ಕೊರೊನಾ ಸೋಂಕಿತರಿಗೆ ಬೆಡ್ ಸಿಗದ ಹಿನ್ನೆಲೆ; ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಪೊಲೀಸರ ವಶಕ್ಕೆ
ಬೆಡ್ ಸಮಸ್ಯೆ ಸರಿಮಾಡಿ, ಬೆಡ್ ಕೊಡಿಸಿ, ನಂತರ ಪ್ರತಿಭಟನೆ ನಿಲ್ಲಿಸುವುದಾಗಿ ಸೌಮ್ಯ ರೆಡ್ಡಿ ಮತ್ತು ತಂಡ ವಾದ ಮಾಡಿದ್ಧಾರೆ. ಹೀಗೆ ಪ್ರತಿಭಟನೆ ಕೈಬಿಡದ ಕಾರಣಕ್ಕೆ ಸೌಮ್ಯ ರೆಡ್ಡಿ ಹಾಗೂ ಪ್ರತಿಭಟನಾಕಾರರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಕೊರೊನಾ ಸೋಂಕಿತರಿಗೆ ಬೆಡ್ ಸಿಗದ ಹಿನ್ನೆಲೆ ಪ್ರತಿಭಟನೆ ನಡೆಸುತ್ತಿದ್ದ ಜಯನಗರದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಧರಣಿ ನಡೆಸುತ್ತಿದ್ದ ಸೌಮ್ಯಾ ರೆಡ್ಡಿ ಮತ್ತು ಬೆಂಬಲಿಗರನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ವಲಯದ ಕಚೇರಿ ಬಳಿ ಸೌಮ್ಯಾ ರೆಡ್ಡಿ ಧರಣಿ ನಡೆಸುತ್ತಿದ್ದರು. ಪ್ರತಿಭಟನೆ ಕೈಬಿಡುವಂತೆ ಸೌಮ್ಯಾ ರೆಡ್ಡಿಗೆ ಪೊಲೀಸರು ಮನವಿ ಮಾಡಿದ್ದರು. ಪೊಲೀಸರ ಮನವಿಗೆ ಬಗ್ಗದ ಹಿನ್ನೆಲೆ ಸೌಮ್ಯಾ ರೆಡ್ಡಿ ವಶಕ್ಕೆ ಪಡೆಯಲಾಗಿದೆ.
ಸರ್ಕಾರ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕಿ ಸೌಮ್ಯಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಆಯುಕ್ತರನ್ನ ಕರೆಸಿ ಎಂದು ಸೌಮ್ಯಾ ಒತ್ತಾಯಮಾಡಿದ್ದರು. ಈಗಾಗಲೇ ನಿಮ್ಮ ಕಮಿಷನರ್ ಫೇಕ್ ಎಫ್ಐಆರ್ ಹಾಕಿದ್ದಾರೆ. ನನ್ನ ಸಾಯಿಸಿ ಬಿಡಿ ಎಂದು ಶಾಸಕಿ ಸೌಮ್ಯ ರೆಡ್ಡಿ ಪ್ರತಿಭಟಿಸಿದ್ದಾರೆ. ಸೌಮ್ಯ ರೆಡ್ಡಿ ವ್ಯಾನ್ಗೆ ಹತ್ತಿಸಲು ಹೆಚ್ಚುವರಿ ಮಹಿಳಾ ಪೊಲೀಸರನ್ನು ಅಧಿಕಾರಿಗಳು ಕರೆಸಿಕೊಂಡಿದ್ದಾರೆ.
ಬೆಡ್ ಸಮಸ್ಯೆ ಸರಿಮಾಡಿ, ಬೆಡ್ ಕೊಡಿಸಿ, ನಂತರ ಪ್ರತಿಭಟನೆ ನಿಲ್ಲಿಸುವುದಾಗಿ ಸೌಮ್ಯ ರೆಡ್ಡಿ ಮತ್ತು ತಂಡ ವಾದ ಮಾಡಿದ್ಧಾರೆ. ಹೀಗೆ ಪ್ರತಿಭಟನೆ ಕೈಬಿಡದ ಕಾರಣಕ್ಕೆ ಸೌಮ್ಯ ರೆಡ್ಡಿ ಹಾಗೂ ಪ್ರತಿಭಟನಾಕಾರರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕದಲ್ಲಿ ಇಂದು ಅತಿಹೆಚ್ಚು ಸೋಂಕಿತರು ಪತ್ತೆ ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇದೇ ಮೊದಲ ಬಾರಿಗೆ 50 ಸಾವಿರದ ಗಡಿ ದಾಟಿದೆ. ರಾಜ್ಯದ ವಿವಿಧೆಡೆ ಬುಧವಾರ (ಮೇ 5) ಒಟ್ಟು 50,112 ಜನರಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟು 346 ಮಂದಿ ಸಾವನ್ನಪ್ಪಿದ್ದಾರೆ. ಇಂದು ವರದಿಯಾಗಿರುವ ಸೋಂಕಿತರ ಒಟ್ಟು ಸಂಖ್ಯೆಯು ಈವರೆಗಿನ ಗರಿಷ್ಠ ಸಂಖ್ಯೆ ಎನಿಸಿದೆ.
ಕರ್ನಾಟಕದ ಒಟ್ಟು ಸೋಂಕಿತರ ಸಂಖ್ಯೆ 17,41,046ಕ್ಕೆ (17.41 ಲಕ್ಷ) ಏರಿಕೆಯಾಗಿದೆ. ಈವರೆಗೆ ರಾಜ್ಯದಲ್ಲಿ ಕೊರೊನಾದಿಂದ 16,884 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ 12,36,854 (12.36 ಲಕ್ಷ) ಜನರು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಅಗಿದ್ದಾರೆ. 4,87,288 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಒಂದೇ ದಿನ 50 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು, ಇದು ಈವರೆಗಿನ ದಾಖಲೆ
ಕೊವಿಡ್ 3ನೇ ಅಲೆ ತಡೆ ಅಸಾಧ್ಯ, ಕೊರೊನಾವೈರಸ್ ಸೋಂಕು ಅಧಿಕ: ಕೇಂದ್ರ ಸರ್ಕಾರ
Published On - 8:57 pm, Wed, 5 May 21