AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಷ್ಣವಿ ಜತೆ ರಘು ಗೌಡ ಕ್ಲೋಸ್​ ಆಗಿರೋ ಬಗ್ಗೆ ಅವರ ಪತ್ನಿ ವಿದ್ಯಾಶ್ರೀ ಹೇಳಿದ್ದೇನು?

ಬಿಗ್​ ಬಾಸ್​ ಮನೆಯಲ್ಲಿ ರಘು ಗೌಡ ಹಾಗೂ ವೈಷ್ಣವಿ ಗೌಡ ಹೆಚ್ಚು ಆಪ್ತರಾಗಿದ್ದಾರೆ. ಅವರ ನಡುವೆ ಉತ್ತಮ ಗೆಳೆತನವಿದೆ. ಈ ವಿಚಾರ ಮನೆಯಲ್ಲಿ ಅನೇಕ ಬಾರಿ ಚರ್ಚೆ ಕೂಡ ಆಗಿದೆ.

ವೈಷ್ಣವಿ ಜತೆ ರಘು ಗೌಡ ಕ್ಲೋಸ್​ ಆಗಿರೋ ಬಗ್ಗೆ ಅವರ ಪತ್ನಿ ವಿದ್ಯಾಶ್ರೀ ಹೇಳಿದ್ದೇನು?
ರಘು ಗೌಡ-ವಿದ್ಯಾಶ್ರೀ
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​|

Updated on: Apr 25, 2021 | 4:00 PM

Share

ರಘು ಗೌಡ ಬಿಗ್​ ಬಾಸ್​ ಮನೆಯಲ್ಲಿ ಹಾಯಾಗಿದ್ದಾರೆ. ಆರಂಭದಲ್ಲಿ ಮನೆಯನ್ನು ನೆನಪು ಮಾಡಿಕೊಂಡು ಅಳುತ್ತಿದ್ದ ಅವರು ನಂತರ ಸಂಪೂರ್ಣ ಬದಲಾಗಿದ್ದಾರೆ. ಇತ್ತೀಚೆಗೆ ಅವರು ಹೆಂಡತಿ ಹೆಸರನ್ನೇ ಮರೆತು ಹೋಗಿದ್ದರು ಎಂಬ ವಿಚಾರ ಹೇಳಿಕೊಂಡು ಶುಭಾ ಪೂಂಜಾ ನಕ್ಕಿದ್ದರು. ಈಗ ಎಂಟನೇ ವಾರದ ಕ್ಯಾಪ್ಟನ್​ ಆಗಿರುವುದಕ್ಕೆ ರಘುಗೆ ಹೆಂಡತಿ ವಿದ್ಯಾಶ್ರೀ ವಾಯ್ಸ್​ ಕೇಳಿಸಿದೆ. ಈ ವೇಳೆ ರಘುಗೆ ಮಾತಲ್ಲೇ ಅವರು ತಿವಿದಿದ್ದಾರೆ.

ಎಂಟನೇ ವಾರದ ಕ್ಯಾಪ್ಟನ್ಸಿ ಟಾಸ್ಕ್ ಶನಿವಾರ (ಎಪ್ರಿಲ್​ 24) ನಡೆದಿದೆ. ಗಾರ್ಡನ್ ಏರಿಯಾದಲ್ಲಿ ಹೂವಿನ ಮಳೆ ಆಗುತ್ತದೆ. ಸ್ಪರ್ಧಿಗಳು ಹೂವನ್ನು ಸಂಗ್ರಹಿಸಬೇಕು, ಹೆಚ್ಚು ಹೂವಿದ್ದವರು ಕ್ಯಾಪ್ಟನ್ ಆಗುತ್ತಾರೆ. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿದ್ದ ಮಂಜು, ರಾಜೀವ್, ರಘು ಗೌಡ ಹಾಗೂ ಪ್ರಶಾಂತ್ ಹೂವನ್ನು ಸಂಗ್ರಹಿಸೋಕೆ ಮುಂದಾದರು. ನಂತರ ಇದಕ್ಕೆ ಮನೆಯವರ ಸಹಾಯ ಕೂಡ ಪಡೆಯಬಹುದು ಎನ್ನುವ ಆದೇಶ ಬಂತು. ಆಗ ಅರವಿಂದ್, ವೈಷ್ಣವಿ ಮೊದಲಾದವರು ರಘುಗೆ ಸಹಾಯ ಮಾಡಿದರು. ಕೊನೆಯಲ್ಲಿ ಅಚ್ಚರಿ ಎಂಬಂತೆ ಪ್ರಶಾಂತ್ ತಾವು ಸಂಗ್ರಹಿಸಿದ್ದ ಹೂವನ್ನು ರಘು ಗೌಡಗೆ ನೀಡಿದರು. ಈ ಮೂಲಕ ರಘು ಕ್ಯಾಪ್ಟನ್ ಆದರು.

