AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರದ 4 ದಿನ ಲಾಕ್​ಡೌನ್ ಆದೇಶ ರದ್ದು; ಹಾಸನದಲ್ಲಿ ರಾಜ್ಯ ಸರ್ಕಾರದ ಕೊವಿಡ್ ಕರ್ಪ್ಯೂ ಮುಂದುವರಿಕೆ

ಜಿಲ್ಲೆಯಲ್ಲಿ ನಾಲ್ಕು ದಿನಗಳ ಲಾಕ್ ಡೌನ್ ಮಾಡುವುದಾಗಿ ಗೋಪಾಲಯ್ಯ ಮಧ್ಯಾಹ್ನ ಘೋಷಣೆ ಮಾಡಿದ್ದರು. ಶಾಸಸಕರು ಸಂಸದರ ಅಭಿಪ್ರಾಯ ಪಡೆದು ಘೋಷಣೆ ಮಾಡಿದ್ದರು. ಇದಿಗ ಮತ್ತೆ ಅಧಿಕಾರಿಗಳ ಸಭೆ ನಂತರ ಆದೇಶ ರದ್ದುಮಾಡಲಾಗಿದೆ.

ವಾರದ 4 ದಿನ ಲಾಕ್​ಡೌನ್ ಆದೇಶ ರದ್ದು; ಹಾಸನದಲ್ಲಿ ರಾಜ್ಯ ಸರ್ಕಾರದ ಕೊವಿಡ್ ಕರ್ಪ್ಯೂ ಮುಂದುವರಿಕೆ
ಲಾಕ್​ಡೌನ್ (ಸಂಗ್ರಹ ಚಿತ್ರ)
TV9 Web
| Edited By: |

Updated on:Aug 23, 2021 | 12:51 PM

Share

ಹಾಸನ: ಜಿಲ್ಲೆಯಲ್ಲಿ ವಾರದ 4 ದಿನ ಲಾಕ್​ಡೌನ್​ ಮಾಡುವಂತೆ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಲಾಗಿದೆ. ಆದೇಶ ಹೊರಡಿಸಿ ಎರಡೇ ಗಂಟೆಯಲ್ಲಿ ಉಸ್ತುವಾರಿ ಸಚಿವ ಗೋಪಾಲಯ್ಯ ಆದೇಶ ವಾಪಸ್​ ಪಡೆದಿದ್ದಾರೆ. ಜಿಲ್ಲೆಯಲ್ಲಿ ವಾರದಲ್ಲಿ 4 ದಿನಗಳ ಲಾಕ್​ಡೌನ್ ಘೋಷಿಸಿದ್ದರು. ಇದಿಗ ಮತ್ತೆ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಆದೇಶ ರದ್ದುಪಡಿಸಲಾಗಿದೆ. ಸರ್ಕಾರ ಹೊರಡಿಸಿರುವ ಲಾಕ್​ಡೌನ್ ಸೂಚನೆಗಳೇ ಮುಂದುವರಿಯಲಿದೆ.

ರಾಜ್ಯ ಸರ್ಕಾರದ ಜನತಾ ಕರ್ಪ್ಯೂ ಮುಂದುವರಿಕೆ ತಾವೇ ಆದೇಶ ಮಾಡಿ ಎರಡೇ ಗಂಟೆಯಲ್ಲಿ ಉಲ್ಟಾ ಹೊಡೆದ ಉಸ್ತುವಾರಿ ಸಚಿವ, ಕೇಂದ್ರ ಸರ್ಕಾರದ ಮುಂದಿನ ಆದೇಶ ನೋಡಿಕೊಂಡು ಮುಂದಿನ ತೀರ್ಮಾನ ಎಂದು ತಿಳಿಸಿದ್ದಾರೆ. ಉಸ್ತುವಾರಿ ಸಚಿವ ಗೋಪಾಲಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ, ಎಸ್​ಪಿ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಹಳೆ ಆದೇಶ ಬದಲಿಸಲಾಗಿದೆ.

