ಪರಾರಿಯಾಗಲು ಯತ್ನಿಸಿದ ಗರುಡ ಗ್ಯಾಂಗಿನ ಇಸಾಕ್ಗೆ ಗುಂಡೇಟು ಕೊಟ್ಟು ಹಿಡಿದ ಪೊಲೀಸ್ರು
ನಟೋರಿಯಸ್ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಮಣಿಪಾಲ ಪೊಲೀಸರು ಫೈರಿಂಗ್ ಮಾಡಿರುವಂತಹ ಘಟನೆ ಉಡುಪಿ ತಾಲೂಕಿನ ಹಿರಿಯಡ್ಕದಲ್ಲಿ ನಡೆದಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಇನ್ಸ್ಪೆಕ್ಟರ್ ದೇವರಾಜ್ರಿಂದ ಫೈರಿಂಗ್ ಮಾಡಿದ್ದು, ಸದ್ಯ ಇಸಾಕ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಾ.4ರಂದು ಬಂಧಿಸಲು ಹೋದಾಗ ಎಸ್ಕೇಪ್ ಆಗಿದ್ದ.

ಉಡುಪಿ, ಮಾರ್ಚ್ 12: ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಪರಾರಿಯಾಗಲು ಯತ್ನಿಸಿದ್ದ ನಟೋರಿಯಸ್ ಗರುಡ ಗ್ಯಾಂಗ್ (Garud Gang) ಸದಸ್ಯ ಇಸಾಕ್ ಮೇಲೆ ಪೊಲೀಸರು ಫೈರಿಂಗ್ (shootout) ಮಾಡಿರುವಂತಹ ಘಟನೆ ಉಡುಪಿ ತಾಲೂಕಿನ ಹಿರಿಯಡ್ಕದಲ್ಲಿ ನಡೆದಿದೆ. ಮಣಿಪಾಲ ಇನ್ಸ್ಪೆಕ್ಟರ್ ದೇವರಾಜ್ ಫೈರಿಂಗ್ ಮಾಡಿದ್ದಾರೆ. ಸದ್ಯ ಗಾಯಗೊಂಡ ಇಸಾಕ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ನಟೋರಿಯಸ್ ಗರುಡ ಗ್ಯಾಂಗ್ನ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಇಸಾಕ್ನನ್ನು ದರೋಡೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನೆಲಮಂಗಲ ಪೊಲೀಸರು ಬೇಟೆ ಆಡಿದ್ದರು. ಮಾ. 4 ರಂದು ಬಂಧಿಸಲು ಬಂದ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ತನ್ನ ಜೀಪ್ನಲ್ಲಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ.
ಇದನ್ನೂ ಓದಿ: ಮಣಿಪಾಲ: ಸಿನಿಮಾ ಸ್ಟೈಲ್ನಲ್ಲಿ ಪೊಲೀಸರ ರೋಚಕ ಚೇಸಿಂಗ್, ಗರುಡ ಗ್ಯಾಂಗ್ನ ಕ್ರಿಮಿನಲ್ ಅರೆಸ್ಟ್
ಮಣಿಪಾಲದ ಮಣ್ಣಪಳ್ಳದ ನಿರ್ಜನ ಪ್ರದೇಶದಲ್ಲಿ ಜೀಪ್ ನಿಲ್ಲಿಸಿ ಪರಾರಿಯಾಗಿದ್ದ. ಇದೀಗ 8 ದಿನಗಳ ಬಳಿಕ ಪೊಲೀಸರಿಗೆ ಇಸಾಕ್ ಪತ್ತೆಯಾಗಿದ್ದ. ಹೀಗಾಗಿ ಬಂಧಿಸಲು ಯತ್ನಿಸಿದಾಗ ಮತ್ತೆ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಶೂಟ್ ಮಾಡಿ ಆರೋಪಿಯನ್ನ ಬಂಧಿಸಲಾಗಿದೆ.
