AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದಲ್ಲಿ ಹಾಡಹಗಲೇ ಚಿನ್ನಭರಣ ಶಾಪ್‌ ಲೂಟಿ: 25 ಕೋಟಿಗೂ ಅಧಿಕ ಬೆಲೆಯ ಆಭರಣಗಳು ದರೋಡೆ

ಬಿಹಾರದ ಆರಾದಲ್ಲಿ ತನಿಷ್ಕ್ ಚಿನ್ನಾಭರಣ ಅಂಗಡಿಯಲ್ಲಿ 25 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ನಗದನ್ನು ಕಳ್ಳರು ದರೋಡೆ ಮಾಡಿರುವಂತಹ ಭೀಕರ ಘಟನೆ ನಡೆದಿದೆ. ಘಟನೆ ಸಂಭವಿಸಿದಾಗ ಪೊಲೀಸರಿಗೆ ಹಲವು ಬಾರಿ ಕರೆ ಮಾಡಿದರೂ, ಸಮಯಕ್ಕೆ ಸ್ಥಳಕ್ಕೆ ಆಗಮಿಸದಿರುವುದು ಟೀಕೆಗೆ ಗುರಿಯಾಗಿದ್ದಾರೆ. ಸದ್ಯ ಪೊಲೀಸರು ಇಬ್ಬರು ದರೋಡೆಕೋರರನ್ನು ಬಂಧಿಸಿದ್ದಾರೆ.

ಬಿಹಾರದಲ್ಲಿ ಹಾಡಹಗಲೇ ಚಿನ್ನಭರಣ ಶಾಪ್‌ ಲೂಟಿ: 25 ಕೋಟಿಗೂ ಅಧಿಕ ಬೆಲೆಯ ಆಭರಣಗಳು ದರೋಡೆ
ಬಿಹಾರದಲ್ಲಿ ಹಾಡಹಗಲೇ ಚಿನ್ನಭರಣ ಶಾಪ್‌ ಲೂಟಿ: 25 ಕೋಟಿಗೂ ಅಧಿಕ ಬೆಲೆಯ ಆಭರಣಗಳು ದರೋಡೆ
TV9 Web
| Edited By: |

Updated on: Mar 10, 2025 | 11:05 PM

Share

ಬಿಹಾರ, ಮಾರ್ಚ್​ 10: ಬಿಹಾರದ (Bihar) ಮುಖ್ಯಮಂತ್ರಿ ತಮ್ಮನ್ನ ತಾವೇ ಅಥವಾ ಅವರ ಪಾರ್ಟಿಯ ನಾಯಕರು ಸುಶಾಸನ ಬಾಬು ಅಂತಾ ಬೆನ್ನು ತಟ್ಟಿಕೊಳ್ಳಾರೆ. ಆದರೆ ಅಸಲಿಗೆ ಬಿಹಾರದಲ್ಲಿ ಈಗ ಹಾಡಹಗಲೇ ದರೋಡೆಗಳು (Robbery) ನಡೆಯುತ್ತಿವೆ. ಇದಕ್ಕೆ ಉದಾಹರಣೆ ಇಂದು ಬಿಹಾರ ಆರಾ ನಗರದಲ್ಲಿ ನಡೆದ ಚಿನ್ನಾಭರಣ ಅಂಗಡಿಯ ದರೋಡೆ. ಒಟ್ಟು 25 ಕೋಟಿಗೂ ಅಧಿಕ ಬೆಲೆಯ ಆಭರಣಗಳನ್ನ ದರೋಡೆಕೋರರು ಲೂಟಿ ಮಾಡಿ ಪರಾರಿಯಾಗಿದ್ದಾರೆ.

ಬಿಹಾರದ ಬೋಜಪುರ ಜಿಲ್ಲೆಯ ಆರಾ ನಗರದಲ್ಲಿರುವ ತನಿಷ್ಕ ಚಿನ್ನಾಭರಣ ಶಾಪ್‌ಗೆ ಬೆಳಗ್ಗೆ 10.30 ಸುಮಾರಿಗೆ ನುಗ್ಗಿದ ದರೋಡೆಕೋರರು, ಸಿಬ್ಬಂದಿಗೆ ಮಾರಕಾಸ್ತ್ರಗಳನ್ನ ತೋರಿಸಿ ಬೆದರಿಕೆಯೊಡ್ಡಿದ್ದಾರೆ. ಯಾರಾದ್ರೂ ಹೆಚ್ಚುಕಮ್ಮಿ ಮಾಡಿದ್ರೆ ಶೂಟ್‌ ಮಾಡೋದಾಗಿ ಹೆದರಿಸಿ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಶೋರೂಮ್‌ನಲ್ಲಿದ್ದ ದರೋಡೆಕೋರರು ಚಿನ್ನಭರಣದ ಜತೆಗೆ ಶಾಪ್‌ನಲ್ಲಿದ್ದ ನಗದು ಹಣವನ್ನೂ ಲೂಟಿ ಮಾಡಿದ್ದಾರೆ.

