ಪುದುಚೇರಿಯಲ್ಲಿ ಸರ್ಕಾರ ರಚಿಸಲು ಎನ್.ರಂಗಸ್ವಾಮಿ ಸಿದ್ಧತೆ, ಮೇ 7 ಅಥವಾ 9ಕ್ಕೆ ಪ್ರಮಾಣ ವಚನ
NR Congress chief N Rangaswamy: ವೇಳೆ ಮಾಜಿ ಸಿಎಂ ರಂಗಸ್ವಾಮಿ ನೇತೃತ್ವದ ಎನ್ ಆರ್ ಕಾಂಗ್ರೆಸ್ ಪಕ್ಷ 10 ಸೀಟುಗಳನ್ನು ಗೆಲ್ಲುವ ಮೂಲಕ ಎನ್‌ಡಿಎ ಮೈತ್ರಿಕೂಟ 16 ಸೀಟುಗಳ ಸರಳ ಬಹುಮತದೊಂದಿಗೆ ಅಧಿಕಾರಕ್ಕೇರಿದೆ.
ಪುದುಚೇರಿ: ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಸರ್ಕಾರ ರಚನೆಗೆ ಎನ್ .ಆರ್.ಕಾಂಗ್ರೆಸ್ ಮುಖ್ಯಸ್ಥ ಎನ್.ರಂಗಸ್ವಾಮಿ ಮುಂದೆ ಬಂದಿದ್ದಾರೆ. ಪುದುಚೇರಿಯಲ್ಲಿ ಸ್ಪರ್ಧಿಸಿದ 9 ಸೀಟುಗಳಲ್ಲಿ ಬಿಜೆಪಿ 6 ಸೀಟುಗಳನ್ನು ಗೆದ್ದಿತ್ತು. ಅದೇ ವೇಳೆ ಮಾಜಿ ಸಿಎಂ ರಂಗಸ್ವಾಮಿ ನೇತೃತ್ವದ ಎನ್ ಆರ್ ಕಾಂಗ್ರೆಸ್ ಪಕ್ಷ 10 ಸೀಟುಗಳನ್ನು ಗೆಲ್ಲುವ ಮೂಲಕ ಎನ್‌ಡಿಎ ಮೈತ್ರಿಕೂಟ 16 ಸೀಟುಗಳ ಸರಳ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. ಎನ್‌ಡಿಎ ನೇತೃತ್ವದ ಸರ್ಕಾರದ ಮುಖ್ಯಮಂತ್ರಿಯಾಗಿ ಎನ್.ರಂಗಸ್ವಾಮಿ ಅವರು ಮೇ 7 ಅಥವಾ 9ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ರಂಗಸ್ವಾಮಿಯ ಜನಪ್ರಿಯತೆಯ ಬಗ್ಗೆ ಅಸಮಧಾನದಿಂದ ವರ್ತಿಸುತ್ತಿದ್ದ ಬಿಜೆಪಿ ಅಂತಿಮವಾಗಿ ಅವರನ್ನು ತಮ್ಮ ಸಿಎಂ ಅಭ್ಯರ್ಥಿಯಾಗಿ ಅಂಗೀಕರಿಸುತ್ತದೆಯೇ ಎಂಬ ಬಗ್ಗೆ ಎದ್ದಿತ್ತು .ರಂಗಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಬಿಜೆಪಿ ಮೌನ ವಹಿಸಿದ್ದು ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ಘೋಷಿಸಲಾಗುವುದು ಎಂದು ಹೇಳಿತ್ತು.
Yesterday marked the last step & End of Election process in #Puducherry – peacefully
Yesterday marked 1st step n beginning of #BESTPuducherry by #NDA govt ?? -peacefully #SabkaSaath #SabkaVikas #SabkaVishwas @JPNadda @blsanthosh pic.twitter.com/SRM7342oMw
— Rajeev Chandrasekhar ?? (@rajeev_mp) May 4, 2021
ಎನ್‌ಡಿಎ ಮೈತ್ರಿಕೂಟವು ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಹೊಂದಿರುವ ದಕ್ಷಿಣದ ರಾಜ್ಯದಲ್ಲಿ ಗೆಲುವು ಸಾಧಿಸಿದ ನಂತರ ಸೋಮವಾರ ಎನ್‌ಆರ್ ಕಾಂಗ್ರೆಸ್ ಅನ್ನು ಭೇಟಿ ಮಾಡಿದೆ. ಬಿಜೆಪಿ ತನ್ನ 6 ಶಾಸಕರನ್ನು ಹೊಂದಿದ್ದು, ತನ್ನದೇ ಆದ ಒಬ್ಬರನ್ನು ಸಿಎಂ ಆಗಿ ನೇಮಿಸಲು ಉತ್ಸುಕವಾಗಿತ್ತು. ಆದರೆ ರಂಗಸ್ವಾಮಿ ಬಿಟ್ಟುಕೊಡಲಿಲ್ಲ. ಸೋಮವಾರ ಸಂಜೆ ರಂಗಸ್ವಾಮಿ ಅವರು ಸರ್ಕಾರ ರಚಿಸುವ ಹಕ್ಕು ಪಡೆಯಲು ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರನ್ನು ಭೇಟಿ ಮಾಡಿದ್ದಾರೆ.
Published On - 1:33 pm, Tue, 4 May 21