ಪೊಲೀಸರ ರೋಚಕ ಚೆಸಿಂಗ್
ಇಸಾಕ್ ಬೆನ್ನು ಬಿದ್ದಿದ್ದ ಬೆಂಗಳೂರಿನ ನೆಲಮಂಗಲ ಠಾಣೆ ಪೊಲೀಸರು ಆರೋಪಿ ಜಾಡು ಹಿಡಿದು ಉಡುಪಿಯ ಮಣಿಪಾಲಕ್ಕೆ ಬಂದಿದ್ದರು. ಈ ವೇಳೆ ಕಾರಿನಲ್ಲಿ ಯುವತಿಯೋರ್ವಳೊಂದಿಗೆ ಜಾಲಿ ಜಾಲಿ ಮಾಡಲು ಮಣಿಪಾಲಕ್ಕೆ ಬಂದಿದ್ದ ಇಸಾಕ್ ಎಂಬ ನಟೋರಿಯಸ್ ಕ್ರಿಮಿನಲ್ ಪೊಲೀಸರನ್ನ ಕಂಡ ಕೂಡಲೇ ತನ್ನ ಕಾರಿನಲ್ಲಿ ಎಸ್ಕೇಪ್ ಆಗೋದಕ್ಕೆ ಯತ್ನಿಸಿದ್ದ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಸ್ಪೀಡ್ ಆಗಿ ಗಾಡಿ ಚಲಾಯಿಸಿ ನಾಲ್ಕು ಕಾರು ಹಾಗೂ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದ.
ಈ ವೇಳೆ ನೆಲಮಂಗಲ ಪೊಲೀಸರು ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಕೂಡಲೇ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ನೇತೃತ್ವದ ತಂಡ ಆರೋಪಿಯನ್ನ ಸಾಹಸಮಯವಾಗಿ ಚೇಸ್ ಮಾಡಿ ಮಣಿಪಾಲದ ಮಣ್ಣಪಳ್ಳದ ಬಳಿ ಕಾರಿನೊಂದಿಗೆ ಸೆರೆ ಹಿಡಿದಿದ್ದಾರೆ. ಒಂದಿಷ್ಟು ಸೆಕೆಂಡ್ ಲೇಟ್ ಆಗಿದ್ರೆ, ಈ ಕ್ರಿಮಿನಲ್ ಮಿಸ್ ಆಗ್ತಿದ್ದ! ಆದರೆ ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ಅವರ ತ್ವರಿತ ಕಾರ್ಯಾಚರಣೆ ಫಲ ನೀಡಿದೆ.
ಇದನ್ನೂ ಓದಿ: ಉಡುಪಿಯಲ್ಲಿ ದುಬೈ ದೇಶದ ಕಾರುಗಳ ಓಡಾಟ: ಫೋಟೋಸ್ ನೋಡಿ
ಗರುಡ ಗ್ಯಾಂಗ್, ಈ ಹೆಸರು ಕೇಳಿದರೆ ಉಡುಪಿ-ಮಂಗಳೂರು ಬೆಲ್ಟ್ನಲ್ಲಿ ಯಾರಿಗೂ ನಿದ್ದೆ ಹೋಗಲ್ಲ. ಕಳ್ಳತನ, ಮಾದಕವಸ್ತು ಗ್ಯಾಂಗ್, ಮರ್ಡರ್ ಕೇಸ್ಗಳಲ್ಲಿ ತೊಡಗಿಸಿಕೊಂಡಿರೋ ಈ ಗ್ಯಾಂಗ್ನ ಹಿಂದೆ ಇರೋದು ಇಸ್ಸಾಕ್ ತರದ ಕ್ರಿಮಿನಲ್ಸ್. ಇವರ ಸ್ಟೈಲ್ನಲ್ಲಿಯೇ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಸಲೀಸಾಗಿ ಎಸ್ಕೇಪ್ ಆಗೋದು. ಆದರೆ ಮಣಿಪಾಲ ಪೊಲೀಸರ ಮುಂದೆ ಈ ಆಟ ನಡೆದಿಲ್ಲ ಈ ಸಲ ಸಿಕ್ಕಿಬಿದ್ದಿದ್ದ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.