ನಂಗೆ ಒಂಥರಾ ಆಗ್ತಿದೆ; ಅರವಿಂದ್​ ಮಾಡಿದ ಸೇವೆ ನೋಡಿ ದಿವ್ಯಾ ಉರುಡುಗ ನಾಚಿ ನೀರಾದರು

ದಿವ್ಯಾ ಉರುಡುಗ ಅವರಿಗೆ ಬಿಗ್​ ಬಾಸ್​ ಮನೆಯಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ. ವೈದ್ಯರು ಅವರಿಗೆ ಕೆಲ ಮಾತ್ರೆಗಳನ್ನು ಕೂಡ ಬರೆದುಕೊಟ್ಟಿದ್ದಾರೆ. ದಿವ್ಯಾ ಊಟ ಮಾಡಿದ ನಂತರದಲ್ಲಿ ಮಾತ್ರೆ ತಿನ್ನಿಸುತ್ತಿದ್ದಾರೆ. ಅರವಿಂದ್ ಸೇವೆ ಇಷ್ಟಕ್ಕೆ ನಿಂತಿಲ್ಲ.

ನಂಗೆ ಒಂಥರಾ ಆಗ್ತಿದೆ; ಅರವಿಂದ್​ ಮಾಡಿದ ಸೇವೆ ನೋಡಿ ದಿವ್ಯಾ ಉರುಡುಗ ನಾಚಿ ನೀರಾದರು
ದಿವ್ಯಾ ಉರುಡುಗ - ಅರವಿಂದ್​ ಕೆಪಿ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: May 04, 2021 | 12:24 PM

ಬಿಗ್​ ಬಾಸ್ ಮನೆಯಲ್ಲಿ ಅರವಿಂದ್​ ಕೆ.ಪಿ. ಹಾಗೂ ದಿವ್ಯಾ ಉರುಡುಗ ಅವರ ಪ್ರೇಮ್​ ಕಹಾನಿ ಎಲ್ಲರ ಗಮನ ಸೆಳೆಯುತ್ತಿದೆ. ನಮ್ಮಿಬ್ಬರ ನಡುವೆ ಇರೋದು ಕೇವಲ ಫ್ರೆಂಡ್​ಶಿಪ್​ ಎಂದು ದಿವ್ಯಾ ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದ್ದಾರೆ. ಅವರು ಮಾತಿನಲ್ಲಿ ಏನೇ ಹೇಳಿದರೂ ಕೃತಿಯಲ್ಲಿ ಎಲ್ಲಾ ವಿಚಾರಗಳು ವೀಕ್ಷಕರಿಗೆ ಸ್ಪಷ್ಟವಾಗುತ್ತಿದೆ. ಮೇ 3ರಂದು ನಡೆದ ಘಟನೆ ಇದಕ್ಕೆ ಹೊಸ ಸೇರ್ಪಡೆ.

ದಿವ್ಯಾ ಉರುಡುಗ ಅವರಿಗೆ ಬಿಗ್​ ಬಾಸ್​ ಮನೆಯಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ. ವೈದ್ಯರು ಅವರಿಗೆ ಕೆಲ ಮಾತ್ರೆಗಳನ್ನು ಕೂಡ ಬರೆದುಕೊಟ್ಟಿದ್ದಾರೆ. ದಿವ್ಯಾ ಊಟ ಮಾಡಿದ ನಂತರದಲ್ಲಿ ಅರವಿಂದ್​ ಮಾತ್ರೆ ತಿನ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ, ಅವರ ಕೇರಿಂಗ್​ ಜಾಸ್ತಿ ಆಗಿದೆ. ಇದು ದಿವ್ಯಾ ಅವರಿಗೂ ಗೊತ್ತಾಗುತ್ತಿದೆ.

ದಿವ್ಯಾಗೆ ಅನಾರೋಗ್ಯ ಕಾಡುತ್ತಿದೆ ಎಂಬುದನ್ನು ಗಮನಿಸಿದ ಅರವಿಂದ್, ಅವರ ಪ್ಯಾಂಟ್​ ತೊಳೆದಿದ್ದಾರೆ. ಇದನ್ನು ನೋಡಿದ ದಿವ್ಯಾ ಉರುಡುಗ ನಾಚಿಕೆ ಮಾಡಿಕೊಂಡಿದ್ದಾರೆ. ಯಾಕೆ ಹೀಗೆ ಮಾಡಿದ್ದು? ನಂಗೆ ಒಂಥರಾ ಆಗ್ತಿದೆ ಎಂದು ದಿವ್ಯಾ ಹೇಳಿಕೊಂಡರು. ಈ ವೇಳೆ ವೈಷ್ಣವಿ ಕೂಡ ಅಲ್ಲಿಯೇ ಇದ್ದರು. ನೀವಿಬ್ಬರೂ ಫ್ರೆಂಡ್ಸ್​ ಅಲ್ಲವಾ. ಫ್ರೆಂಡ್​ಶಿಪ್​ ಮೇಲೆ ತೊಳೆದುಕೊಟ್ಟಿದ್ದಾರೆ ಅಷ್ಟೆ. ನೀವು ಇನ್ನೊಂದು ದಿನ ಅವರ ಪ್ಯಾಂಟ್​ ತೊಳೆದುಕೊಡಿ ಎಂದರು ವೈಷ್ಣವಿ. ಹೌದು, ನಾನು ಹಾಗೆ ಮಾಡ್ತೀನಿ ಎಂದರು ದಿವ್ಯಾ.

ಬಿಗ್​ ಬಾಸ್​ ಮನೆಯಲ್ಲಿ ಸುದೀಪ್​ ವಾಯ್ಸ್​ ನೋಟ್​ ಕಳುಹಿಸಿದ್ದರು. ಈ ವೇಳೆ ದಿವ್ಯಾ ಅವರನ್ನು ಸುದೀಪ್​ ಪರೋಕ್ಷವಾಗಿ ಎಚ್ಚರಿಸಿದ್ದಾರೆ. ಆಟದ ಮೇಲೆ ಗಮನ ಹೆಚ್ಚಿರಲಿ. ಕೆಲವರು ಬಂದ ಉದ್ದೇಶವನ್ನೇ  ಮರೆಯುತ್ತಿದ್ದಾರೆ ಎಂದು ಹೇಳುವ ಮೂಲಕ ಅರವಿಂದ್ ಅವರ ಗುಂಗಿನಲ್ಲಿ ದಿವ್ಯಾ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂಬುದನ್ನು ನೆನಪಿಸಿದರು.

ಇದನ್ನೂ ಓದಿ: Kichcha Sudeep: ಸುದೀಪ್​ ಗುಣಮುಖರಾದ ಬೆನ್ನಲ್ಲೇ ಕಹಿ ಸುದ್ದಿ; ಈ ವಾರವೂ ಬಿಗ್ ಬಾಸ್​ಗೆ ಕಿಚ್ಚ ಗೈರು

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್