ಪೊಲೀಸ್‌ ಸ್ಟೇಷನ್‌ನಿಂದ ಕೇವಲ 600 ಮೀಟರ್‌ ದೂರದಲ್ಲಿ ದರೋಡೆ

ಅಚ್ಚರಿ ಆಘಾತಕಾರಿ ವಿಷಯ ಅಂದರೆ ಈ ಘಟನೆ ಆರಾನಗರದ ಪೊಲೀಸ್‌ ಸ್ಟೇಷನ್‌ನಿಂದ ಕೇವಲ 600 ಮೀಟರ್‌ ದೂರದಲ್ಲಿದ್ದ ಶಾಪ್‌ನಲ್ಲಿ ನಡೆದಿದೆ. ಇನ್ನೂ ಶಾಕಿಂಗ್‌ ಅಂದ್ರೆ ಸುಮಾರು 30 ನಿಮಿಷಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಬಾರಿ ಶಾಪ್‌ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಮಾತ್ರ ಲೇಟ್‌ ಲತಿಫ್‌ರಂತೆ ತಡವಾಗಿ ಆಗಮಿಸಿದ್ದಾರೆಂದು ಶಾಪ್‌ ಸಿಬ್ಬಂದಿ ಆರೋಪಿಸಿದ್ದಾರೆ.

ಇದನ್ನೂ ಓದಿ
Image
ಏರ್‌ ಇಂಡಿಯಾ ವಿಮಾನದ ಟಾಯ್ಲೆಟ್‌ ಬ್ಲಾಕ್‌: ಮಧ್ಯ ‘U’ಟರ್ನ್‌ ಹೊಡೆದ ವಿಮಾನ
Image
ಏಪ್ರಿಲ್ 1, 2025 ರಿಂದ ಎಲ್ಲ ಬ್ಯಾಂಕ್​ಗಳ ಯುಪಿಐ ವಹಿವಾಟುಗಳು ಸ್ಥಗಿತ?
Image
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
Image
ಲಲಿತ್ ಮೋದಿ ಕೈತಪ್ಪಿದ ವಾನೋಟೂ ಪಾಸ್​ಪೋರ್ಟ್

ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನದ ಟಾಯ್ಲೆಟ್‌ ಬ್ಲಾಕ್‌: ಮಾರ್ಗ ಮಧ್ಯದಲ್ಲೇ ಅಮೆರಿಕಕ್ಕೆ ಹಿಂದಿರುಗಿದ ವಿಮಾನ

ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ದರೋಡೆಕೋರರು ಎಸ್ಕೇಪ್‌ ಆಗಿದ್ದರು. ಆದರೂ ಸಿಕ್ಕ ಮಾಹಿತಿ ಮೇಲೆ ಭೇಟೆ ಆರಂಭಿಸಿದ ಪೊಲೀಸರು, ಲೂಟಿಕೋರರ ಅಡಗುದಾಣ ಪತ್ತೆ ಹಚ್ಚಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಇದರಲ್ಲಿ ಇಬ್ಬರು ಗಾಯಗೊಂಡಿದ್ದು, ಇನ್ನುಳಿದವರು ಎಸ್ಕೇಪ್‌ ಆಗಿದ್ದಾರೆ. ಗಾಯಗೊಂಡವರನ್ನ ಅರೆಸ್ಟ್‌ ಮಾಡಲಾಗಿದ್ದು, ಇತರರ ಭೇಟೆ ಮುಂದುವರಿದಿದೆ. ಅಂದ ಹಾಗೆ ಈ ಎಲ್ಲ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ತನಿಖೆ ಮುಂದುವರಿದಿದೆ.

