ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಉದ್ಯಮಿ ಪುತ್ರ ತರುಣ್ ರಾಜು ಬಂಧನ
ಡಿಆರ್ಐ ಅಧಿಕಾರಿಗಳು ನಟಿ ರನ್ಯಾ ರಾವ್ ಮತ್ತು ಉದ್ಯಮಿ ಪುತ್ರ ತರುಣ್ ರಾಜು ಅವರನ್ನ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಇಬ್ಬರೂ ವರ್ಷಗಳಿಂದ ಸ್ನೇಹಿತರಾಗಿದ್ದು, ತರುಣ್ ರಾಜು, ರನ್ಯಾ ರಾವ್ ಅವರಿಂದ ಚಿನ್ನ ತರಿಸಿಕೊಳ್ಳುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳ ಹೆಸರು ಕೂಡ ಕೇಳಿಬರುತ್ತಿದೆ.

ಬೆಂಗಳೂರು, ಮಾರ್ಚ್ 10: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ (Ranya Rao Gold Smuggling case) ರಹಸ್ಯ ಬಗೆದಷ್ಟು ಬಯಲಾಗುತ್ತಿದೆ. ತನಿಖೆ ವೇಳೆ ಒಂದೊಂದೇ ಸ್ಫೋಟಕ ಮಾಹಿತಿಗಳು ರಿವೀಲ್ ಆಗುತ್ತಿದೆ. ಈ ಗೋಲ್ಡ್ ಸ್ಮಗ್ಲಿಂಗ್ನಲ್ಲಿ ಸಚಿವರಿಬ್ಬರ ಕೈವಾಡ ಅಂತಾ ಬಿಜೆಪಿ ಬಾಂಬ್ ಹಾಕಿದ್ದು, ಇದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಹೀಗಿರುವಾಗಲೇ ಡಿಆರ್ಐ (DRI) ಅಧಿಕಾರಿಗಳಿಂದ ಫೈಸ್ಟಾರ್ ಹೋಟೆಲ್ ಮಾಲೀಕನ ತಮ್ಮನ ಮಗ ತರುಣ್ ರಾಜು ಎಂಬುವವರನ್ನು ಬಂಧಿಸಿದ್ದಾರೆ.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಅವರೊಂದಿಗೆ ಉದ್ಯಮಿ ಪುತ್ರ ತರುಣ್ ಹೆಸರು ಕೇಳಿಬಂದಿತ್ತು. ಹೀಗಾಗಿ ವಿಚಾರಣೆ ಮಾಡಿದ ಅಧಿಕಾರಿಗಳು ನಂತರ ಬಂಧಿಸಿದ್ದಾರೆ. ಇನ್ನು ನಟಿ ರನ್ಯಾ ರಾವ್ ಮತ್ತು ತರುಣ್ ರಾಜು ಇಬ್ಬರು ವರ್ಷಗಳಿಂದ ಸ್ನೇಹಿತರಾಗಿದ್ದರು. ರನ್ಯಾ ರಾವ್ರಿಂದ ತರುಣ್ ರಾಜು ಚಿನ್ನ ತರಿಸಿಕೊಳ್ಳುತ್ತಿದ್ದರು.
ಇದನ್ನೂ ಓದಿ: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಕರ್ನಾಟಕದ ಪ್ರಭಾವಿ ರಾಜಕಾರಣಿ ಹೆಸರು: ಯಾರವರು?
