಲಜನಕ ಉತ್ಪದನಾ ಘಟಕಗಳನ್ನು ವಿಮಾನಗಳ ಮೂಲಕ ಭಾರತಕ್ಕೆ ಏರ್​ಲಿಫ್ಟ್ ಮಾಡುವ ನಿರ್ಧಾರವನ್ನು ಭಾರತದ ರಕ್ಷಣಾ ಸಚಿವಾಲಯ ತೆಗೆದುಕೊಂಡಿರುವುದು ಅಧಿಕೃತ ಮೂಲಗಳಿಂದ ಗೊತ್ತಾಗಿದೆ. ಈ ಘಟಕಗಳು ಪ್ರತಿ ನಿಮಿಷಕ್ಕೆ 40 ಲೀಟರ್ ಮತ್ತು ಪ್ರತಿ ಗಂಟೆಗೆ 2,400 ಲೀಟರ್​ನಷ್ಟು ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಜರ್ಮನಿಯಿಂದ ಸ್ಥಳಾಂತರಗೊಳ್ಳುವ ಆಮ್ಲಜನಕ ಘಟಕಗಳನ್ನು ಕೊವಿಡ್​-19 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆ ಆಸ್ಪತ್ರೆಗಳಲ್ಲಿ (ಎಎಫ್​ಎಮ್​ಎಸ್​) ನಿಯೋಜಿಸಲಾಗುವುದೆಂದು ರಕ್ಷಣಾ ಇಲಾಖೆಯ ಪ್ರಧಾನ ಭಾತ್ಮೀದಾರ ಎ.ಭರತ್ ಭೂಷಣ ಬಾಬು ಹೇಳಿದರು.

ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ದೇಶದಲ್ಲಿ ಕೊವಿಡ್-19 ಸೋಂಕು ಸೃಷ್ಟಿಸಿರುವ ತಲ್ಲಣದ ಹಿನ್ನೆಲೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ಮೂರು ಸೇನಾ ಪಡೆಗಳಿಗೆ ಮತ್ತು ಇತರ ರಕ್ಷಣಾ ಸಂಸ್ಥೆಗಳಿಗೆ ತುರ್ತು ಆರ್ಥಿಕ ಅಧಿಕಾರವನ್ನು ನೀಡಿದ 4 ದಿನಗಳ ನಂತರ  ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ.

‘ಜರ್ಮನಿಯಿಂದ 23 ಸಂಚಾರಿ ಆಕ್ಸಿಜನ್ ಉತ್ಪಾದನೆ ಘಟಕಗಳನ್ನು ವಿಮಾನಗಳ ಮೂಲಕ ಭಾರತಕ್ಕೆ ತರಲಾಗುವುದು. ಅವುಗಳನ್ನು ಕೊವಿಡ್-19 ಸೋಂಕಿತರಿಗೆ ಚಿಕಿತ್ಸೆ ಒದಗಿಸುತ್ತಿರುವ ಎಎಫ್​ಎಮ್​ಎಸ್​ ಆಸ್ಪತ್ರೆಗಳಲ್ಲಿ ನಿಯೋಜಿಸಲಾಗುವುದು ಎಂದು ಬಾಬು ಹೇಳಿದರು. ಒಂದು ವಾರದ ಅವಧಿಯಲ್ಲಿ ಘಟಕಗಳು ಭಾರತಕ್ಕೆ ಬರಲಿವೆ’ ಎಂದು ಬಾಬು ಹೇಳಿದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತಾಡಿದ ಮತ್ತೊಬ್ಬ ಅಧಿಕಾರಿಯು, ಆಮ್ಲಜನಕ ಘಟಕಗಳನ್ನು ಜರ್ಮನಿಯಿಂದ ತರಲು ಭಾರತೀಯ ವಾಯುದಳದ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದ್ದು ಕಾಗದ ಪತ್ರಗಳ ಕೆಲಸ ಮುಗಿದ ಕೂಡಲೇ ವಿಮಾನಗಳು ಜರ್ಮನಿಗೆ ಹಾರಲಿವೆ ಎಂದು ಹೇಳಿದರು. ಜರ್ಮನಿಯಲ್ಲದೆ ಬೇರೆ ದೇಶಗಳಿಂದಲೂ ಆಮ್ಲಜನಕ ಘಟಕಗಳನ್ನು ತರುವ ಯೋಜನೆ ಇದೆಯೆಂದು ಅವರು ಹೇಳಿದರು.

ಈ ಘಟಕಗಳು ಅನುಕೂಲಕರವಾಗಿದ್ದು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಕೊಂಡೊಯ್ಯಬಹುದು, ಎಂದು ಬಾಬು ಹೇಳಿದರು. ಕೊರೊನಾ ವೈರಸ್​ನ ಎರಡನೇ ಅಲೆಯಿಂದ ಭಾರತ ತಲ್ಲಣಗೊಂಡಿದೆ. ದೇಶದಾದ್ಯಂತ ಅನೇಕ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಲಿಂಡರ್​ಗಳ ತೀವ್ರ ಅಭಾವ ತಲೆದೋರಿದೆ. ಸೋಂಕಿತರಿಗೆ ಬೆಡ್​ ಸಹ ಸಿಗದಂಥ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಶುಕ್ರವಾರ ದೊರಕಿರುವ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 3.32 ಲಕ್ಷ ಹೊಸ ಕೊರೊನಾ ವೈರಸ್​ ಪ್ರಕರಣಗಳು ದಾಖಲಾಗಿದ್ದು 2,263 ಜನರನ್ನು ಮಹಾಮಾರಿ ಬಲಿ ತೆಗೆದುಕೊಂಡಿದೆ.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ 26,962 ಮಂದಿಗೆ ಕೊರೊನಾ ಸೋಂಕು, 190 ಸಾವು

ಇದನ್ನೂ ಓದಿ: Explainer: ಕೊವಿಡ್ ಚಿಕಿತ್ಸೆಗಾಗಿ ಸ್ಟೆಪ್ ಡೌನ್ ಆಸ್ಪತ್ರೆ; ಯಾರು ಕೊಡ್ತಾರೆ ಚಿಕಿತ್ಸೆ? ಎಷ್ಟಿರುತ್ತೆ ದರ? ದಾಖಲಾಗುವುದು ಹೇಗೆ?

Published On - 8:43 pm, Fri, 23 April 21

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!