ವರದಿ: ಬ್ಯೂರೋ ರಿಪೋರ್ಟ್‌, ಟಿವಿ9.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಶೃಂಗೇರಿ ಮರು ಮತ ಎಣಿಕೆಯಲ್ಲಿ ಗೆಲುವು: ಶಾಸಕ ಟಿಡಿ ರಾಜೇಗೌಡ ಹೇಳಿದ್ದಿಷ್ಟು
ಶೃಂಗೇರಿ ಮರು ಮತ ಎಣಿಕೆಯಲ್ಲಿ ಗೆಲುವು: ಶಾಸಕ ಟಿಡಿ ರಾಜೇಗೌಡ ಹೇಳಿದ್ದಿಷ್ಟು
ತಾಯಿನ ಕಂಡು ರಸ್ತೆಯಲ್ಲಿ ಓಡಿ ಬಂದ ಮಗುವಿನ ಮೇಲೆ ಹರಿದ ಲಾರಿ
ತಾಯಿನ ಕಂಡು ರಸ್ತೆಯಲ್ಲಿ ಓಡಿ ಬಂದ ಮಗುವಿನ ಮೇಲೆ ಹರಿದ ಲಾರಿ
ಗ್ಯಾಸ್ ದರ ಇಳಿಸುವಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್​ನಿಂದ ಮೋದಿಗೆ ಪತ್ರ
ಗ್ಯಾಸ್ ದರ ಇಳಿಸುವಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್​ನಿಂದ ಮೋದಿಗೆ ಪತ್ರ
ರಣಬಿಸಿಲಿಗೆ ಪ್ರಾಣಿ, ಪಕ್ಷಿ, ಮನುಷ್ಯರ ನರಳಾಟ; ರಾಯಚೂರಿನಲ್ಲಿ ಇಬ್ಬರ ಸಾವು
ರಣಬಿಸಿಲಿಗೆ ಪ್ರಾಣಿ, ಪಕ್ಷಿ, ಮನುಷ್ಯರ ನರಳಾಟ; ರಾಯಚೂರಿನಲ್ಲಿ ಇಬ್ಬರ ಸಾವು
‘ಸಾರಾ ಗೋವಿಂದ್ ನನಗೆ ಧಮ್ಕಿ ಹಾಕೋ ರೀತಿ ಮಾತಾಡಿದ್ರು’; ಚೇತನ್
‘ಸಾರಾ ಗೋವಿಂದ್ ನನಗೆ ಧಮ್ಕಿ ಹಾಕೋ ರೀತಿ ಮಾತಾಡಿದ್ರು’; ಚೇತನ್
ಗೃಹಿಣಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿದ ಆರೋಪ
ಗೃಹಿಣಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿದ ಆರೋಪ
ಪ್ರವಾಸಿಗರ ಕಣ್ಣಿಗೆ ಬಿದ್ದ ಅಪರೂಪದ 'ಬಿಳಿ ಜಿಂಕೆ'!
ಪ್ರವಾಸಿಗರ ಕಣ್ಣಿಗೆ ಬಿದ್ದ ಅಪರೂಪದ 'ಬಿಳಿ ಜಿಂಕೆ'!
ಪೆಟ್ರೋಲ್, ಡಿಸೇಲ್ ಏರಿಕೆ ಭೀತಿ! ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್, ಡಿಸೇಲ್ ಏರಿಕೆ ಭೀತಿ! ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದ ಜನ
ರೋಚಕ ಪಂದ್ಯದಲ್ಲಿ 2 ರನ್​ಗಳ ಜಯ ಸಾಧಿಸಿ ಫೈನಲ್​ಗೇರಿದ ಹೈದರಾಬಾದ್
ರೋಚಕ ಪಂದ್ಯದಲ್ಲಿ 2 ರನ್​ಗಳ ಜಯ ಸಾಧಿಸಿ ಫೈನಲ್​ಗೇರಿದ ಹೈದರಾಬಾದ್
ಅಳಿಯನ ಮನೆಗೇ ಕನ್ನ ಹಾಕಿ ಸಿಕ್ಕಿಬಿದ್ದ ಅತ್ತೆ: ಕದ್ದ ಬಂಗಾರ ಎಷ್ಟು ಗೊತ್ತಾ?
ಅಳಿಯನ ಮನೆಗೇ ಕನ್ನ ಹಾಕಿ ಸಿಕ್ಕಿಬಿದ್ದ ಅತ್ತೆ: ಕದ್ದ ಬಂಗಾರ ಎಷ್ಟು ಗೊತ್ತಾ?