ರನ್ಯಾ ರಾವ್ ಚಿನ್ನದ ಸ್ಮಗ್ಲಿಂಗ್ ಬಗ್ಗೆ ಡಿಆರ್ಐ ಕೋರ್ಟ್ಗೆ ಇಂಚಿಂಚಾಗಿ ಮಾಹಿತಿ ನೀಡಿದೆ. ಬರೋಬ್ಬರಿ 12 ಕೋಟಿ 56 ಲಕ್ಷ ರೂ. ಮೌಲ್ಯದ ಚಿನ್ನ ಸ್ಮಗ್ಲಿಂಗ್ ಆಗಿದ್ದು, ಸ್ಮಗ್ಲಿಂಗ್ ಕೇಸ್‌ನಲ್ಲಿ ರನ್ಯಾ ‘ಮಾಸ್ಟರ್ ಮೈಂಡ್’ ಎಂದು ಉಲ್ಲೇಖ ಮಾಡಲಾಗಿದೆ. ಟಿಶ್ಯೂ ಪೇಪರ್ ಆ್ಯಂಡ್ ಬ್ಯಾಂಡೇಜ್ ಬಳಸಿ ಚಿನ್ನ ಸಾಗಾಟ ಮಾಡಿದ್ದಾರೆ. ಚಿನ್ನ ಸಾಗಾಟ ಕೇಸ್‌ನಲ್ಲಿ ದೊಡ್ಡಮಟ್ಟದಲ್ಲಿ ಸದಸ್ಯರಿರುವ ಮಾಹಿತಿ ಇದೆ. ಚಿನ್ನದ ಪ್ರಕರಣದಲ್ಲಿ ಅನೇಕ ಜನ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಪ್ರೊಟೋಕಾಲ್ ಹೇಗೆ ದುರ್ಬಳಕೆ ಮಾಡಲಾಗಿದೆ ಅನ್ನೋದನ್ನ ತಿಳಿಯೋಕೆ ರನ್ಯಾ ಫೋನ್ ರಿಟ್ರೀವ್ ಮಾಡಬೇಕಿದೆ ಅಂತ ಡಿಆರ್ಐ ಮಾಹಿತಿ ನೀಡಿದ್ದಾರೆ.
ರನ್ಯಾ ಮೊಬೈಲ್ ನೋಡುತ್ತಿದ್ದಂತೆ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ರನ್ಯಾ ಫೋನ್ನಲ್ಲಿ ರಾಜಕೀಯ ನಾಯಕರ ನಂಬರ್ ಪತ್ತೆ ಆಗಿದೆ. ಹಾಲಿ ಸಚಿವರು, ಮಾಜಿ ಸಚಿವರ ನಂಬರ್ಗಳು ಪತ್ತೆ ಆಗಿದ್ದು, ಕೆಲ ಪ್ರಮುಖ ವ್ಯಕ್ತಿಗಳೊಂದಿಗೆ ರನ್ಯಾ ನಿರಂತರ ಸಂಪರ್ಕದಲ್ಲಿದ್ರಂತೆ. ಇಷ್ಟೇ ಅಲ್ಲ, ಕೆಲ ಪೊಲೀಸ್ ಅಧಿಕಾರಿಗಳ ನಂಬರ್ಗಳು ಕೂಡ ಪತ್ತೆ ಆಗಿವೆ. ಹೀಗಾಗಿ ರನ್ಯಾ ಕಾಲ್ ಡಿಟೇಲ್ಸ್ ಅನ್ನ ಡಿಆರ್ಐ ತಂಡ ಕೆದಕುತ್ತಿದೆ.
ಇದನ್ನೂ ಓದಿ: ನಟಿ ರನ್ಯಾ ಹಿಂದಿದೆ ಗೋಲ್ಡ್ ಸ್ಲಗ್ಲಿಂಗ್ ಸಿಂಡಿಕೇಟ್: ಬಗೆದಷ್ಟು ಹೊರಬರುತ್ತಿವೆ ರಹಸ್ಯ
CDR ಪರಿಶೀಲನೆ ಮಾಡ್ತಿದ್ದು, ರನ್ಯಾ ಯಾರ ಯಾರ ಜೊತೆ ಮಾತನಾಡಿದ್ದಾರೆಂದು ಪರಿಶೀಲನೆ ಮಾಡ್ತಿದ್ದಾರೆ. ಇನ್ನೊಂದು ವಿಷಯ ಏನಂದರೆ ರನ್ಯಾ ಲ್ಯಾಪ್ಟಾಪ್ನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದ ಮಾಹಿತಿ ಇದೆ. ಹೀಗಾಗಿ ಡಿಜಿಟಲ್ ಸಾಕ್ಷ್ಯದ ಬಗ್ಗೆ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.