111 ವರ್ಷ ಕಾಲ ಬದುಕಿದ್ದ ಸಿದ್ದಗಂಗಾ ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ವೀರಾಪುರದಲ್ಲಿ ತಲೆ ಎತ್ತಲಿದೆ!

siddaganga Shivakumara swamiji statue ಸುಮಾರು ಎರಡು ವರ್ಷಗಳ ಕಾಲ ಶ್ರೀಗಳ 111 ಅಡಿ ಎತ್ತರದ ಪ್ರತಿಮೆಯು ಸಂಪೂರ್ಣ ಕಾಂಕ್ರೀಟಿನಲ್ಲಿಯೇ ನಿರ್ಮಾಣಗೊಳ್ಳಲಿದೆ. ಶ್ರೀಗಳ ಪ್ರತಿಮೆ ನಿರ್ಮಾಣವನ್ನು ಪಿಎಸ್‌ಎಪಿ ಅರ್ಕಿಟೆಕ್ಟ್ ಕಂಪನಿಗೆ ನೀಡಲಾಗಿದೆ.

111 ವರ್ಷ ಕಾಲ ಬದುಕಿದ್ದ ಸಿದ್ದಗಂಗಾ ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ವೀರಾಪುರದಲ್ಲಿ ತಲೆ ಎತ್ತಲಿದೆ!
ಲಿಂಗೈಕ್ಯ ಸಿದ್ದಗಂಗಾ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಸಕಲ ಸಿದ್ಧತೆ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Feb 12, 2021 | 5:58 PM

ರಾಮನಗರ: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ 111 ಅಡಿ ಎತ್ತರದ ಪ್ರತಿಮೆ ಶ್ರೀಘ್ರದಲ್ಲೇ ತಲೆ ಎತ್ತಲಿದ್ದು, ಸ್ವಾಮೀಜಿಗಳ ಹುಟ್ಟೂರು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಸಿದ್ದಗಂಗಾ ಶ್ರೀಗಳ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಮತ್ತೊಮ್ಮೆ ಚಾಲನೆ ಸಿಗಲಿದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚಾಲನೆ ದೊರೆಯಲಿದ್ದು, 17 ಎಕರೆ ಸರಕಾರಿ ಭೂಮಿಯಲ್ಲಿ ಶ್ರೀಗಳ ಪ್ರತಿಮೆ ನಿರ್ಮಾಣ ಕಾರ್ಯ ನಡೆಯಲಿದೆ.

ಅಂದ ಹಾಗೆ ಶ್ರೀಗಳ ಹುಟ್ಟೂರಾದ ವೀರಾಪುರದಲ್ಲಿನ ಬೆಟ್ಟದ ಮೇಲೆ ಶ್ರೀಗಳು ತಮ್ಮ ಬಾಲ್ಯದಲ್ಲಿ ಆಟವಾಡುತ್ತಿದ್ದರು. ಇಲ್ಲಿಯೇ ಕುಳಿತು ಧ್ಯಾನಾಸಕ್ತರಾಗುತ್ತಿದ್ದರು. ಶಿವಗಂಗೆ ಬೆಟ್ಟದೆಡೆಗೆ ಯಾವಾಗಲೂ ನೋಡುತ್ತಿದ್ದ ಶ್ರೀಗಳು, ವೀರಾಪುರ ಬೆಟ್ಟದ ಮೇಲೆ ಕುಳಿತು ಧ್ಯಾನಾಸಕ್ತರಾಗುತ್ತಿದ್ದರು. ಶಿವಗಂಗೆ ಬೆಟ್ಟ ನೋಡುತ್ತಲೇ, ತಮ್ಮ ಮನೆದೇವರನ್ನು ನೆನೆಯುತ್ತಿದ್ದರಂತೆ. ಹೀಗಾಗಿ ಶಿವಗಂಗೆ ಬೆಟ್ಟಕ್ಕೆ ಅಭಿಮುಖವಾಗಿ, ನಿಂತ ಭಂಗಿಯಲ್ಲಿ ಶ್ರೀಗಳ ಪ್ರತಿಮೆ ನಿರ್ಮಾಣವಾಗುತ್ತಿರುವುದು ವಿಶೇಷ.

ಪ್ರತಿಮೆಯು ಸಂಪೂರ್ಣ ಕಾಂಕ್ರೀಟಿನಲ್ಲಿಯೇ ನಿರ್ಮಾಣ ಸುಮಾರು ಎರಡು ವರ್ಷಗಳ ಕಾಲ ಶ್ರೀಗಳ 111 ಅಡಿ ಎತ್ತರದ ಪ್ರತಿಮೆಯು ಸಂಪೂರ್ಣ ಕಾಂಕ್ರೀಟಿನಲ್ಲಿಯೇ ನಿರ್ಮಾಣಗೊಳ್ಳಲಿದೆ. ಶ್ರೀಗಳ ಪ್ರತಿಮೆ ನಿರ್ಮಾಣವನ್ನು ಪಿಎಸ್‌ಎಪಿ ಅರ್ಕಿಟೆಕ್ಟ್ ಕಂಪನಿಗೆ ನೀಡಲಾಗಿದೆ. ಈ ಕಂಪನಿ ಈಗಾಗಲೇ ಗದಗ ಜಿಲ್ಲೆಯಲ್ಲಿ ಬಸವೇಶ್ವರರ 112 ಅಡಿ ಎತ್ತರದ ಪ್ರತಿಮೆ ನಿರ್ಮಿಸಿದ್ದು, ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರ ಸ್ವಾಮಿಯ ಪ್ರತಿಮೆಯನ್ನ ನಿರ್ಮಿಸುತ್ತಿದೆ.

