Explainer: ಕೊವಿಡ್ ಚಿಕಿತ್ಸೆಗಾಗಿ ಸ್ಟೆಪ್ ಡೌನ್ ಆಸ್ಪತ್ರೆ; ಯಾರು ಕೊಡ್ತಾರೆ ಚಿಕಿತ್ಸೆ? ಎಷ್ಟಿರುತ್ತೆ ದರ? ದಾಖಲಾಗುವುದು ಹೇಗೆ?

Step Down Hospitals: ಸ್ಟೆಪ್ ಡೌನ್ ಆಸ್ಪತ್ರೆ ಎಂದರೆ  ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಷ್​ಮೆಂಟ್ಸ್ ಕಾಯ್ದೆಯಡಿಯಲ್ಲಿ ನೋಂದಣಿ ಆಗಿರುವ ಆಸ್ಪತ್ರೆಗಳು ಹತ್ತಿರದಲ್ಲಿರುವ ಹೋಟೆಲ್ ಗಳ ಸಹಯೋಗದೊಂದಿಗೆ ವೈದ್ಯಕೀಯ ಸೌಲಭ್ಯವನ್ನು ಪೂರೈಸುವುದಾಗಿದೆ.

Explainer: ಕೊವಿಡ್ ಚಿಕಿತ್ಸೆಗಾಗಿ ಸ್ಟೆಪ್ ಡೌನ್ ಆಸ್ಪತ್ರೆ; ಯಾರು ಕೊಡ್ತಾರೆ ಚಿಕಿತ್ಸೆ? ಎಷ್ಟಿರುತ್ತೆ ದರ? ದಾಖಲಾಗುವುದು ಹೇಗೆ?
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Apr 23, 2021 | 7:33 PM

ಬೆಂಗಳೂರು: ಕರ್ನಾಟಕದಲ್ಲಿ ಕೊವಿಡ್ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ನೀಗಿಸಲು ರಾಜ್ಯ ಸರ್ಕಾರ ಸ್ಟೆಪ್ ಡೌನ್ ಆಸ್ಪತ್ರೆ ಸ್ಥಾಪಿಸಲು ಅನುಮತಿ ನೀಡಿದೆ. ಕೊವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳು ಸಮೀಪದ ಹೋಟೆಲ್​ಗಳ ಸಹಯೋಗದೊಂದಿಗೆ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಸ್ಥಾಪಿಸಬಹುದಾಗಿದೆ.

ಏನಿದು ಸ್ಟೆಪ್ ಡೌನ್ ಆಸ್ಪತ್ರೆ ಸ್ಟೆಪ್ ಡೌನ್ ಆಸ್ಪತ್ರೆ ಎಂದರೆ  ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್​ಮೆಂಟ್ಸ್ ಕಾಯ್ದೆಯಡಿಯಲ್ಲಿ ನೋಂದಣಿ ಆಗಿರುವ ಆಸ್ಪತ್ರೆಗಳು ಹತ್ತಿರದಲ್ಲಿರುವ ಹೋಟೆಲ್​ಗಳ ಸಹಯೋಗದೊಂದಿಗೆ ವೈದ್ಯಕೀಯ ಸೌಲಭ್ಯವನ್ನು ಪೂರೈಸುವುದಾಗಿದೆ. ಹೋಟೆಲ್ ಕೋಣೆಗಳಲ್ಲಿರುವ ಹಾಸಿಗೆಗಳನ್ನು ಆಸ್ಪತ್ರೆಯಲ್ಲಿರುವಂತೆ ವ್ಯವಸ್ಥಿತವಾಗಿರಿಸಲಾಗುವುದು. ಇಲ್ಲಿ ದಾಖಲಾಗುವ ರೋಗಿಗಳಿಗೆ ಸ್ಟೆಪ್ ಡೌನ್ ಆಸ್ಪತ್ರೆ ಸ್ಥಾಪಿಸಿದ ಆಸ್ಪತ್ರೆಯ ವೈದ್ಯರು, ನರ್ಸ್ ಮತ್ತು ವೈದ್ಯಕೀಯ ಸಿಬ್ಬಂದಿಗಳು ಶುಶ್ರೂಷೆ ನೀಡುತ್ತಾರೆ.

