Karnataka Budget Session: ಮುಖ್ಯಮಂತ್ರಿ ಹೇಳಿದ್ದಕ್ಕೆ ಕೂತಿದ್ದೆ; ಉಪ ಮುಖ್ಯಮಂತ್ರಿ ಹೇಳಿದಾಗಲೂ ಕೂರಬೇಕಾ? ಅರ್ ಅಶೋಕ
ನೀವು ಸಾಕಷ್ಟು ಅನುಭವಿಗಳು, ನಿಮಗೂ ಎಲ್ಲ ಗೊತ್ತಿದೆ ಅಂತ ಶಿವಕುಮಾರ್, ಅಶೋಕಗೆ ಹೇಳುತ್ತಾ ಮಾತು ಶುರುಮಾಡುತ್ತಾರೆ. ಹಿಂದೆ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆಯನ್ನು ಜಾರಿ ಮಾಡಿದಾಗ ದೇಶದಲ್ಲಿ ಈ ಸಮುದಾಯಗಳಿಗೆ ₹27,000 ಕೋಟಿ ಮೀಸಲಿಡಲಾಗಿತ್ತು. ಜನಸಂಖ್ಯೆ ಆಧಾರದ ಮೇಲೆ ಈ ಸಮುದಾಯಗಳಿಗೆ ಅನುಕೂಲವಾಗಲಿ ಅಂತ ಕಾಯ್ದೆ ಮಾಡಿದೆವು ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು, 13 ಮಾರ್ಚ್: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣ ಸರ್ಕಾರ ಬೇರೆಡೆ ವರ್ಗಯಿಸಿದನ್ನು ಕುರಿತಂತೆ ವಿರೋಧ ಪಕ್ಷದ ನಾಯಕ ಅರ್ ಅಶೋಕ ಸದನದ ಗಮನ ಸೆಳೆದರು ಮತ್ತು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರ ಕರ್ನಾಟಕ ರಾಜ್ಯವನ್ನು (Karnataka state) ಒಂದು ಮಾದರಿ ರಾಜ್ಯವನ್ನಾಗಿ ಪರಿವರ್ತಸುವೆಡೆ ಪ್ರಯತ್ನಶೀಲವಾಗಿದ್ದರೆ ಅದನ್ನು ಮಾಡಲಿ ತಮ್ಮದೇನೂ ಆಭ್ಯಂತರವಿಲ್ಲ ಎಂದು ಹೇಳುತ್ತಿದ್ದಾಗ, ಶಿವಕುಮಾರ್ ಅವರನ್ನು ತಡೆಯುತ್ತಾರೆ. ಅದಕ್ಕೆ ಅಶೋಕ ಮುಖ್ಯಮಂತ್ರಿಯವರು ಹೇಳಿದಾಗ ಕೂತ್ಕೊಂಡಿದ್ದೆ, ನೀವು ಹೇಳಿದಾಗಲೂ ಕೂರಬೇಕಾ ಅನ್ನುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ನಡುವೆ ಶಾಸಕರಿಗೆ ಡಿಕೆ ಶಿವಕುಮಾರ್ ಡಿನ್ನರ್ ಪಾರ್ಟಿ