Tamil Nadu Assembly Election 2021: ಸೀಟು ಗೆಲ್ಲದಿದ್ದರೂ ದೊಡ್ಡ ಪಕ್ಷಗಳ ಮತಗಳಿಗೆ ಅಡ್ಡಗಾಲು ಹಾಕಲು ಯಶಸ್ವಿಯಾಗಿವೆ ಸಣ್ಣ ಪಕ್ಷಗಳು

Tamil Nadu Election: ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ (MNM) ಶೇ2.52 ಮತಗಳನ್ನು ಪಡೆದಿದ್ದು, ಟಿಟಿವಿ ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೇಟ್ರ ಕಳಗಂ (AMMK) ಶೇ 2.35 ಮತಗಳನ್ನು ಪಡೆದಿದೆ.ಈ ಎರಡೂ ಪಕ್ಷಗಳು ಮೊದಲ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು,ಪಕ್ಷದ ಸಂಸ್ಥಾಪಕರಿಬ್ಬರೂ ಪರಾಭವಗೊಂಡಿದ್ದಾರೆ.

Tamil Nadu Assembly Election 2021: ಸೀಟು ಗೆಲ್ಲದಿದ್ದರೂ ದೊಡ್ಡ ಪಕ್ಷಗಳ ಮತಗಳಿಗೆ ಅಡ್ಡಗಾಲು ಹಾಕಲು ಯಶಸ್ವಿಯಾಗಿವೆ ಸಣ್ಣ ಪಕ್ಷಗಳು
ಟಿಟಿವಿ ದಿನಕರನ್ - ಕಮಲ್ ಹಾಸನ್
Follow us
ರಶ್ಮಿ ಕಲ್ಲಕಟ್ಟ
|

Updated on: May 05, 2021 | 8:19 PM

ಚೆನ್ನೈ:  ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಸರಿ ಸುಮಾರು ಶೇ 85ರಷ್ಟು ಮತಗಳನ್ನು ಪಡೆದುಕೊಂಡಿವೆ. ಆದರೆ ಈ ಎರಡು ಮೈತ್ರಿಕೂಟಗಳಿಂದ ಹೊರಗಿರುವ ಸಣ್ಣ ಪಕ್ಷಗಳು ಒಂದೇ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿಲ್ಲ. ಆದರೆ ವಿವಿಧ ಕ್ಷೇತ್ರಗಳಲ್ಲಿ ಇವು ದೊಡ್ಡ ಪಕ್ಷಗಳಿಗೆ ಸಿಗುವ  ಮತಗಳಿಗೆ ಅಡ್ಡಗಾಲು ಹಾಕಿವೆ.  ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ (MNM) ಶೇ2.52 ಮತಗಳನ್ನು ಪಡೆದಿದ್ದು, ಟಿಟಿವಿ ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೇಟ್ರ ಕಳಗಂ (AMMK) ಶೇ 2.35 ಮತಗಳನ್ನು ಪಡೆದಿದೆ.ಈ ಎರಡೂ ಪಕ್ಷಗಳು ಮೊದಲ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು,ಪಕ್ಷದ ಸಂಸ್ಥಾಪಕರಿಬ್ಬರೂ ಪರಾಭವಗೊಂಡಿದ್ದಾರೆ. ಆದಾಗ್ಯೂ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಮತಗಳಿಸುವಲ್ಲಿ ಈ ಪಕ್ಷಗಳು ಯಶಸ್ವಿಯಾಗಿವೆ.

ಉದಾಹರಣೆಗೆ ಎಐಎಡಿಎಂಕೆ ಸ್ಪರ್ಧಿಸಿದ 20 ಸೀಟುಗಳಲ್ಲಿ ಎಎಂಎಂಕೆಯ ಮತಗಳನ್ನು ಕಡಿಮೆ ಮಾಡಿದೆ. ಕಮಲ್ ಹಾಸನ್ ಅವರ ಎಂಎನ್ಎಂ ಪಕ್ಷವನ್ನು ಆರ್ ಎಸ್ಎಸ್ ಪಕ್ಷದ ಬಿ- ಟೀಂ ಎಂದೇ ವಿಪಕ್ಷಗಳು ಬಿಂಬಿಸಿದ್ದವು. ಎಂಎನ್ಎಂ ಹಲವಾರು ಕ್ಷೇತ್ರಗಳಲ್ಲಿ ಡಿಎಂಕೆ ಮತ್ತು ಎಐಎಂಡಿಎಂಕೆ ಮತಗಳಿಕೆಗೆ ಕಡಿವಾಣ ಹಾಕಿತ್ತು .

