BJP Candidate Mangala Angadi Temple Run: ನಾಮಪತ್ರ ಸಲ್ಲಿಕೆಗೂ ಮುನ್ನ ಪುತ್ರಿಯರೊಂದಿಗೆ ಶಿವಾಜಿ-ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮಂಗಳಾ ಅಂಗಡಿ
‘ನಮ್ಮ ತಂದೆ ಚುನಾವಣೆಗೆ ಸ್ಪರ್ಧಿಸಿದಾಗ ಅವರ ಜತೆಗಿದ್ದೆವು. ಈಗ ನಮ್ಮ ತಾಯಿಯವರ ಜೊತೆ ನಾವು ಹೋಗುತ್ತೇವೆ’ ಎಂದು ಚುನಾವಣಾ ಪ್ರಕ್ರಿಯೆಯಲ್ಲಿ ತಾಯಿಯ ಜತೆ ನಿಲ್ಲುವುದಾಗಿ ಶ್ರದ್ಧಾ ಶೆಟ್ಟರ್ ಘೋಷಿಸಿದ್ದಾರೆ.
ಬೆಳಗಾವಿ: ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ಹಿನ್ನೆಲೆ ಮಂಗಳಾ ಅಂಗಡಿ ಟೆಂಪಲ್ ರನ್ ಮಾಡಿದ್ದಾರೆ. ಬೆಳಗಾವಿಯ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿರುವ ಅವರು, ಬೆಳಗಾವಿಯ ಶಿವಾಜಿ ಉದ್ಯಾನವನದಲ್ಲಿರುವ ಶಿವಾಜಿ ಪ್ರತಿಮೆ ಮಾಲಾರ್ಪಣೆ ಮಾಡಿದ್ದಾರೆ. ಜತೆಗೆ ಬೆಳಗಾವಿಯ ಬಸವೇಶ್ವರ ವೃತ್ತದ ಉದ್ಯಾನವನದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದಾರೆ.ಈ ಸಂದರ್ಭದಲ್ಲಿ ಮಂಗಳಾ ಅಂಗಡಿ ಜತೆ ಅವರ ಇಬ್ಬರು ಮಕ್ಕಳು, ಸಹೋದರ, ಕುಟುಂಬದ ಸದಸ್ಯರು ಜತೆಯಾಗಿದ್ದಾರೆ.
ಇಷ್ಟೇ ಅಲ್ಲದೇ ಮಂಗಳಾ ಅಂಗಡಿ ಅವರು ನಾಮಪತ್ರ ಸಲ್ಲಿಕೆ ಮುಂಚೆಯೇ ದೇವಸ್ಥಾನಗಳ ದರ್ಶನ ಮುಂದುವರೆಸಿದ್ದಾರೆ. ಬೆಳಗಾವಿ ನಗರದ ಹನುಮಾನ್ ದೇವಸ್ಥಾನಕ್ಕೆ ಭೇಟಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ನಾಮಪತ್ರ ಸಲ್ಲಿಸಲಿರುವ ಮಂಗಳ ಅಂಗಡಿಗೆ ಪುತ್ರಿ ಶ್ರದ್ದಾ ಶೆಟ್ಟರ್, ಸ್ಪೂರ್ತಿ ಪಾಟೀಲ್ ಮತ್ತು ಸಹೋದರ ಚಂದ್ರಪ್ಪ ಅಂಗಡಿ ಸೇರಿ ಜತೆಯಾಗುವ ಸಾಧ್ಯತೆಯಿದೆ.
ಈ ಕುರಿತು ಟಿವಿ9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಮಂಗಳಾ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್, ‘ನಮ್ಮ ತಂದೆ ಚುನಾವಣೆಗೆ ಸ್ಪರ್ಧಿಸಿದಾಗ ಅವರ ಜತೆಗಿದ್ದೆವು. ಈಗ ನಮ್ಮ ತಾಯಿಯವರ ಜೊತೆ ನಾವು ಹೋಗುತ್ತೇವೆ’ ಎಂದು ಚುನಾವಣಾ ಪ್ರಕ್ರಿಯೆಯಲ್ಲಿ ತಾಯಿಯ ಜತೆ ನಿಲ್ಲುವುದಾಗಿ ಘೋಷಿಸಿದ್ದಾರೆ.ನಮ್ಮ ತಂದೆಯವರು ಮಾಡಿದ ಕೆಲಸ ನಮ್ಮ ಕೈಹಿಡಿಯಲಿದೆ. ನಮ್ಮ ತಾಯಿ ಖಂಡಿತವಾಗಿ ಗೆಲುವು ಸಾಧಿಸ್ತಾರೆಂಬ ವಿಶ್ವಾಸ ನಮಗಿದೆ ಎಂದು ಇಬ್ಬರೂ ಪುತ್ರಿಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಿಡಿ ಪ್ರಕರಣದ ನಂತರ ಮೊದಲ ಬಾರಿಗೆ ಇಂದು ಗೋಕಾಕ್ಗೆ ರಮೇಶ್ ಜಾರಕಿಹೊಳಿ ಆಗಮಿಸುವ ಸಾಧ್ಯತೆ
ವಿಚಾರಣೆ ವೇಳೆ ತಡಬಡಾಯಿಸಿದ ರಮೇಶ್ ಜಾರಕಿಹೊಳಿ; ಕೆಲ ಪ್ರಶ್ನೆಗಳಿಗೆ ಉತ್ತರಿಸಲು 4 ದಿನಗಳ ಕಾಲಾವಕಾಶ ಕೋರಿಕೆ
Published On - 11:20 am, Tue, 30 March 21