Lingaikya siddaganga sri

ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಸಿದ್ಧತೆ

ಈ ಹಿಂದೆ 2019 ರ ನವೆಂಬರ್ ತಿಂಗಳಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಮೆ ನಿರ್ಮಾಣ ಚಾಲನೆ ನೀಡಿದ್ದರು. ಇದೀಗ ಮತ್ತೊಮ್ಮೆ ಪ್ರತಿಮೆ ಕಾರ್ಯಕ್ಕೆ ಸದ್ಯದಲ್ಲೆ ಚಾಲನೆ ನೀಡಲಿದ್ದಾರೆ. ಗದಗದಲ್ಲಿನ ಬಸವೇಶ್ವರರ ಪ್ರತಿಮೆ 112 ಅಡಿ ಎತ್ತರ ಇದ್ದರೂ, ಸಿದ್ದಗಂಗಾ ಶ್ರೀಗಳ ಪ್ರತಿಮೆ ತಳಪಾಯ ಸೇರಿ 141 ಅಡಿ ಎತ್ತರದ ಪ್ರತಿಮೆ ಮುಂದಿನ ದಿನಗಳಲ್ಲಿ ನಿರ್ಮಾಣಗೊಳ್ಳಲಿದೆ. ಹೀಗಾಗಿ, ಈ ಪ್ರತಿಮೆಯನ್ನು ರಾಜ್ಯದಲ್ಲೆ ಅತೀ ಎತ್ತರದ ಪ್ರತಿಮೆ ಎನ್ನಬಹುದಾಗಿದೆ.

Lingaikya siddaganga sri

111 ಅಡಿ ಎತ್ತರದಲ್ಲಿ ನಿರ್ಮಾಣವಾಗಲಿದೆ ಸ್ವಾಮಿಜಿ ಪ್ರತಿಮೆ

ಸಿದ್ದಗಂಗಾ ಶ್ರೀಗಳು 111 ವರ್ಷ ಕಾಲ ಬದುಕಿದ್ದರು. ಹೀಗಾಗಿ ಅವರ ಪ್ರತಿಮೆಯು ಸಹ 111 ಅಡಿ ಎತ್ತರದಲ್ಲಿರಲಿದ್ದು, ಕೋಲು ಹಿಡಿದು ಖಾವಿಧಾರಿ ರೂಪದಲ್ಲಿ ಶ್ರೀಗಳ ಮೂರ್ತಿ ಸಾಕಷ್ಟು ವಿಶೇಷಗಳನ್ನು ಒಳಗೊಂಡಿದೆ. ಇದಲ್ಲದೇ ಪ್ರತಿಮೆ ಪಾತಳಕ್ಕೆ ಇಳಿಯಲು 111 ಮೆಟ್ಟಿಲುಗಳ ನಿರ್ಮಾಣ, ಮ್ಯೂಸಿಯಂ, ಧಾನ್ಯ ಕೇಂದ್ರ, ಶ್ರೀಗಳ ಜೀವನ ತೋರುವ ಆಧುನಿಕ ಆಡಿಯೋ, ವಿಡಿಯೋ ಸೌಲಭ್ಯ, ಭಕ್ತರು ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಉದ್ಯಾನ, ದಾಸೋಹ ಭವನ, ಯಾತ್ರಿಗಳಿಗಾಗಿ ಭವನಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಇನ್ನು ವೀರಾಪುರದಲ್ಲಿ ಶ್ರೀಗಳ ತಂದೆ ಹೊನ್ನೇಗೌಡ, ತಾಯಿ ಗಂಗಮ್ಮ ಅವರ ಸಮಾಧಿ ಸಹ ಇದೆ. ಹೀಗಾಗಿ ಇಲ್ಲಿಯೇ ಶ್ರೀಗಳ ದೇವಾಲಯವು ನಿರ್ಮಾಣಗೊಳ್ಳಲಿದೆ. ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಬೃಹತ್ ಪ್ರತಿಮೆ ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೆ ಆರ್ಕಷಣೀಯ ಕೇಂದ್ರವಾಗಲಿದೆ ಎಂಬುದು ವಿಶೇಷ. ಇನ್ನು ರಾಜ್ಯ ರಾಜ್ಯಧಾನಿ ಬೆಂಗಳೂರಿಗೆ ಸನಿಹದಲ್ಲೆ ಇರುವ ವೀರಾಪುರ ಗ್ರಾಮಕ್ಕೆ, ದಾಬಸ್ ಪೇಟೆ, ನೆಲಮಂಗಲ, ಸೋಲೂರು, ಶಿವಗಂಗೆ ಮೂಲಕವೂ ತಲುಪಬಹುದು.

ಸೋಲೂರು ಬಳಿ ಹೆದ್ದಾರಿಯಲ್ಲಿ ನಿಂತು ನೋಡಿದರೆ ಶ್ರೀಗಳೆ ನಡೆದು ಬರುವ ರೀತಿಯ ಅನುಭವವಾಗಲಿದೆ. ಅಷ್ಟೆ ಅಲ್ಲದೇ, ರಾಮನಗರದ ರೇವಣಸಿದ್ದೇಶ್ವರ ಬೆಟ್ಟದ ಮೇಲಿಂದ ನಿಂತು ನೋಡಿದರೂ, ಶ್ರೀಗಳ ಬೃಹತ್ ಮೂರ್ತಿಯನ್ನು ಕಾಣುವಂತೆ ನಿರ್ಮಾಣ ಮಾಡಲಾಗುತ್ತಿದೆ ಈ ಪ್ರತಿಮೆ.

ಇದನ್ನೂ ಓದಿ: ಇಂದು ಕಾಯಕ ಯೋಗಿ ಶಿವಕುಮಾರ ಶ್ರೀಗಳ 2ನೇ ವರ್ಷದ ಪುಣ್ಯಸ್ಮರಣೆ!

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್