ಇನ್ನೊಂದು ಸಣ್ಣ ಪಕ್ಷ ತಮಿಳ್ ನ್ಯಾಷನಲಿಸ್ಟ್ ನಾಯಕ ಸೀಮಾನ್ ಅವರ ನಾಮ್ ತಮಿಳರ್ ಕಟ್ಚಿ ಸೀಟು ಗೆಲ್ಲಲು ವಿಫಲವಾದರೂ ಶೇ 6.58 ಮತಗಳಿಸುವಲ್ಲಿ ಯಶ ಸಾಧಿಸಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಗಿಂತ ಈ ಬಾರಿ ಶೇ 1ರಷ್ಟು ಹೆಚ್ಚು ಮತಗಳನ್ನು ಗಳಿಸಿದೆ. 2019ರ ಸಂಸದೀಯ ಚುನಾವಣೆಯಲ್ಲಿ ಶೇ 4ರಷ್ಟು ಮತಗಳಿಸಿತ್ತು, ಹಲವಾರು ಕ್ಷೇತ್ರಗಳಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಮತಗಳಿಗೆ ಇದು ಕತ್ತರಿ ಬೀಳುವಂತೆ ಮಾಡಿದೆ.

ಫಲಿತಾಂಶಗಳನ್ನು ವಿಶ್ಲೇಷಿಸಿದರೆ  ಎಐಎಡಿಎಂಕೆ ಸಾಂಪ್ರದಾಯಿಕ ಮತ ಬ್ಯಾಂಕಿನಿಂದ ತನ್ನ ಮತಗಳನ್ನು ಸೆಳೆದ ಎಎಂಎಂಕೆ, ವಿಶೇಷವಾಗಿ ನಿಕಟ ಸ್ಪರ್ಧೆಗಳಿರುವ 20 ಸ್ಥಾನಗಳಲ್ಲಿ ಎಐಎಡಿಎಂಕೆ ಮತಗಳಿಗೆ ಯಾವ ರೀತಿ ಅಡ್ಡಗಾಲು ಹಾಕಿದೆ ಎಂಬುದನ್ನು ನೋಡಬಹುದು.

977 ಮತಗಳ ಅಂತರದಿಂದ ಡಿಎಂಕೆ ಜಯಗಳಿಸಿದ ನೈವೇಲಿಯಲ್ಲಿ, ಎಎಂಎಂಕೆ 2,230 ಮತಗಳನ್ನು ಗಳಿಸಿತು. 746 ಮತಗಳ ಅಂತರದಿಂದ ಡಿಎಂಕೆ ಜಯಗಳಿಸಿದ ಕಟ್ಪಾಡಿಯಲ್ಲಿ ಎಎಂಎಂಕೆ 1,066 ಮತಗಳನ್ನು ಪಡೆದಿದೆ.

ಎಎಂಎಂಕೆ ಮತ್ತು ಅದರ ಮಿತ್ರಪಕ್ಷವಾದ ಕ್ಯಾಪ್ಟನ್ ವಿಜಯಕಾಂತ್ ಅವರ ಡಿಎಂಡಿಕೆ – 2011 ರಲ್ಲಿ ಮುಖ್ಯ ವಿರೋಧ ಪಕ್ಷವಾಗಿದ್ದು, ಈ ಬಾರಿ ಮತ ಹಂಚಿಕೆಯಲ್ಲಿ ಶೇ 0.43ರಷ್ಟು ಮತಗಳಿಸಿವೆ. ಈ ಪಕ್ಷ ವಿರುಧಾಚಲಂನಲ್ಲಿ ಪ್ರಮುಖ ಪಕ್ಷಗಳ ಮತಗಳಿಗೆ ಕತ್ತರಿ ಹಾಕಿತ್ತು . ಡಿಎಂಡಿಕೆ 25,908 ಮತಗಳನ್ನು ಗಳಿಸಿದದ್ದು ಇಲ್ಲಿ ಕಾಂಗ್ರೆಸ್ 862 ಮತಗಳ ಅಂತರದಿಂದ ಈ ಸ್ಥಾನವನ್ನು ಗೆದ್ದುಕೊಂಡಿತು.

