ದೃಶ್ಯ ಸಿನಿಮಾ ನೋಡಿ ಕೊಲೆ ಮಾಡಿದವ ಪ್ರತಿಯತಮೆ ಜೊತೆ ಸಂಪರ್ಕಕ್ಕೆ ಬಂದ ಮೇಲೆ ಸಿಕ್ಕಿಬಿದ್ದ
50 ವರ್ಷದ ಮಹಿಳೆಯನ್ನು ಕೊಲೆ ಮಾಡಿ ಕಸದ ಯಾರ್ಡ್ ಎಸೆದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಲಕ್ಷ್ಮಣ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಕನ್ನಡ ಚಲನಚಿತ್ರದ ಪ್ರಭಾವಕ್ಕೆ ಒಳಗಾಗಿ ಚಿನ್ನಕ್ಕಾಗಿ ಕೊಲೆ ಮಾಡಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ. ನಾಲ್ಕು ತಿಂಗಳ ತನಿಖೆಯ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.

ಬೆಂಗಳೂರು, ಮಾರ್ಚ್ 11: ಮಹಿಳೆಯೋರ್ವಳನ್ನು ಕೊಲೆ ಮಾಡಿ ಕಸ ಡಂಪಿಂಗ್ ಯಾರ್ಡ್ನಲ್ಲಿ ಹಾಕಿದ್ದ ಪ್ರಕರಣವನ್ನು ಕೊತ್ತನೂರು ಠಾಣೆ ಪೊಲೀಸರು (Police) ಬೇಧಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಲಕ್ಷ್ಮಣ್ ಬಂಧಿತ ಆರೋಪಿ. ಕೊಲೆಯಾದ ಮೇರಿ (50) ಕೊತ್ತನೂರಿನ ನಾಗೇನಹಳ್ಳಿ ಸ್ಲಂ ಬೋರ್ಡ್ನಿಂದ 2024ರ ನವಂಬರ್ 26 ರಂದು ಕಾಣೆಯಾಗಿದ್ದರು. ಇದೇ ಸ್ಲಂ ಬೋರ್ಡ್ನಲ್ಲಿ ವಾಸವಾಗಿದ್ದ ಆರೋಪಿ ಲಕ್ಷ್ಮಣ ಕೂಡ ಅಂದಿನಿಂದ ಕಾಣೆಯಾಗಿದ್ದನು.
ಇದರಿಂದ ಅನುಮಾನಗೊಂಡ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಲಕ್ಷ್ಮಣ ಮತ್ತು ಮೇರಿಗಾಗಿ ಹುಡುಕಾಟ ನಡೆಸಿದರು. ನಾಲ್ಕು ತಿಂಗಳ ನಿರಂತರ ಹುಡುಕಾಟ ಬಳಿಕ ಆರೋಪಿ ಲಕ್ಷ್ಮಣ ಸಿಕ್ಕಿಬಿದ್ದಿದ್ದಾನೆ. ಆರೋಪಿ ಲಕ್ಷ್ಮಣನನ್ನು ವಿಚಾರಣೆಗೆ ಒಳಪಡಿಸಿದಾಗ, ಕೊಲೆ ರಹಸ್ಯವನ್ನು ಬಾಯಿ ಬಿಟ್ಟಿದ್ದಾನೆ. ಕನ್ನಡದ ದೃಶ್ಯ ಚಲನಚಿತ್ರ ನೋಡಿದ ಬಳಿಕ ಕೊಲೆ ಮಾಡಲು ಪ್ಲಾನ್ ಮಾಡಿದ್ದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.
ದೃಶ್ಯ ಸಿನಿಮಾ ನೋಡಿ ಕೊಲೆಗೆ ಸಂಚು
ಮೇರಿ ಪತಿ ನಿಧನವಾಗಿದ್ದು, ಒಂಟಿಯಾಗಿ ವಾಸ ಮಾಡುತ್ತಿದ್ದರು. ಮೇರಿ ಮೈಮೇಲಿದ್ದ 50 ಗ್ರಾಂ ಚಿನ್ನವನ್ನು ಆರೋಪಿ ಲಕ್ಷ್ಮಣ ಗಮನಿಸಿದ್ದನು. ಆರೋಪಿ ಲಕ್ಷ್ಮಣ್ 2 ಲಕ್ಷ ಸಾಲ ಮಾಡಿಕೊಂಡಿದ್ದನು. ಕನ್ನಡದ ದೃಶ್ಯ ಸಿನಿಮಾ ನೋಡಿ ಮೇರಿಯನ್ನು ಕೊಲೆ ಮಾಡಿ, ಚಿನ್ನ ಎಗರಿಸುವುದಾಗಿ ಪ್ಲಾನ್ ಮಾಡಿದ್ದಾನೆ.
