ಜೀವನದಲ್ಲಿ ಜಿಗುಪ್ಸೆ ಬಂದಿದೆ; ವೈಷ್ಣವಿ ಮುಂದೆ ಅಳಲು ತೋಡಿಕೊಂಡ ಮಂಜು
ಹೆಣ್ಣುಮಕ್ಕಳು ನನ್ನ ಹಿಂದೆಯೇ ಸುತ್ತೋದು ಎನ್ನುವ ರೀತಿ ಮಂಜು ಬಿಂಬಿಸುತ್ತಲೇ ಬಂದಿದ್ದಾರೆ. ಈಗ ಆಗಿದ್ದೂ ಅದೇ. ಮಂಜು ಸ್ನಾನಕ್ಕೆಂದು ಬಾತ್ರೂಂಗೆ ಹೊರಟಿದ್ದರು. ಆಗ ಈ ಪ್ರಸಂಗ ನಡೆದಿದೆ.
ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ಆರಂಭದ ದಿನದಿಂದ ಎಲ್ಲರನ್ನೂ ಸೆಳೆಯೋ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ ಕೂಡ. ದಿವ್ಯಾ ಜತೆ ಮಂಜು ಆಪ್ತರಾಗಿದ್ದಾರೆ. ಅವರು ಮನೆಯಲ್ಲಿ ಸ್ವಲ್ಪ ಡಲ್ ಇದ್ದಂತೆ ಕಂಡರೂ ಎಲ್ಲರ ಜತೆಯೂ ಬೆರೆಯಲು ಪ್ರಯತ್ನಿಸುತ್ತಿದ್ದಾರೆ. ಈಗ ವೈಷ್ಣವಿ ಗೌಡ ಎದುರು ಮಂಜು ತಮ್ಮ ಕಷ್ಟ ಹೇಳಿಕೊಂಡಿದ್ದು, ಜೀವನದಲ್ಲಿ ಜಿಗುಪ್ಸೆ ಬಂದು ಹೋಗಿದೆ ಎಂದಿದ್ದಾರೆ.
ಹೆಣ್ಣುಮಕ್ಕಳು ಯಾವಾಗಲೂ ನನ್ನ ಹಿಂದೆಯೇ ಸುತ್ತೋದು ಎನ್ನುವ ರೀತಿ ಮಂಜು ಬಿಂಬಿಸುತ್ತಲೇ ಬಂದಿದ್ದಾರೆ. ಈಗ ಆಗಿದ್ದೂ ಅದೇ. ಮಂಜು ಸ್ನಾನಕ್ಕೆಂದು ಬಾತ್ರೂಂಗೆ ಹೊರಟಿದ್ದರು. ಈ ವೇಳೆ ಅಲ್ಲಿಗೆ ವೈಷ್ಣವಿ ಕೂಡ ಬಂದರು. ನನಗೆ ಫ್ರಸ್ಟ್ರೇಷನ್ ಆಗ್ತಿದೆ. ನೆಮ್ಮದಿಯಿಂದ ಸ್ನಾನ ಮಾಡಲೂ ಕೊಡುವುದಿಲ್ಲ. ನಾನು ಎಲ್ಲೇ ಹೋದರು ಹೆಣ್ಣುಮಕ್ಕಳು ಅಲ್ಲಿಗೆ ಬರುತ್ತಾರೆ ಎಂದರು ಮಂಜು.
ವೈಷ್ಣವಿ ಈ ಮಾತು ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ. ವೈಷ್ಣವಿ ನಗುತ್ತಿದ್ದಂತೆ ಮಂಜುಗೆ ಹೊಸ ಹುರುಪು ಬಂದಿದೆ. ಕೊರಗಿ ಕೊರಗಿ ಜೀವ ಬೀಡೋ ತರ ಆಗಿದ್ದೀನಿ. ಪರ್ಫ್ಯೂಮ್ ಹಾಕಿದಾಗ ಹುಡ್ಗೀರು ಬಂದು ಮುತ್ತಿಕೊಂಡಂತೆ ಮುತ್ತಿಕೊಳ್ಳುತ್ತಿದ್ದಾರೆ. ಇದನ್ನೆಲ್ಲ ನೋಡಿ ನೋಡಿ ಜೀವನದಲ್ಲಿ ಜಿಗುಪ್ಸೆ ಬಂದು ಹೋಗಿದೆ ಎಂದು ಮಂಜು ನಗುತ್ತಲೇ ಹೇಳಿದರು.
ನಾನು ಸುಂದರವಾಗಿರೋದು ತಪ್ಪಾ? ದೇವರು ಇಷ್ಟೊಂದು ಸೌಂದರ್ಯ ಕೊಟ್ಟಿರೋದೆ ತಪ್ಪಾ? ನನಗೆ ಕೊರಗಿ ಕೊರಗಿ ಸಾಕಾಗಿದೆ. ಹೆಣ್ಣುಮಕ್ಕಳಿಂದ ಹೊರಗೆ ತುಂಬಾನೇ ಕಷ್ಟ ಆಗ್ತಿತ್ತು. ಅದನ್ನು ಅವಾಯ್ಡ್ ಮಾಡಬೇಕು ಎಂದೇ ಇಲ್ಲಿಗೆ ಬಂದೆ. ಇಲ್ಲಿಯೂ ಹೆಣ್ಣುಮಕ್ಕಳ ಕಾಟ ಎಂದರು.
ಇದೇ ವೇಳೆ ಪ್ರಿಯಾಂಕಾ ತಿಮ್ಮೇಶ್ ಕೂಡ ಬಂದರು. ಆಗ ಮಂಜು, ಪ್ರಿಯಾಂಕಾ ನೀವು ಏನು ಮಾಡಿದ್ರೂ ನನ್ನನ್ನು ಪಡೆದುಕೊಳ್ಳೋಕೆ ಆಗಲ್ಲ ಎಂದು ನಕ್ಕರು.
ಇದನ್ನೂ ಒದಿ: Bigg Boss Kannada: ಮಂಜು ಪಾವಗಡ ಅಲ್ಲ, ಬಿಗ್ ಬಾಸ್ ಗೆಲ್ಲೋದು ಇವರು!
ವೈಷ್ಣವಿ ಜತೆ ರಘು ಗೌಡ ಕ್ಲೋಸ್ ಆಗಿರೋ ಬಗ್ಗೆ ಅವರ ಪತ್ನಿ ವಿದ್ಯಾಶ್ರೀ ಹೇಳಿದ್ದೇನು?