ಇನ್ನೂ ನಾಲ್ಕೇ ದಿನ ಬಾಕಿಯಿದೆ; ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ಗೆ ಬೆದರಿಕೆ ಕರೆ

Yogi Adityanath: ಉತ್ತರ ಪ್ರದೇಶ ಪೊಲೀಸರ ಸಹಾಯವಾಣಿ 112ಕ್ಕೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿ ಸಿಎಂ ಆದಿತ್ಯನಾಥ್​ಗೆ ಬೆದರಿಕೆ ಹಾಕಿದ್ದಾನೆ. ಉತ್ತರ ಪ್ರದೇಶದ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

  • TV9 Web Team
  • Published On - 15:16 PM, 4 May 2021
ಇನ್ನೂ ನಾಲ್ಕೇ ದಿನ ಬಾಕಿಯಿದೆ; ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ಗೆ ಬೆದರಿಕೆ ಕರೆ
ಯೋಗಿ ಆದಿತ್ಯನಾಥ್

ಲಖ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ‘ನಿಮಗೆ ಇನ್ನೂ ನಾಲ್ಕು ದಿನ ಮಾತ್ರ ಬಾಕಿ ಉಳಿದಿದೆ’ ಎಂಬ ಜೀವ ಬೆದರಿಕೆ ಒಡ್ಡಲಾಗಿದೆ. ಉತ್ತರ ಪ್ರದೇಶ ಪೊಲೀಸರ ಸಹಾಯವಾಣಿ 112ಕ್ಕೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿ ಸಿಎಂ ಆದಿತ್ಯನಾಥ್​ಗೆ ಬೆದರಿಕೆ ಹಾಕಿದ್ದಾನೆ. ಉತ್ತರ ಪ್ರದೇಶದ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ಏಪ್ರಿಲ್ 29ರಂದು ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಈ ಬೆದರಿಕೆ ಕರೆ ಬಂದಿದೆ. ಈ ಹಿಂದೆಯೂ ಕೆಲವು ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್​ಗೆ ಬೆದರಿಕೆ ಕರೆ ಬಂದಿದ್ದವು. ಕಳೆದ ನವೆಂಬರ್ ಮತ್ತು ಡಿಸೆಂಬರ್​ ತಿಂಗಳಲ್ಲಿಯೂ ಇಂತಹುದೇ ಕರೆಗಳು ಬಂದಿದ್ದವು. ಈ ಪೈಕಿ 15ವರ್ಷದ ಬಾಲಕನೊಬ್ಬ ಯೋಗಿ ಆದಿತ್ಯನಾಥ್​ಗೆ ಬೆದರಿಕೆ ಒಡ್ಡಿದ್ದ ಕಾರಣ ಆತನನ್ನು ರಿಮ್ಯಾಂಡ್ ಹೋಂಗೆ ಕಳಿಸಲಾಗಿತ್ತು.

ಈ ಹಿಂದಿನ ಬೆದರಿಕೆ ಪ್ರಕರಣ
ಕಳೆದ ತಿಂಗಳ ರ ರಂದು (ಏಪ್ರಿಲ್ 6) ಗೃಹಸಚಿವ ಅಮಿತ್​ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಹತ್ಯೆ ಮಾಡುವುದಾಗಿ ಕೇಂದ್ರೀಯ ಮೀಸಲು ಪಡೆ (CRPF)ಗೆ ಬೆದರಿಕೆ ಇಮೇಲ್​ವೊಂದು ಬಂದಿತ್ತು. ಈ ಇಬ್ಬರೂ ರಾಜಕೀಯ ನಾಯಕರ ಜೀವ ತೆಗೆಯುವುದಾಗಿ ಸಿಆರ್​ಪಿಎಫ್​ನ ಮುಂಬೈ ಪ್ರಧಾನ ಕಚೇರಿಗೆ ಇಮೇಲ್​ ಕಳಿಸಿದ್ದಾಗಿ ಮೂಲಗಳು ತಿಳಿಸಿದ್ದು, ಕೆಲವು ಪುಣ್ಯಸ್ಥಳಗಳು, ಪ್ರಮುಖ ಪ್ರದೇಶಗಳ ಮೇಲೆ ಕೂಡ ದಾಳಿ ನಡೆಸುವುದಾಗಿ ಮೇಲ್​ನಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದವು.

ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾಥ್​ರನ್ನು ಆತ್ಮಾಹುತಿ ದಾಳಿಯ ಮೂಲಕ ಹತ್ಯೆ ಮಾಡುವುದಾಗಿ ಬೆದರಿಕೆ ಇಮೇಲ್​ ಬಂದಿತ್ತು. ತಾವು 11 ಜನ ಸೂಸೈಡ್​ ಬಾಂಬರ್​ಗಳಿದ್ದಿದ್ದಾಗ್ಯೂ ಅವರು ಹೇಳಿಕೊಂಡಿದ್ದಾರೆ. ಈ ಮೇಲ್​ನ್ನು ತನಿಖಾ ದಳಗಳು ಮತ್ತು ಭದ್ರತಾ ಪಡೆಗಳ ಮುಖ್ಯಸ್ಥರಿಗೂ ಫಾರ್​​ವರ್ಡ್ ಮಾಡಲಾಗಿದೆ ಎಂದು ಸಿಆರ್​ಪಿಎಫ್​ ಹೇಳಿತ್ತು. ಇಮೇಲ್​ ಬಂದು ಕೆಲವು ದಿನಗಳು ಕಳೆದಿದ್ದವು.

ಅಮಿತ್ ಶಾ ಚತ್ತೀಸ್​ಗಡ್​​ದ ಬಸ್​ಗುಡಾ ಸಿಆರ್​ಪಿಎಫ್ ಕ್ಯಾಂಪ್​ಗೆ ಭೇಟಿ ನೀಡಿದ್ದರು. ನಕ್ಸಲ್​ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು ಅಮಿತ್ ಶಾ, ಯೋಗಿ ಆದಿತ್ಯನಾಥ್​ಗೆ ಜೀವ ಬೆದರಿಕೆ ಇದೇ ಮೊದಲೇನೂ ಅಲ್ಲ. ಇದೇ ವರ್ಷ ಜನವರಿಯಲ್ಲಿ ಉತ್ತರಪ್ರದೇಶ ತುರ್ತು ಸೇವೆ ವಿಭಾಗಕ್ಕೆ, ಯೋಗಿ ಆದಿತ್ಯನಾಥ್​ರನ್ನು 24 ಗಂಟೆಯಲ್ಲಿ ಎಕೆ 47 ರೈಫಲ್​​ನಿಂದ ಕೊಲ್ಲುವುದಾಗಿ ಸಂದೇಶ ಕಳಿಸಲಾಗಿತ್ತು. ನವೆಂಬರ್​​ನಲ್ಲೂ ಇಂಥದ್ದೇ ಒಂದು ಸಂದೇಶ ಇದೇ ವಿಭಾಗಕ್ಕೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಗ್ರಾದ ಅಪ್ರಾಪ್ತನೊಬ್ಬನನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: IPL 2021: ಐಪಿಎಲ್​ ಒಳಗೆ ಕೊರೊನಾ ಪ್ರವೇಶಿಸಲು ದೋಷಪೂರಿತ ಜಿಪಿಎಸ್​ ಸಾಧನ ಕಾರಣವಾಯ್ತ? ಇಲ್ಲಿದೆ ರೋಚಕ ಸುದ್ದಿ

Coronavirus India Update: ಭಾರತದಲ್ಲಿ ಒಂದೇ ದಿನ 3.57 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 3,449 ಮಂದಿ ಸಾವು

(Yogi Adityanath gets death treat warns only four days left )