Uttar Pradesh: ಕೊವಿಡ್ ಲಸಿಕೆಯ ಪೂರೈಕೆಗೆ ಜಾಗತಿಕ ಟೆಂಡರ್ ಕರೆದ ಉತ್ತರಪ್ರದೇಶ ಸರ್ಕಾರ

Vaccination Drive: ಆನ್‌ಲೈನ್ ಅಲ್ಪಾವಧಿಯ ಜಾಗತಿಕ ಇ-ಟೆಂಡರ್‌ಗಳನ್ನು ಲಕ್ನೋದ ಯುಪಿಎಂಎಸ್‌ಸಿಎಲ್‌ಗೆ ಕೊವಿಡ್ ವ್ಯಾಕ್ಸಿನ್ (4 ಕೋಟಿ ಡೋಸ್) ಪೂರೈಸಲು ಪರವಾನಗಿ ಪಡೆದ ಉತ್ಪಾದಕರಿಂದ ಆಹ್ವಾನಿಸಲಾಗಿದೆ.

Uttar Pradesh: ಕೊವಿಡ್ ಲಸಿಕೆಯ ಪೂರೈಕೆಗೆ ಜಾಗತಿಕ ಟೆಂಡರ್ ಕರೆದ ಉತ್ತರಪ್ರದೇಶ ಸರ್ಕಾರ
ಲಸಿಕೆಯ ಪ್ರಾತಿನಿಧಿಕ ಚಿತ್ರ
Rashmi Kallakatta

|

May 05, 2021 | 4:38 PM

ಲಕ್ನೊ: ಕೊವಿಡ್ ಲಸಿಕೆಯ ಪೂರೈಕೆಗಾಗಿ ಉತ್ತರ ಪ್ರದೇಶ ಸರ್ಕಾರ ಜಾಗತಿಕ ಟೆಂಡರ್ ಕರೆದಿದೆ. ಈ ಟೆಂಡರ್ ಮೂಲಕ ಉತ್ತರ ಪ್ರದೇಶ 4 ಕೋಟಿ ಡೋಸ್ ಲಸಿಕೆ ಸಂಗ್ರಹಿಸಲಿದೆ.  ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಟೆಂಡರ್ ಫಾರ್ಮ್ ಅನ್ನು ಮೇ 7 ರವರೆಗೆ ವೆಬ್‌ಸೈಟ್- up.gov.in ಮೂಲಕ ಡೌನ್‌ಲೋಡ್ ಮಾಡಲು ಲಭ್ಯವಿರುತ್ತದೆ. ಮೇ 21 ರವರೆಗೆ ಬಿಡ್ಡಿಂಗ್ ತೆರೆದಿರುತ್ತದೆ. ಉತ್ತರ ಪ್ರದೇಶದ ವೈದ್ಯಕೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಟೆಂಡರ್ ನೀಡಲಾಗಿದೆ.

ಆನ್‌ಲೈನ್ ಅಲ್ಪಾವಧಿಯ ಜಾಗತಿಕ ಇ-ಟೆಂಡರ್‌ಗಳನ್ನು ಲಕ್ನೋದ ಯುಪಿಎಂಎಸ್‌ಸಿಎಲ್‌ಗೆ ಕೊವಿಡ್ ವ್ಯಾಕ್ಸಿನ್ (4 ಕೋಟಿ ಡೋಸ್) ಪೂರೈಸಲು ಪರವಾನಗಿ ಪಡೆದ ಉತ್ಪಾದಕರಿಂದ ಆಹ್ವಾನಿಸಲಾಗಿದೆ. ಟೆಂಡರ್ ಮತ್ತು ಟೆಂಡರ್ ದಾಖಲೆಗಳ ವಿವರಗಳನ್ನು etender.up.nic.in ಮತ್ತು upmsc.in ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ಟೆಂಡರ್ ಡೌನ್‌ಲೋಡ್ ಮಾಡುವ ದಿನಾಂಕ / ಸಮಯ 07 ಮೇ 2021 ರಿಂದ 15:00 ಗಂಟೆಗಳು ಮತ್ತು ಟೆಂಡರ್ ದಾಖಲೆಗಳ ಆನ್‌ಲೈನ್ ಸಲ್ಲಿಕೆಯ ಕೊನೆಯ ದಿನಾಂಕ / ಸಮಯ 21 ಮೇ, 2021 ಗಂಟೆಗಳವರೆಗೆ 2021 ಎಂದು ಅಧಿಸೂಚನೆಯಲ್ಲಿದೆ .

ಎಲ್ಲರಿಗೂ ಕೊವಿಡ್ ಲಸಿಕೆಗಳನ್ನು ಉಚಿತವಾಗಿ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. 20 ಕೋಟಿ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ.