ನವಂಬರ್ 25 ರಂದು ಮೇರಿ ಕೊಲೆ ಮಾಡಲು ಸ್ಕೆಚ್ ಹಾಕಿದ್ದನು. ಅದಕ್ಕಾಗಿ ಮೇರಿ ಮನೆಯ ಕರೆಂಟ್ ಕಟ್ ಮಾಡಿದ್ದನು. ಮನೆಯಲ್ಲಿ ಒಬ್ಬಳೆ ಇರುತ್ತಾಳೆ, ಕರೆಂಟ್ ಸರಿ ಮಾಡಲು ನನ್ನನ್ನೇ ಕರಿತಾಳೆ ಎಂದು ಲಕ್ಷ್ಮಣ ಊಹಿಸಿದ್ದನು. ಈ ವೇಳೆ ಕೊಲೆ ಮಾಡಲು ಲಕ್ಷ್ಮಣ್ ಸಂಚು ಹೂಡಿದ್ದನು. ಆದರೆ, ಕರೆಂಟ್ ರಿಪೇರಿ ಮಾಡಲು ಮೇರಿ, ಲಕ್ಷ್ಮಣ್ನನ್ನ ಕರೆಯದೆ ಬೇರೊಬ್ಬರನ್ನು ಕರೆದಿದ್ದರು. ಹೀಗಾಗಿ, ಲಕ್ಷ್ಮಣ್ ನವೆಂಬರ್ 26 ರಂದು ಕೊಲೆ ಮಾಡಿದ್ದಾನೆ.
ಲಕ್ಷ್ಮಣ್ ಒಟ್ಟು ನಾಲ್ಕು ಸಿಮ್ ಕಾರ್ಡ್ ಬಳಸುತ್ತಿದ್ದನು. ನವೆಂಬರ್ 26 ರಂದು ಮೂರು ಸಿಮ್ ಕಾರ್ಡ್ ಡಿಜೆ ಹಳ್ಳಿ ಪತ್ನಿ ಮನೆಯಲ್ಲಿಟ್ಟಿದ್ದನು. ಈ ಮೂಲಕ ಪೊಲೀಸರ ದಾರಿ ತಪ್ಪಿಸಲು ಪ್ಲಾನ್ ಮಾಡಿದ್ದನು. ಕೊಲೆ ಮಾಡಿದ ಬಳಿಕ ಮಧ್ಯಾಹ್ನ 3 ಗಂಟೆಗೆ ಆಟೋದಲ್ಲಿ ಮೃತದೇಹ ಹಾಕಿಕೊಂಡು ಬಂದು ಬಾಗಲೂರಿನ ಕಸ ಡಂಪಿಂಗ್ ಯಾರ್ಡ್ನಲ್ಲಿ ಎಸೆದನು. ಬಳಿಕ, ಮೇರಿ ಮೊಬೈಲ್ ಅನ್ನು ಆನ್ ಮಾಡಿ ಕಸದ ಆಟೋದಲ್ಲಿ ಬಿಸಾಡಿ, 50 ಗ್ರಾಂ ಚಿನ್ನದ ಸಮೇತ ಪರಾರಿಯಾಗಿದ್ದನು.
ಇದನ್ನೂ ಓದಿ: ಬೆಂಗಳೂರಿನ ಮದರಸಾದಲ್ಲಿ ಬಾಲಕಿ ಮೇಲೆ ಹಲ್ಲೆ ಪ್ರಕರಣ: ದೂರು ಕೊಟ್ಟ ಪೋಷಕರಿಗೆ ಕೊಲೆ ಬೆದರಿಕೆ
ಪೊಲೀಸರು, ನವೆಂಬರ್ 26 ರಂದು ಆರೋಪಿ ಲಕ್ಷ್ಮಣ ಮೊಬೈಲ್ ಲೊಕೇಶನ್ ಹುಡುಕಿದಾಗ ಡಿಜೆ ಹಳ್ಳಿ ತೋರಿಸಿದೆ. ಇದರಿಂದ, ಪೊಲೀಸರು ಆತನ ಮೇಲೆ ಪೊಲೀಸರಿಗೆ ಅನುಮಾನ ಬಂದಿರಲಿಲ್ಲ.
ಪ್ರಿಯತಮೆಗೆ ಕರೆ ಮಾಡಿ ಸಿಕ್ಕಿಬಿದ್ದ ಲಕ್ಷ್ಮಣ
ಆರೋಪಿ ಲಕ್ಷ್ಮಣ ಇತ್ತೀಚೆಗೆ ಪ್ರಿಯತಮೆ ಜೊತೆಗೆ ಸಂಪರ್ಕದಲ್ಲಿರುವುದು ಪೊಲೀಸರಿಗೆ ಗೊತ್ತಾಗಿದೆ. ಆತನನ್ನ ಕರೆತಂದು ವಿಚಾರಿಸಿದಾಗ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ . ಬಳಿಕ ಪೊಲೀಸರು ಆತನ ಸಮ್ಮುಖದಲ್ಲೇ ಮೃತದೇಹ ಪತ್ತೆ ಮಾಡಿದ್ದಾರೆ. ಮಾರ್ಚ್ 9 ರಂದು ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮಹಿಳೆಯ ಚಿನ್ನಕ್ಕಾಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.