Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಹಬ್ಬಕ್ಕೆ ಕೌಂಟ್​ಡೌನ್: ಕೆಮಿಕಲ್ ಮಿಶ್ರಿತ ಬಣ್ಣ, ಆಹಾರ ಪದಾರ್ಥಗಳ ಮಾರಟಕ್ಕೆ ಬ್ರೇಕ್ ಹಾಕುವಂತೆ ಎಚ್ಚರಿಕೆ

ಹೋಳಿ ಹಬ್ಬದ ಹಿನ್ನೆಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ರಾಸಾಯನಿಕ ಬಣ್ಣಗಳ ಬಳಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ರಾಸಾಯನಿಕ ಬಣ್ಣಗಳು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಅವುಗಳ ಮಾರಾಟವನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಬ್ಬದ ಸಮಯದಲ್ಲಿ ಸಿಹಿ ತಿಂಡಿಗಳು ಮತ್ತು ಹಾಲಿನ ಉತ್ಪನ್ನಗಳಲ್ಲಿ ಕಲಬೆರಕೆ ಹೆಚ್ಚಾಗುವ ಸಾಧ್ಯತೆಯಿದ್ದು, ನಿಗಾ ವಹಿಸುವಂತೆ ಸೂಚಿಸಲಾಗಿದೆ.

ಹೋಳಿ ಹಬ್ಬಕ್ಕೆ ಕೌಂಟ್​ಡೌನ್: ಕೆಮಿಕಲ್ ಮಿಶ್ರಿತ ಬಣ್ಣ, ಆಹಾರ ಪದಾರ್ಥಗಳ ಮಾರಟಕ್ಕೆ ಬ್ರೇಕ್ ಹಾಕುವಂತೆ ಎಚ್ಚರಿಕೆ
ಹೋಳಿ ಹಬ್ಬಕ್ಕೆ ಕೌಂಟ್​ಡೌನ್: ಕೆಮಿಕಲ್ ಮಿಶ್ರಿತ ಬಣ್ಣ, ಆಹಾರ ಪದಾರ್ಥಗಳ ಮಾರಟಕ್ಕೆ ಬ್ರೇಕ್ ಹಾಕುವಂತೆ ಎಚ್ಚರಿಕೆ
Follow us
Vinay Kashappanavar
| Updated By: ಗಂಗಾಧರ​ ಬ. ಸಾಬೋಜಿ

Updated on: Mar 10, 2025 | 4:07 PM

ಬೆಂಗಳೂರು, ಮಾರ್ಚ್​ 10: ಬಣ್ಣಗಳ ಹಬ್ಬ ಹೋಳಿ ಹಬ್ಬಕ್ಕೆ (Holi) ಕೌಂಟ್ ಡೌನ್ ಶುರುವಾಗಿದೆ. ಪರಸ್ಪರ ಬಣ್ಣಗಳನ್ನು ಹಚ್ಚಿ ಸಂಭ್ರಮಿಸಲು ಜನರು ಕಾಯುತ್ತಿದ್ದಾರೆ. ಇತ್ತ ಮಾರುಕಟ್ಟೆಯಲ್ಲಿ ಕೂಡ ತರಾವರಿ ಬಣ್ಣಗಳು ತಯಾರಾಗುತ್ತಿವೆ. ಈ ಬೆನ್ನಲ್ಲೇ (food safety) ಆಹಾರ ಪದಾರ್ಥಗಳ ಸುರಕ್ಷಿತೆ ಹಾಗೂ ಗುಣಮಟ್ಟ ಇಲಾಖೆ ಅಲರ್ಟ್ ಆಗಿದ್ದು, ಕೆಮಿಕಲ್ ಮಿಶ್ರಿತ ಬಣ್ಣ ಮಾರಟಕ್ಕೆ ಕಡಿವಾಣ ಹಾಕುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಹೋಳಿ ಹಬ್ಬ ಬಂತಂದ್ರೆ ಸಾಕು ಅಂಗಡಿಗಳಲ್ಲಿ ತಹರೆವಾರಿ ಬಣ್ಣ ಸಿಗತ್ತೆ. ಆದರೆ ಈ ಬಣ್ಣಗಳಲ್ಲಿ ಕೆಮಿಕಲ್ ಹಾಕಿರುತ್ತಾರೆ. ಅದು ತ್ವಚೆಗೆ ತೊಂದರೆ ಉಂಟುಮಾಡುತ್ತದೆ. ಅದರಲ್ಲೂ ಈಗ ಬೇಸಿಗೆ ಬಿಸಿಲು ಇರುವುದರಿಂದ ರಾಸಾಯನಿಕ ಬಣ್ಣ ಚರ್ಮಕ್ಕೆ ಇನ್ನಷ್ಟು ಹಾನಿ ಉಂಟುಮಾಡುತ್ತದೆ. ಈ ಹಿನ್ನಲೆ ಆರೋಗ್ಯದ ದೃಷ್ಠಿಕೋದಿಂದ ಕೆಮಿಕಲ್ ಅಳವಡಿಸಿದ ಬಣ್ಣ ಮಾರಟಕ್ಕೆ ಬ್ರೇಕ್ ಹಾಕುವಂತೆ ಆಹಾರ ಪದಾರ್ಥಗಳ ಸುರಕ್ಷಿತೆ ಹಾಗೂ ಗುಣಮಟ್ಟ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಪ್ರವಾಸಿಗರ ಜೀವದ ಜೊತೆ ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರ ಚೆಲ್ಲಾಟ ಆರೋಪ: ಎಸ್​ಪಿ ಖಡಕ್​ ಸೂಚನೆ

ಇದನ್ನೂ ಓದಿ
Image
ಹೋಳಿ ಬಣ್ಣಗಳಿಂದ ನಿಮ್ಮ ಕೂದಲಿನ ರಕ್ಷಣೆಗೆ ಈ ಸಲಹೆ ಪಾಲಿಸಿ
Image
ಹೋಳಿ ಹಬ್ಬದಂದೇ ಚಂದ್ರಗ್ರಹಣ; ಈ 4 ರಾಶಿಯವರು ಜಾಗರೂಕರಾಗಿರಿ!
Image
ಹೋಳಿ ಹಬ್ಬದಂದು ಅಳಿಯನನ್ನು ಕತ್ತೆಯ ಮೇಲೆ ಕೂರಿಸಿ ಸವಾರಿ ಮಾಡಿಸುವ ಸಂಪ್ರದಾಯ
Image
ಇಲ್ಲಿದೆ ನೋಡಿ ಮಾರ್ಚ್‌ ತಿಂಗಳಲ್ಲಿ ಆಚರಿಸಲಾಗುವ ಹಬ್ಬ, ವ್ರತಾಚರಣೆ

ಇನ್ನು ಹೋಳಿ ಹಬ್ಬ ಹಿನ್ನೆಲೆ ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಸಿಹಿ ತಿಂಡಿಗಳು, ಖಾರದ ತಿಂಡಿಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳಾದ ತುಪ್ಪ, ಖೋಯಾ ಪನ್ನೀರ್ ಇತರೆ ಆಹಾರ ಉತ್ಪನ್ನಗಳ ಬೇಡಿಕೆಯು ಹೆಚ್ಚಾಗುವ ಸಂಭವವಿದ್ದು, ಸದರಿ ಉತ್ಪನ್ನಗಳ ಕಲಬೆರಕೆಯನ್ನು ತಡೆಗಟ್ಟುವುದು ಅಗತ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಕಛೇರಿಯ ಮೂಲಕ ಕೈಗೊಳ್ಳಲಾಗುವ ಆಹಾರ ಮಾದರಿಗಳ ಸಂಗ್ರಹಣೆ ಮತ್ತು ವಿಶ್ಲೇಷಣೆಯ ವಿಶೇಷ ಆಂದೋಲನಗಳಲ್ಲದೇ ತಮ್ಮ ವ್ಯಾಪ್ತಿಯಲ್ಲಿ ಜಿಲ್ಲಾ ಅಂಕಿತಾಧಿಕಾರಿಗಳು ಮತ್ತು ಆಹಾರ ಸುರಕ್ಷತಾಧಿಕಾರಿಗಳು ತಮ್ಮ ಹಂತದಲ್ಲಿಯೇ ಮಾರ್ಚ್​ 15 ರವರೆಗೆ ವಿಶೇಷ ಆಂದೋಲನ ಕೈಗೊಳ್ಳುವ ಮೂಲಕ ಆಹಾರ ಮಾದರಿಗಳನ್ನು ಸಂಗ್ರಹಿಸಿ ಆಯಾ ವಿಭಾಗದ ವಿಭಾಗೀಯ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೊಳಪಡಿಸಲು ಸೂಚಿಸಿದೆ.

ಇದನ್ನೂ ಓದಿ: ಬೆಂಗಳೂರು: ಕುಂಭಮೇಳ ಪ್ರವಾಸದ ಹೆಸರಲ್ಲಿ ಅಮಾಯಕರಿಗೆ ಲಕ್ಷಾಂತರ ರೂ. ವಂಚನೆ

ಆಹಾರ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಸ್ಯಾಂಪಲ್ಸ್ ಪಡೆದು ಲ್ಯಾಬ್ ಟೆಸ್ಟ್ ಮಾಡುವುದು ನಿಗಾವಹಿಸುವಂತೆ ಆಹಾರ ಇಲಾಖೆಯ ಆಯುಕ್ತರಿಂದ ಸೂಚನೆ ನೀಡಲಾಗಿದೆ. ಹೀಗಾಗಿ ರಸಾಯನಿಕ ಬಣ್ಣಗಳು, ಸಿಹಿ ತಿನ್ನಿಸುಗಳು, ಹಾಲಿನ ಉತ್ಪನಗಳ ಸ್ಯಾಂಪಲ್ಸ್ ಪಡೆದು ಲ್ಯಾಬ್​​ಗೆ ಕಳಸಿ ಟೆಸ್ಟ್​ಗೆ ಒಳಪಡಿಸಿ ಕ್ರಮಕ್ಕೆ ಆಹಾರ ಇಲಾಖೆ ಮುಂದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!