ಕೊವಿಡ್ -19 ಬಿಕ್ಕಟ್ಟನ್ನು ಎದುರಿಸಲು ಸೋಮವಾರ (ಮೇ 10) ಬೆಳಿಗ್ಗೆ ಕರ್ಫ್ಯೂ ತರಹದ ಲಾಕ್‌ಡೌನ್ ವಿಸ್ತರಿಸುವುದಾಗಿ ಸರ್ಕಾರ ಇಂದು ಘೋಷಿಸಿತು. ನಿರ್ಬಂಧಗಳನ್ನು ತೆಗೆದುಹಾಕಲು ತೀರ್ಮಾನಿಸಿದ್ದು, ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಎಲ್ಲ ಅಂಗಡಿಗಳು ಮುಚ್ಚಿರಲಿವೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3.82 ಲಕ್ಷ ಹೊಸ ಕೊರೊನಾ ಪ್ರಕರಣ ಪತ್ತೆ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,780 ಮಂದಿ ಸಾವಿಗೀಡಾಗಿದ್ದಾರೆ. ಮಹಾರಾಷ್ಟ್ರದಲ್ಲಿ 900 ಕ್ಕಿಂತಲೂ ಹೆಚ್ಚು ಮಂದಿ ಮೃತಪಟ್ಟಿದ್ದು ದೆಹಲಿಯಲ್ಲಿ 338 ಮತ್ತು ಉತ್ತರಪ್ರದೇಶದಲ್ಲಿ 351ಮಂದಿ ಮೃತ ಪಟ್ಟಿದ್ದಾರೆ. ಕನಿಷ್ಠ 13 ರಾಜ್ಯಗಳಲ್ಲಿ 100ಕ್ಕಿಂತ ಹೆಚ್ಚು ಸಾವು ಸಂಭವಿಸಿದೆ. ದೇಶದಲ್ಲಿ 3.82 ಲಕ್ಷ ಹೊಸ ಕೊವಿಡ್ ಪ್ರಕರಣಗಳು ವರದಿ ಆಗಿದ್ದು ಸಕ್ರಿಯ ಪ್ರಕರಣಗಳಸಂಖ್ಯೆ 34. 87ಲಕ್ಷಕ್ಕೇರಿದೆ. ಮಹಾರಾಷ್ಟ್ರದಲ್ಲಿ 51,880 ಪ್ರಕರಣ ಪತ್ತೆಯಾಗಿದ್ದು ಕರ್ನಾಟಕದಲ್ಲಿ 44,631 ಪ್ರಕರಣಗಳು ವರದಿ ಆಗಿವೆ.

ಭಾರತದಲ್ಲಿ ಪ್ರತಿ ದಿನ ಮೂರು ಲಕ್ಷ ಕೊವಿಡ್ -19 ಪ್ರಕರಣಗಳನ್ನು ವರದಿಯಾಗುತ್ತಿದ್ದು ಹಲವಾರು ರಾಜ್ಯಗಳು ಇನ್ನೂ ಆಮ್ಲಜನಕದ ಪೂರೈಕೆಯ ಕೊರತೆ ಇದೆ . ಸಮಯಕ್ಕೆ ಸರಿಯಾಗಿ ಆಮ್ಲಜನಕವನ್ನು ಪೂರೈಸದಿದ್ದಲ್ಲಿ ಹಲವಾರು ಜೀವಗಳು ನಷ್ಟವಾಗುತ್ತವೆ ಎಂದು ಹರ್ಯಾಣ ಸರ್ಕಾರ ಮಂಗಳವಾರ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ತಿಳಿಸಿದೆ. ಮಹಾರಾಷ್ಟ್ರ ಸರ್ಕಾರ ಮತ್ತು ಬಿಎಂಸಿ ಕೇಂದ್ರ ಸರ್ಕಾರಕ್ಕೆಪ್ರತ್ಯೇಕವಾಗಿ ಪತ್ರ ಬರೆದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆಗೆ ಒತ್ತಾಯಿಸಿದೆ. ಮೇ 3 ರಂದು ಒಂದೇ ದಿನ ದೆಹಲಿಯ 41 ಆಸ್ಪತ್ರೆಗಳಲ್ಲಿ 7,000 ರೋಗಿಗಳ ದಾಖಲಾತಿ ಆಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆಯ  ಅಂಕಿ ಅಂಗಳ ಪ್ರಕಾರ   ದೇಶದಲ್ಲಿ ಒಟ್ಟು ಕೊರೊನಾವೈರಸ್   ಪ್ರಕರಣಗಳ ಸಂಖ್ಯೆ 2,06,65,148 ಆಗಿದೆ.  ಒಟ್ಟು 1,69,51,731 ಮಂದಿ ಚೇತರಿಸಿಕೊಂಡಿದ್ದಾರೆ.  ಲಸಿಕೆ  ಪಡೆದವರ ಸಂಖ್ಯೆ 16,04,94,188  ಆಗಿದೆ.

ಇದನ್ನೂ ಓದಿ: ಇನ್ನೂ ನಾಲ್ಕೇ ದಿನ ಬಾಕಿಯಿದೆ; ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ಗೆ ಬೆದರಿಕೆ ಕರೆ

(Uttar Pradesh government floats global tender to boost Covid 19 vaccination drive)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada