ಮಂಗಳೂರಿನಲ್ಲಿ ದುಷ್ಕೃತ್ಯಕ್ಕೆ ಸಂಚು: ಪಿಸ್ತೂಲ್, ಜೀವಂತ ಗುಂಡುಗಳ ಸಮೇತ ಐವರ ಬಂಧನ
ಮಂಗಳೂರಿನಲ್ಲಿ ಪೊಲೀಸರು ಒಂದು ದೊಡ್ಡ ಅಪರಾಧ ಜಾಲವನ್ನು ಬೇಧಿಸಿದ್ದಾರೆ. ಕೇರಳ ಮೂಲದ ಐವರು ನಟೋರಿಯಸ್ ಅಪರಾಧಿಗಳನ್ನು ಬಂಧಿಸಲಾಗಿದ್ದು, ಅವರಿಂದ ಮೂರು ಪಿಸ್ತೂಲುಗಳು, ಸಜೀವ ಗುಂಡುಗಳು ಮತ್ತು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ವಾಮಂಜೂರಿನಲ್ಲಿ ನಡೆದ ಮಿಸ್‌ಫೈರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಮಂಗಳೂರು, ಮಾರ್ಚ್ 13: ಅವರೆಲ್ಲಾ ಕೇರಳ ಮೂಲದ ನಟೋರಿಯಸ್ ಕ್ರಿಮಿನಲ್ಗಳು (Criminals). ಅಕ್ರಮ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಕ್ರೈಂ (crime) ಮಾಡುತ್ತಿದ ಪಡೆ. ವಾಮಂಜೂರಿಲ್ಲಿ ಮುಸ್ಲಿಂ ಧರ್ಮಗುರುವಿನ ಮೇಲಾದ ಮಿಸ್ ಫೈಯರ್ ಪ್ರಕರಣದ ತನಿಖೆ ಮಾಡುವ ವೇಳೆ ಅವರೆಲ್ಲಾ ಅಂದರ್ ಆಗಿದ್ದಾರೆ. ಇನ್ನು ಅವರ ಬಳಿ ಜೀವಂತ ಮದ್ದುಗುಂಡುಗಳಿರುವ ಪಿಸ್ತೂಲ್ಗಳು ಸಿಕ್ಕಿದ್ದು, ಕರಾವಳಿಯಲ್ಲಿ ಏನಾಗುತ್ತಿದೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಜನವರಿಯಲ್ಲಿ ಮಂಗಳೂರು ಹೊರವಲಯದ ವಾಮಂಜೂರು ಎಂಬಲ್ಲಿ ಮುಸ್ಲಿಂ ಧರ್ಮಗುರು ಸಫ್ವಾನ್ ಎಂಬುವರ ಮೇಲೆ ಮಿಸ್ ಫೈಯರ್ ಆಗಿತ್ತು. ಅಕ್ರಮ ಪಿಸ್ತೂಲ್ನಿಂದ ಅದ್ದು ಅಲಿಯಾಸ್ ಬದ್ರುದ್ಧೀನ್ ಗುಂಡು ಹೊಡೆದ ಆರೋಪದ ಮೇಲೆ ಬಂಧಿತನಾಗಿದ್ದ. ಇನ್ನು ಈ ಬಗ್ಗೆ ತನಿಖೆಗೆ ಇಳಿದ ಪೊಲೀಸರು ಸತತ ಎರಡು ತಿಂಗಳ ಕಾರ್ಯಾಚರಣೆ ಬಳಿಕ ಕೇರಳ ಮೂಲಕ ನಟೋರಿಯಸ್ ಅಂತರಾಜ್ಯ ಕ್ರಿಮಿನಲ್ಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ವಿದ್ಯಾರ್ಥಿ ನಾಪತ್ತೆ ಕೇಸ್: ಮನೆಗೆ ಹೋಗಲು ಒಪ್ಪದ ದಿಗಂತ್, ಪೊಲೀಸ್ ವರದಿ
ಕೇರಳದ ಕಾಸರಗೋಡು ಮೂಲದವರಾದ ಮನ್ಸೂರ್, ನೌಫಾಲ್, ಅಬ್ದುಲ್ ಲತೀಫ್ ಅಲಿಯಾಸ್ ತೋಕು ಲತೀಫ್, ಮೊಹಮ್ಮದ್ ಅಜ್ಗರ್, ಮೊಹಮ್ಮದ್ ಸಾಲಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧತರಿಂದ ಮೂರು ಕಂಟ್ರಿಮೇಡ್ ಪಿಸ್ತೂಲ್, 6 ರೌಂಡ್ಸ್ ಲೈವ್ ಬುಲೆಟ್ಸ್, 12 ಕೆಜಿ ಗಾಂಜಾ, ಕಾರು, ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಸಿಸಿಬಿ ಎಸಿಪಿ ಮನೋಜ್ ಕುಮಾರ್, ಇನ್ಸ್ಪೆಕ್ಟರ್ ರಫೀಕ್, ಪಿಎಸ್ಐ ಶರಣಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳು ಈ ಕೇರಳ ಮತ್ತು ಕರ್ನಾಟಕದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ.