21,589 ಮತಗಳ ಅಂತರದಿಂದ ಕಾಂಗ್ರೆಸ್ ಬಿಜೆಪಿ ನಾಯಕ ಎಚ್ ರಾಜಾ ಅವರನ್ನು ಸೋಲಿಸಿದ ಕಾರೈಕುಡಿಯಲ್ಲಿ, ಎಎಂಎಂಕೆ 44,864 ಮತಗಳನ್ನು ಗಳಿಸಿದರೆ, ಮಾಯಿಲಾಡುತುರೈನಲ್ಲಿ ಕಾಂಗ್ರೆಸ್ 2,742 ಮತಗಳ ಅಂತರದಿಂದ ಜಯಗಳಿಸಿತು. ದಿನಕರನ್ ಅವರ ಪಕ್ಷವು 7,282 ಮತಗಳನ್ನು ಪಡೆದಿದೆ.

ದಿನಕರನ್ ಅವರ ಚಿಕ್ಕಮ್ಮ ಶಶಿಕಲಾ ಅವರ ವಿಧಾನಸಭಾ ಕ್ಷೇತ್ರವಾದ ಮನ್ನಾರ್ ಗುಡಿಯಲ್ಲಿ, ಡಿಎಂಕೆ 37,393 ಮತಗಳ ಗೆಲುವಿನ ಅಂತರವನ್ನು ದಾಖಲಿಸಿದೆ. ಎಎಂಎಂಕೆ 40,481 ಮತಗಳನ್ನು ಪಡೆದರೆ, ಆಡಳಿತಾರೂಢ ಎಐಎಡಿಎಂಕೆ 49,779 ಮತಗಳನ್ನು ಪಡೆದರು. ತಿರುಪೂರು, ಶಂಕರಂಕೋವಿಲ್, ಸಟ್ಟೂರ್ ಎಐಎಡಿಎಂಕೆ ಸೋಲಿನಲ್ಲಿ ಎಎಂಎಂಕೆ ಪಾತ್ರವಹಿಸಿದ ಇತರ ಸ್ಥಾನಗಳಲ್ಲಿ ಸೇರಿವೆ.

ಎಐಎಡಿಎಂಕೆ ಮೈತ್ರಿಕೂಟವು ಈ ಬಾರಿ ಶೇ 39ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದೆ. 2016ರಲ್ಲಿ ಇದು 40.88 ಆಗಿತ್ತು.

ಆದಾಗ್ಯೂ ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆ ಗೆಲುವು ಗಳಿಸಿದ್ದರೂ 2019 ಕ್ಕೆ ಹೋಲಿಸಿದರೆ ತನ್ನ ಮತಗಳಲ್ಲಿ ಇಳಿಕೆ ಪಕ್ಷದಲ್ಲಿ ಕಳವಳಕ್ಕೆ ಕಾರಣವಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಇದು 39 ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗೆದ್ದಿದ್ದು, ಶೇಕಡಾ 52 ರಷ್ಟು ಮತಗಳನ್ನು ಗಳಿಸಿದೆ. ಇದು ಈ ಬಾರಿ ಶೇಕಡಾ 45-46ಕ್ಕೆ ಇಳಿದಿದೆ.

ಇದನ್ನೂ ಓದಿ: Tamil Nadu Elections 2021: ತಮಿಳುನಾಡಿನಲ್ಲಿ ಚುನಾವಣೆಗೆ ಮುನ್ನ ಹಣ ಹಂಚಲಾಗಿತ್ತು: ಕಮಲ್ ಹಾಸನ್ ಆರೋಪ