ಕಾಯಕ ಯೋಗಿ ಹುಟ್ಟುಹಬ್ಬ ಆಚರಣೆಗೆ ಕೊರೊನಾ ಅಡ್ಡಿ.. ಸರಳ ಆಚರಣೆಗೆ ಸಿದ್ಧತೆ
ಶಿವೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಿಸಲು ಸಿದ್ಧಗಂಗಾ ಮಠ ಸಿದ್ದತೆ ಮಾಡಿಕೊಂಡಿತ್ತು. ಆದ್ರೆ ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಶುರುವಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ನಿನ್ನೆ ಸಿಎಂ ಬಿ.ಎಸ್. ಯಡಿಯೂರಪ್ಪ ಕೊರೊನಾ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.
ತುಮಕೂರು: ಕಾಯಕ ಯೋಗಿ, ಭಕ್ತರ ಪಾಲಿನ ಭಗವಂತ, ಅರಿವಿನ ಜ್ಯೋತಿ ಬೆಳಗಿಸಿದ ಪರಮ ಗುರು, ಅದೆಷ್ಟೂ ಮಕ್ಕಳ ಭವಿಷ್ಯ ರೂಪಿಸಿದ ನಡೆದಾಡುವ ದೇವರು. ಇಂತಹ ಮಹಾನ್ ಸಾಧಕನ ಜನ್ಮದಿನಾಚರಣೆಗೆ ಕೊರೊನಾ ಅಡ್ಡಿಯಾಗಿದೆ. ಏಪ್ರಿಲ್ 1ರಂದು ಸಿದ್ಧಗಂಗಾ ಮಠದ ಶಿವೈಕ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳ ಜನ್ಮದಿನ. ಆದ್ರೆ ಕೊರೊನಾ ಎರಡನೇ ಅಲೆಯ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ಸಿದ್ಧಗಂಗಾ ಮಠ ನಿರ್ಧರಿಸಿದೆ.
ಶಿವೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಿಸಲು ಸಿದ್ಧಗಂಗಾ ಮಠ ಸಿದ್ದತೆ ಮಾಡಿಕೊಂಡಿತ್ತು. ಆದ್ರೆ ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಶುರುವಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ನಿನ್ನೆ ಸಿಎಂ ಬಿ.ಎಸ್. ಯಡಿಯೂರಪ್ಪ ಕೊರೊನಾ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ. ಹೀಗಾಗಿ ಸರಳವಾಗಿ ಶಿವಕುಮಾರ ಸ್ವಾಮೀಜಿಗಳ ಹುಟ್ಟುಹಬ್ಬವನ್ನು ಆಚರಿಸಲು ಮಠ ನಿರ್ಧರಿಸಿದೆ. ಕೊರೊನಾ ಮಾರ್ಗಸೂಚಿಯ ಪ್ರಕಾರ ಎಲ್ಲಾ ರೀತಿ ಸಿದ್ಧತೆಗಳನ್ನು ಮಠದ ಸಿಬ್ಬಂದಿ ಮಾಡಿಕೊಳ್ಳುತ್ತಿದ್ದಾರೆ.
ಏಪ್ರಿಲ್ 1 ಗದ್ದುಗೆ ಪೂಜೆ ನೆರವೇರಿಸಿ ಹುಟ್ಟುಹಬ್ಬ ಆಚರಣೆ ಮಾಡಲು ಸಿದ್ಧತೆ ನಡೆದಿದೆ. ಹಾಗೂ ಮಠಕ್ಕೆ ಭಕ್ತಾದಿಗಳು ಬರುವುದಕ್ಕೆ ನಿರ್ಬಂಧ ಇಲ್ಲ. ಮಠಕ್ಕೆ ಭಕ್ತರು ಬರಬಹುದು ಆದರೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು. ಭಕ್ತರು ಕೊವಿಡ್ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿರುತ್ತದೆ. ಕೊವಿಡ್ ಹಿನ್ನೆಲೆ ಉಪರಾಷ್ಟ್ರಪತಿ ಕಾರ್ಯಕ್ರಮವೂ ರದ್ದು ಮಾಡಲಾಗಿದೆ ಎಂದು ಸರಳವಾಗಿ ಆಚರಣೆ ಬಗ್ಗೆ ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀಗಳು ತಿಳಿಸಿದ್ದಾರೆ.
ಇದನ್ನೂ ಓದಿ: 111 ವರ್ಷ ಕಾಲ ಬದುಕಿದ್ದ ಸಿದ್ದಗಂಗಾ ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ವೀರಾಪುರದಲ್ಲಿ ತಲೆ ಎತ್ತಲಿದೆ!