ಕರ್ನಾಟಕದ ಸ್ಟೆಪ್-ಡೌನ್ ಆಸ್ಪತ್ರೆಗಳಲ್ಲಿ ಯಾರು ದಾಖಲಾಗಬಹುದು? ಕರ್ನಾಟಕದ ಯಾವುದೇ ಸ್ಟೆಪ್-ಡೌನ್ ಆಸ್ಪತ್ರೆಗೆ ದಾಖಲು ಮಾಡಲು, ಆರ್‌ಟಿ-ಪಿಸಿಆರ್ ಪರೀಕ್ಷೆಯ ನಂತರ ಪಡೆದ ಕೊವಿಡ್ -19 ಪಾಸಿಟಿವ್ ಪ್ರಮಾಣಪತ್ರವನ್ನು ರೋಗಿಗೆ ನೀಡಲು ಸರ್ಕಾರ ಕಡ್ಡಾಯಗೊಳಿಸಿದೆ. 100 ಡಿಗ್ರಿ ಫ್ಯಾರನ್‌ಹೀಟ್‌ಗಿಂತಲೂ ಹೆಚ್ಚು ಜ್ವರ, ತೀವ್ರ ಆಯಾಸ, ಕೆಮ್ಮು, ಉಸಿರಾಟದ ತೊಂದರೆ ಮತ್ತು ಶೇಕಡಾ 94 ಕ್ಕಿಂತ ಕಡಿಮೆ ರಕ್ತದ ಆಮ್ಲಜನಕದ ಮಟ್ಟ (ಎಸ್‌ಪಿಒ 2) ಇರುವ ರೋಗ ಲಕ್ಷಣಗಳು ಕಂಡು ಬಂದರೆ ಈ ಆಸ್ಪತ್ರೆಗಳಲ್ಲಿ ದಾಖಲಾಗಬಹುದು.

ಸ್ಟೆಪ್-ಡೌನ್ ಆಸ್ಪತ್ರೆಯಲ್ಲಿ ಯಾರಾದರೂ ನೇರವಾಗಿ ಕೊಠಡಿ ಕಾಯ್ದಿರಿಸಬಹುದೇ? ಇಲ್ಲ, ತರಬೇತಿ ಪಡೆದ ವೈದ್ಯರಿಂದ ವೈದ್ಯಕೀಯ ಮೌಲ್ಯಮಾಪನ ಮತ್ತು ಚಿಕಿತ್ಸೆಯ ನಂತರ ರೋಗಿಯನ್ನು ಸಂಬಂಧಪಟ್ಟ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತೆ. ರಾಜ್ಯದ ಕೊವಿಡ್ ನಿಯಮಾವಳಿ ಪ್ರಕಾರ ರೋಗಿಯು ಪ್ರತಿದಿನ ರೋಗ ತಪಾಸಣೆಗೊಳಪಟ್ಟಿರಬೇಕು. ವೈದ್ಯರು ನೀಡುವ ಚಿಕಿತ್ಸೆಯ ಪ್ರಿಸ್ಕ್ರಿಪ್ಷನ್ ಸಹ ಕಡ್ಡಾಯವಾಗಿದೆ. ಆಸ್ಪತ್ರೆಯಲ್ಲಿ ಕೊವಿಡ್ -19 ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುವ ರೋಗಿಗಳನ್ನು ಕೊವಿಡ್ ನಂತರದ ಆರೈಕೆ ಮತ್ತು ಮೇಲ್ವಿಚಾರಣೆ ಕೊಠಡಿಲ್ಲಿರಿಸಲಾಗುವುದು.

ಆಸ್ಪತ್ರೆಯಲ್ಲಿ ಚಿಕಿತ್ಸಾ ದರ ಹೇಗಿರುತ್ತದೆ? ಪ್ರತಿ ಸ್ಟೆಪ್-ಡೌನ್ ಆಸ್ಪತ್ರೆಯು ಅಲ್ಲಿರುವ ಹೋಟೆಲ್ ವ್ಯವಸ್ಥೆಗೆ ಅನುಗುಣವಾಗಿ ವಿಧಿಸಬಹುದಾದ ಗರಿಷ್ಠ ಮೊತ್ತವನ್ನು ರಾಜ್ಯ ಸರ್ಕಾರ ನಿಗದಿಪಡಿಸಿದೆ. ಎಕಾನಮಿ/ ಬಜೆಟ್ ಹೋಟೆಲ್‌ಗಳಾಗಿದ್ದರೆ ದಿನಕ್ಕೆ ಒಬ್ಬ ರೋಗಿಯಿಂದ ಗರಿಷ್ಠ 8,000 ರೂ. ಶುಲ್ಕ ವಿಧಿಸಲು ಅವಕಾಶವಿದೆ. ಅದೇ ವೇಳೆ ತ್ರೀ-ಸ್ಟಾರ್ ಮತ್ತು ಪಂಚತಾರಾ ಹೋಟೆಲ್‌ಗಳಲ್ಲಿನ ಕೊಠಡಿಗಳಿಗೆ ನಿಗದಿಪಡಿಸಿದ ದರ ಕ್ರಮವಾಗಿ 10,000 ಮತ್ತು 12,000 ರೂ.