ಜಿಲ್ಲೆಯಲ್ಲಿ ನಾಲ್ಕು ದಿನಗಳ ಲಾಕ್ ಡೌನ್ ಮಾಡುವುದಾಗಿ ಗೋಪಾಲಯ್ಯ ಮಧ್ಯಾಹ್ನ ಘೋಷಣೆ ಮಾಡಿದ್ದರು. ಶಾಸಸಕರು ಸಂಸದರ ಅಭಿಪ್ರಾಯ ಪಡೆದು ಘೋಷಣೆ ಮಾಡಿದ್ದರು. ಇದಿಗ ಮತ್ತೆ ಅಧಿಕಾರಿಗಳ ಸಭೆ ನಂತರ ಆದೇಶ ರದ್ದುಮಾಡಲಾಗಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಜನತಾ ಕರ್ಪ್ಯೂ ಮುಂದುವರಿಕೆ ಎಂದು ತಿಳಿಸಿದ್ದಾರೆ. ಜನತಾ ಕರ್ಪ್ಯೂ ಆದೇಶದಂತೆ ಜಿಲ್ಲೆಯಲ್ಲಿ ವಾರದ ಎಲ್ಲಾ ದಿನ ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ಅಗತ್ಯ ವಸ್ತುಗಳ ವ್ಯಾಪಾರ, ವಹಿವಾಟಿಗೆ ಅವಕಾಶ ನೀಡಲಾಗುತ್ತದೆ.

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಕೊವಿಡ್ ಸಂಬಂಧಿತ ಸಮಸ್ಯೆಗಳನ್ನು ಸರಿಪಡಿಸಬೇಕು. ಮೆಡಿಕಲ್ ಆಕ್ಸಿಜನ್ ಸರಬರಾಜು ವ್ಯವಸ್ಥೆಯ ಜವಾಬ್ಧಾರಿಯನ್ನು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಹಿಸಲಾಗಿದೆ. ರೆಮ್​ಡೆಸಿವರ್​ ಪೂರೈಕೆ ನಿರ್ವಹಣೆ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ಡಾ ಸಿ.ಎನ್. ಆಶ್ವತ್ಥನಾರಾಯಣ ಅವರು ವಹಿಸಿಕೊಳ್ಳಲಿದ್ದಾರೆ. ಆಸ್ಪತ್ರೆಗಳಲ್ಲಿನ ಬೆಡ್​ಗಳ ಹೊಣೆಗಾರಿಕೆಯನ್ನು ಸಚಿವ ಆರ್. ಅಶೋಕ್​ ನೋಡಿಕೊಳ್ಳಲಿದ್ದಾರೆ. ಹಾಗೇ, ಅರಣ್ಯ ಸಚಿವ ಅರವಿಂದ್ ಲಿಂಬಾವಳಿ, ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೂ ಕೆಲ ಜವಾಬ್ದಾರಿ ಹೊರಿಸಲಾಗಿದೆ. ರಾಜ್ಯದಲ್ಲಿ ಮಾಧ್ಯಮದವರನ್ನು ಕೊವಿಡ್​ ವಾರಿಯರ್ಸ್​ ಎಂದು ಪರಿಗಣಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ನಿನ್ನೆ ತಿಳಿಸಿದ್ದರು.

ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಣಗೊಳಿಸುವ ಸಲುವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರ ಹೆಗಲಿಗೇ ಈ ಹೊಣೆ ನೀಡಲಾಗಿದೆ. ನಾಳೆಯಿಂದಲೇ ಜಿಲ್ಲಾ ಉಸ್ತುವರಿ ಸಚಿವರು ಅವರ ಜಿಲ್ಲೆಗಳಿಗೆ ಹೋಗಬೇಕು. ಅಲ್ಲಿಯೇ ಇದ್ದು ಪರಿಸ್ಥಿತಿ ನಿಭಾಯಿಸಬೇಕು. ಈ ಬಗ್ಗೆ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದ್ದರು.

ಇದನ್ನೂ ಓದಿ: ಕೊರೊನಾ 3ನೇ ಅಲೆ ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್ ಅನಿವಾರ್ಯ, ಈ ಅಂಶಗಳತ್ತ ಗಮನಹರಿಸದಿದ್ದರೆ ಅಪಾಯ: ಏಮ್ಸ್ ನಿರ್ದೇಶಕ ಸೂಚನೆ

ಲಾಕ್​ಡೌನ್​ ಮಾಡುವಂತೆ ನಾನು ಮಾರ್ಚ್​ 15ರಂದೇ ಹೇಳಿದ್ದೆ, ಇವರು ಇನ್ನೂ ಸಂಪೂರ್ಣ ಲಾಕ್​ಡೌನ್ ಮಾಡಿಲ್ಲ: ಹೆಚ್​.ಡಿ.ಕುಮಾರಸ್ವಾಮಿ

Published On - 7:41 pm, Wed, 5 May 21