ಅದ್ದು ಅಲಿಯಾಸ್ ಬದ್ರುದ್ದಿನ್ ವಾಮಂಜೂರಿನಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದ. ಈತನ ಅಂಗಡಿಯಲ್ಲಿದ್ದ ಅಕ್ರಮ ಪಿಸ್ತೂಲಿನಿಂದ ಸಫ್ವಾನ್ ಎಂಬಾತನಿಗೆ ಮಿಸ್ ಆಗಿ ಗುಂಡೇಟು ಬಿದ್ದಿತ್ತು. ಆದರೆ ಈ ವಿಚಾರ ಪೊಲೀಸರ ಗಮನಕ್ಕೆ ಬರಬಾರದೆಂದು ಗುಂಡೇಟು ತಿಂದ ಸಫ್ವಾನ್ ಇದು ಭಾಸ್ಕರ್ ಎಂಬಾತನಿಗೆ ಸೇರಿದ ಬಂದೂಕಾಗಿದ್ದು, ಆಟಿಕೆ ಪಿಸ್ತೂಲ್ ಎಂದುಕೊಂಡು ಸುಮ್ಮನೆ ನೋಡುತ್ತಿದ್ದಾಗ ಮಿಸ್ ಆಗಿ ಫೈರ್ ಆಗಿದೆ ಎಂದು ಸುಳ್ಳು ಕತೆ ಕಟ್ಟಿದ್ದ. ತನಿಖೆ ವೇಳೆ ಮಿಸ್ ಫೈರ್ ಆದ ಪಿಸ್ತೂಲ್ನ್ನು ಕೇರಳದಿಂದ ಇಮ್ರಾನ್ ಎಂಬಾತ ಅಕ್ರಮವಾಗಿ ಪಡೆದುಕೊಂಡಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ಈ ಜಾಡು ಹಿಡಿದ ಪೊಲೀಸರು ಈ ಜಾಲವನ್ನು ಬೇಧಿಸಿದ್ದಾರೆ.
ಇದನ್ನೂ ಓದಿ: ಕೊಟ್ಟ ಹಣ ಕೇಳಿದ್ದಕ್ಕೆ ಕಿಡ್ನಾಪ್ ಕೇಸ್ ಹಾಕಿಸಿಕೊಂಡ ಮಹಿಳೆ: ಹಣ ಕೇಳಿದ್ದಕ್ಕೆ ವಂಚಕನ ಪತ್ನಿ ಕಟ್ಟಿದ ಕಥೆ ಅಬ್ಬಬ್ಬಾ..
ಸದ್ಯ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ. ಸಿಸಿಬಿ ಪೊಲೀಸರು ವಿಚಾರಣೆ ತೀರ್ವಗೊಳಿಸಿದ್ದಾರೆ. ಈ ಪಿಸ್ತೂಲ್ಗಳನ್ನು ಯಾಕೆ ಸಂಗ್ರಹಿಸುತ್ತಿದ್ದರು. ಇವರ ಉದ್ದೇಶವೇನು? ಇನ್ನು ಈ ಜಾಲದಲ್ಲಿ ಯಾರ್ಯಾರು ಇದ್ದಾರೆ ಎನ್ನುವುದು ನಿಷ್ಪಕ್ಷಪಾತ ತನಿಖೆ ಮೂಲಕ ಗೊತ್ತಾಗಲಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.