ರೋಗಿಗಳಿಗೆ ಆಹಾರ ವ್ಯವಸ್ಥೆ ಇದೆಯೇ? ಹೌದು. ಕೊವಿಡ್ -19 ಸೂಕ್ತ ನಡವಳಿಕೆಯನ್ನು ಕಾಪಾಡಿಕೊಂಡು ರೋಗಿಗಳಿಗೆ ತಮ್ಮ ಹಾಸಿಗೆಯ ಪಕ್ಕದಲ್ಲಿ ಮತ್ತು ಸೂಕ್ತ ಸಮಯದಲ್ಲಿ ಆಹಾರವನ್ನು ಒದಗಿಸಲು ಸ್ಟೆಪ್-ಡೌನ್ ಆಸ್ಪತ್ರೆಗಳಿಗೆ ನಿರ್ದೇಶಿಸಲಾಗಿದೆ. ಅನಗತ್ಯ ಸಂಪರ್ಕವನ್ನು ತಪ್ಪಿಸಲು ವೆಬ್ ಆಧಾರಿತ ಆದೇಶ ವ್ಯವಸ್ಥೆಯನ್ನು (ordering system) ಅಳವಡಿಸಲು ಸೂಚಿಸಲಾಗಿದೆ.

ಸ್ಟೆಪ್-ಡೌನ್ ಆಸ್ಪತ್ರೆಯಲ್ಲಿ ಯಾವೆಲ್ಲ ಸೌಲಭ್ಯಗಳಿವೆ? ಪ್ರತಿ 50 ರೋಗಿಗಳಿಗೆ ಒಬ್ಬ ವೈದ್ಯರು ದಿನದ 24 ಗಂಟೆ ನೋಡಿಕೊಳ್ಳಲು ಕರ್ನಾಟಕ ಸರ್ಕಾರ ಸ್ಟೆಪ್-ಡೌನ್ ಆಸ್ಪತ್ರೆಗಳ ಉಸ್ತುವಾರಿ ಹೊಂದಿರುವ ಪ್ರತಿ ಹಬ್ ಆಸ್ಪತ್ರೆಗೆ ನಿರ್ದೇಶನ ನೀಡಿದೆ. ಏತನ್ಮಧ್ಯೆ, 10 ಮೇಲ್ವಿಚಾರಣೆ ಮಾಡಲು ಮತ್ತು ಔಷಧಿಗಳನ್ನು ನೀಡಲು 10 ರೋಗಿಗಳಿಗೆ ಒಬ್ಬ ದಾದಿಯನ್ನು ನಿಯೋಜಿಸಬೇಕು. ಪ್ರತಿ ನರ್ಸ್ ಜತೆ ಸಹಾಯಕ ವೈದ್ಯಕೀಯ ಸಿಬ್ಬಂದಿ ಇರಲಿದ್ದಾರೆ.

ರಾತ್ರಿ ಹೊತ್ತು ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ತಮ್ಮ ವಾಸಸ್ಥಳಗಳಿಗೆ ಪ್ರಯಾಣಿಸಲು ವಾಹನ ಕಡ್ಡಾಯವಾಗಿ ನೀಡಬೇಕು ರೋಗಿಗಳು ಹಬ್ ಆಸ್ಪತ್ರೆಗೆ ಮತ್ತು ಅಲ್ಲಿಂದ ಹೊರಗೆ ಹೋಗಲು ಸಹಾಯಕ್ಕಾಗಿ ಆಂಬ್ಯುಲೆನ್ಸ್ ಅನ್ನು ಸ್ಟೆಪ್-ಡೌನ್ ಆಸ್ಪತ್ರೆಯಲ್ಲಿ (ಚಾಲಕನೊಂದಿಗೆ) 24 ಗಂಟೆಗಳ ಕಾಲ ನಿಲ್ಲಿಸಬೇಕು.

ರೋಗಿಗಳ ಮಾನಸಿಕ ಆರೋಗ್ಯದ ಮೇಲೆ ನಿಗಾ ಇರಿಸಲಾಗುತ್ತಿದೆಯೇ? ಹೌದು. ಇಲ್ಲಿ ದಾಖಲಾದ ರೋಗಿಗಳಿಗೆ ಉಸಿರಾಟದ ವ್ಯಾಯಾಮವನ್ನು ಉತ್ತೇಜಿಸಲು ಫಿಸಿಯೊ ಥೆರಪಿ ಸ್ಟ್ ಕಡ್ಡಾಯವಾಗಿ ನೇಮಿಸಲು ಸ್ಟೆಪ್-ಡೌನ್ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ರೋಗಿಗಳಿಗೆ ಸಮಾಲೋಚನೆ ನಡೆಸಿ ಪರಿಹಾರ ಸೂಚಿಸಲು ಮನಶ್ಶಾಸ್ತ್ರಜ್ಞರು ಇರಬೇಕು ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ:  ಆಕ್ಸಿಜನ್​, ರೆಮ್​​ಡೆಸಿವರ್​ ಉತ್ಪಾದನೆ ಹೆಚ್ಚಿಸಲಾಗ್ತಿದೆ ಮತ್ತು ಆಮದು ಮಾಡಿಕೊಳ್ಳಲಾಗ್ತಿದೆ ಎಂದು ಮೋದಿ ಹೇಳಿದ್ದಾರೆ: ಡಾ.ಕೆ.ಸುಧಾಕರ್ 

(Karnataka Government set up Step Down hospitals for covid patients Who can get admitted in this hospitals)

Published On - 6:44 pm, Fri, 23 April 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್