ಕ್ಯಾಪ್ಟನ್​ ಆದ ಕೆಲವೇ ಹೊತ್ತಿಗೆ ರಘು ಪತ್ನಿ ಅವರ ವಾಯ್ಸ್​ ಮೆಸೇಜ್​ ಬಂತು. ಹಾಯ್ ರಘು ಹೇಗಿದ್ದೀಯಾ? ತುಂಬಾ ಚೆನ್ನಾಗಿ ಆಡುತ್ತಾ ಇದೀಯಾ. ಕ್ಯಾಪ್ಟನ್ಸಿಯನ್ನು ಉತ್ತಮವಾಗಿ ನಿಭಾಯಿಸು. ಕಿಚ್ಚನ ಚಪ್ಪಾಳೆ ಬಂದಿದ್ದು ಖುಷಿ ಆಯ್ತು. ನಿನ್ನ ಜತೆ ಜಗಳ ಆಡೋದನ್ನು ನಾನು ಮಿಸ್ ಮಾಡಿಕೊಳ್ಳುತ್ತಾ ಇದ್ದೇನೆ. ಬಿಗ್​ ಬಾಸ್​ ಮನೆಯಲ್ಲಿ ನಡೆಯುವುದನ್ನು ನಾನು ಸ್ಪೋರ್ಟೀವ್ ಆಗಿ ತೆಗೆದುಕೊಳ್ಳುತ್ತಿದ್ದೇನೆ. ಮಜಾ ಮಾಡು. ಹಾಯಾಗಿರು. ಬೇರೆಯವರನ್ನು ನಗಿಸು ಎಂದು ರಘುಗೆ ಹೇಳಿದರು.

ಕೊನೆಯಲ್ಲಿ ಮಜಾ ಮಾಡ್ಕೊಂಡು ಬಾ ಏನು ಅಭ್ಯಂತರವಿಲ್ಲ ಎಂದು ಹೇಳುವಾಗ ಅವರ ಟೋನ್​ ಸಂಪೂರ್ಣ ಬದಲಾಗಿತ್ತು. ಅದರಲ್ಲಿ ಸಣ್ಣ ಎಚ್ಚರಿಕೆ ಕೂಡ ಇತ್ತು. ಇದನ್ನು ಕೇಳಿದ ಮನೆಯವರು ನಕ್ಕರು.

ಬಿಗ್​ ಬಾಸ್​ ಮನೆಯಲ್ಲಿ ರಘು ಗೌಡ ಹಾಗೂ ವೈಷ್ಣವಿ ಗೌಡ ಹೆಚ್ಚು ಆಪ್ತರಾಗಿದ್ದಾರೆ. ಅವರ ನಡುವೆ ಉತ್ತಮ ಗೆಳೆತನವಿದೆ. ಈ ವಿಚಾರ ಮನೆಯಲ್ಲಿ ಅನೇಕ ಬಾರಿ ಚರ್ಚೆ ಕೂಡ ಆಗಿದೆ. ಈ ವಿಚಾರವನ್ನು ಪರೋಕ್ಷವಾಗಿ ಉಲ್ಲೇಖಿಸಿ ರಘು ಪತ್ನಿ ಹೀಗೆ ಹೇಳಿದ್ದಾರೆ.

ಇದನ್ನೂ ಓದಿ: ನಿಂಗೆ ಮರ್ಯಾದೆ ಇಲ್ವಾ, ನನ್ ಹಿಂದೆ ಬರಬೇಡ; ಬಿಗ್​ ಬಾಸ್​ ಚೆಲುವೆಗೆ ಮಂಜು ಹೀಗೆ ಹೇಳಿದ್ದೇಕೆ?