ಏರ್ ಇಂಡಿಯಾ ವಿಮಾನದ ಟಾಯ್ಲೆಟ್ ಬ್ಲಾಕ್: ಮಾರ್ಗ ಮಧ್ಯದಲ್ಲೇ ಅಮೆರಿಕಕ್ಕೆ ಹಿಂದಿರುಗಿದ ವಿಮಾನ
ಶಿಕಾಗೋದಿಂದ ದೆಹಲಿಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನ 126 ಹೆಚ್ಚಿನ ಟಾಯ್ಲೆಟ್‌ಗಳು ಬ್ಲಾಕ್ ಆಗಿದ್ದರಿಂದ ವಿಮಾನವು ಮಧ್ಯಮಾರ್ಗದಲ್ಲಿ ಶಿಕಾಗೋಗೆ ಮರಳಿದೆ. ಇದರಿಂದಾಗಿ ಪ್ರಯಾಣಿಕರು ತೀವ್ರ ಅನಾನುಕೂಲ ಅನುಭವಿಸಿದ್ದಾರೆ. ಟಾಯ್ಲೆಟ್‌ಗಳ ಅಸಮರ್ಪಕ ಕಾರ್ಯಚಟುವಟಿಕೆಗೆ ಪ್ರಯಾಣಿಕರ ನಿರ್ಲಕ್ಷ್ಯವೇ ಕಾರಣ ಎಂದು ಏರ್ ಇಂಡಿಯಾ ಸಿಬ್ಬಂದಿ ಆರೋಪಿಸಿದ್ದಾರೆ.

ನವ ದೆಹಲಿ, ಮಾರ್ಚ್ 10: ಸುಮಾರು 300 ಜನರಿದ್ದ ವಿಮಾನ (flight) ಅಮೆರಿಕದಿಂದ ಭಾರತದತ್ತ ಹೊರಟಿತ್ತು. ಬಹುತೇಕರು ತಾಯ್ನಾಡಿಗೆ ಹಿಂದಿರುಗುತ್ತಿದ್ದೇವೆ ಎಂಬ ಸಂತಸದಲ್ಲಿ ಬಿಗುಮಾನದಿಂದ ವಿಮಾನ ಏರಿದ್ದರು. ಆದರೆ ಐದೇ ತಾಸುಗಳಲ್ಲಿ ಈ ಪ್ರಯಾಣಿಕರ ಕನಸು ಭಗ್ನವಾಗಿದೆ. ಇದ್ದಕ್ಕಿದ್ದಂತೆ ವಿಮಾನ ಯೂ ಟರ್ನ್ ಹೊಡೆದು ಮತ್ತೆ ಅಮೆರಿಕದತ್ತ ಮುಖ ಮಾಡಿದೆ. ಅಷ್ಟಕ್ಕೂ ಇಷ್ಟೇಲ್ಲಾ ಆಗೋಕೆ ಕಾರಣ ಟಾಯ್ಲೆಟ್ (toilets) ಯಡವಟ್ಟು.
ಏರ್ ಇಂಡಿಯಾ ವಿಮಾನಕ್ಕೆ ಟಾಯ್ಲೆಟ್ ಕಂಟಕ
ಅಮೆರಿಕದ ಶಿಕಾಗೋ ನಗರದಿಂದ ಭಾರತದ ನವದೆಹಲಿಯತ್ತ ಹೊರಟಿದ್ದ ಏರ್ ಇಂಡಿಯಾ ವಿಮಾನ 126 ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಈ ವಿಮಾನದಲ್ಲಿದ್ದ ಟಾಯ್ಲೆಟ್‌ಗಳು ಬ್ಲಾಕ್ ಆಗಿ ಉಪಯೋಗಿಸಲು ಬರದಷ್ಟು ಕೆಟ್ಟಿದ್ದು. ಕಂಗಾಲಾದ ವಿಮಾನದ ