ನಿಂಗೆ ಮರ್ಯಾದೆ ಇಲ್ವಾ, ನನ್ ಹಿಂದೆ ಬರಬೇಡ; ಬಿಗ್​ ಬಾಸ್​ ಚೆಲುವೆಗೆ ಮಂಜು ಹೀಗೆ ಹೇಳಿದ್ದೇಕೆ?

Bigg Boss Kannada: ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಬಿಗ್​ ಬಾಸ್​ ಮನೆಯ ಒಂದು ಗಾಜಿನ ಲೋಟ ಒಡೆದು ಹಾಕಿದ್ದರು. ಅದಕ್ಕೆ ಬಿಗ್​ಬಾಸ್​ ಶಿಕ್ಷೆ ನೀಡಿದ್ದಾರೆ.

ನಿಂಗೆ ಮರ್ಯಾದೆ ಇಲ್ವಾ, ನನ್ ಹಿಂದೆ ಬರಬೇಡ; ಬಿಗ್​ ಬಾಸ್​ ಚೆಲುವೆಗೆ ಮಂಜು ಹೀಗೆ ಹೇಳಿದ್ದೇಕೆ?
ಈಗ ಬಿಗ್​ ಬಾಸ್​ ಗೆದ್ದ ನಂತರದಲ್ಲಿ ಮಂಜು ಅವರು ಶಿವರಾಜ್​ಕುಮಾರ್​ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿವರಾಜ್​ಕುಮಾರ್​ ‘ಮಂಜು ಭೇಟಿ ಮಾಡಿದ್ದು ಹಾಗೂ ಅವರು ಗೆಲುವು ಖುಷಿ ಕೊಟ್ಟಿದೆ’ ಎಂದಿದ್ದಾರೆ.
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Apr 25, 2021 | 2:23 PM

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬೇರೆ ಯಾವುದೇ ಮನರಂಜನೆ ಇಲ್ಲದ ಆ ದೊಡ್ಮನೆಯೊಳಗೆ ನಕ್ಕು ನಗಿಸುವ ಮೂಲಕ ಎಲ್ಲ ಸ್ಪರ್ಧಿಗಳಿಗೆ ಮಂಜು ಭರಪೂರ ಮನರಂಜನೆ ನೀಡುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಮಂಜು ಜೊತೆ ಯಾರೇ ಮಾತಿಗೆ ಕುಳಿತರೂ ಅಲ್ಲಿ ಕಾಮಿಡಿಗೆ ಕೊರತೆಯೇ ಇರುವುದಿಲ್ಲ. ಆ ಕಾರಣಕ್ಕಾಗಿಯೇ ಅವರು ಸತತ 8 ವಾರಗಳಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡು ಬರುತ್ತಿದ್ದಾರೆ. ದಿವ್ಯಾ ಸುರೇಶ್​ ಜೊತೆಗಿನ ಲವ್​ ಕಾರಣಕ್ಕೂ ಅವರು ಹೆಚ್ಚು ಸುದ್ದಿ ಆಗುತ್ತಾರೆ.

ಏ.24ರ ಎಪಿಸೋಡ್​ನಲ್ಲಿ ನಟಿ ವೈಷ್ಣವಿ ಗೌಡ ಅವರಿಗೆ ಮಂಜು ಹೇಳಿದ ಒಂದು ಮಾತು ಹೆಚ್ಚು ಹೈಲೈಟ್​ ಆಗುತ್ತಿದೆ. ‘ನಿನಗೇನು ಮಾನ ಮರ್ಯಾದೆ ಇಲ್ಲವಾ? ನನ್ನ ಹಿಂದಿಂದೆ ಬರಬೇಡ ಹೋಗು’ ಎಂದು ವೈಷ್ಣವಿಗೆ ಮಂಜು ಹೇಳಿದ್ದಾರೆ. ಇದರ ಹಿಂದೆ ಒಂದು ಇಂಟರೆಸ್ಟಿಂಗ್​ ಕಹಾನಿ ಇದೆ. ಮಂಜು ಈ ಮಾತನ್ನು ಸೀರಿಯಸ್​ ಆಗಿ ಹೇಳಿಲ್ಲ. ಬದಲಿಗೆ, ಬಿಗ್​ ಬಾಸ್​ ಮನೆಯಲ್ಲಿ ಒಂದು ಫನ್ನಿ ಘಟನೆ ನಡೆದಿದೆ.

ನಟಿ ವೈಷ್ಣವಿ ಅವರು ಬಿಗ್​ ಬಾಸ್​ ಮನೆಯ ಒಂದು ಗಾಜಿನ ಲೋಟ ಒಡೆದು ಹಾಕಿದ್ದರು. ಅದಕ್ಕೆ ಬಿಗ್​ಬಾಸ್​ ಶಿಕ್ಷೆ ನೀಡಿದ್ದಾರೆ. ಯಾವುದೇ ಲೋಟ ಅಥವಾ ಬಾಟಲಿಯನ್ನು ಬಳಸಿ ವೈಷ್ಣವಿ ನೀರು ಕುಡಿಯುವಂತಿಲ್ಲ. ಅವರಿಗೆ ನೀರು ಬೇಕು ಅನಿಸಿದಾಗ ಮನೆಯಲ್ಲಿ ಇರುವ ಯಾರಾದರೊಬ್ಬ ಸದಸ್ಯನಿಗೆ ಒಂದು ಡ್ಯಾನ್ಸ್​ ಸ್ಟೆಪ್​ ಹೇಳಿಕೊಡಬೇಕು. ಡ್ಯಾನ್ಸ್ ಕಲಿತು ತೋರಿಸುವ ಸದಸ್ಯನೇ ವೈಷ್ಣವಿಗೆ ಚಿಕ್ಕ ಲೋಟದಲ್ಲಿ ನೀರು ಕುಡಿಸಬೇಕು. ಏ.24ರ ಎಪಿಸೋಡ್​ನಲ್ಲಿ ಮಂಜುಗೆ ವೈಷ್ಣವಿ ಡ್ಯಾನ್ಸ್​ ಕಲಿಸಿದರು.

‘ಬಾ ನಿನಗೆ ನೀರು ಕುಡಿಸುತ್ತೇನೆ’ ಎಂದು ಮಂಜು ಮುಂದೆ ಸಾಗುತ್ತಿರುವಾಗ ಅವರನ್ನು ವೈಷ್ಣವಿ ಹಿಂಬಾಲಿಸಿದರು. ಆಗ ಮಂಜು ತಮಾಷೆಗೆ, ‘ನಿನಗೇನು ಮಾನ ಮರ್ಯಾದೆ ಇಲ್ಲವಾ? ಹಿಂದೆ ಹಿಂದೆ ಬರಬೇಡ ಹೋಗು’ ಎಂದು ಹೇಳಿದ್ದಾರೆ. ಈ ಮಾತು ಕೇಳಿ ಮನೆಮಂದಿಯಲ್ಲಾ ನಕ್ಕಿದ್ದಾರೆ. ‘ನೋಡಿ ಬಿಗ್​ ಬಾಸ್​, ನಾನು ಅಗ್ನಿಸಾಕ್ಷಿ ಹೀರೋಯಿನ್​ಗೆ ನೀರು ಕುಡಿಸಿಬಿಟ್ಟೆ’ ಎಂದು ಮಂಜು ಬೀಗಿದ್ದಾರೆ.

ಅಂದಹಾಗೆ, ವೈಷ್ಣವಿ ಈ ರೀತಿ ಶಿಕ್ಷೆ ಪಡೆದುಕೊಳ್ಳುತ್ತಿರುವುದು ಇದು ಎರಡನೇ ಬಾರಿ. ಕೆಲವೇ ದಿನಗಳ ಹಿಂದೆ ಲೋಟ ಒಡೆದು ಹಾಕಿದ್ದಕ್ಕಾಗಿ ಜೋಕ್​ ಹೇಳಬೇಕು ಎಂಬ ಶಿಕ್ಷೆಯನ್ನು ಅವರಿಗೆ ನೀಡಲಾಗಿತ್ತು. ಆಗಲೂ ಕೂಡ ಅವರು ಮನೆಯ ಸದಸ್ಯರಿಗೆ ಜೋಕ್​ ಹೇಳಿ ನಗಿಸಲು ಹರಸಾಹಸ ಪಟ್ಟಿದ್ದರು. ಈಗ ಡ್ಯಾನ್ಸ್​ ಹೇಳಿಕೊಡುವ ಶಿಕ್ಷೆ ಮುಂದುವರಿದಿದೆ.

ಇದನ್ನೂ ಓದಿ: Bigg Boss Kannada Elimination: ಎಂಟನೇ ವಾರ ಈ ಸ್ಪರ್ಧಿಯ ಬಿಗ್​ ಬಾಸ್​ ಪಯಣ ಅಂತ್ಯ?

ನನ್ನ ಬಾಯಿ ಬಚ್ಚಲು ಮನೆ ಇದ್ದಂಗೆ; ಮಂಜು ಪಾವಗಡ ಹೀಗೆ ಹೇಳಿದ್ದು ಯಾಕೆ?

(Bigg Boss Kannada: Manju Pavagada asks Vaishnavi Gowda not to follow him in BBK8)

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್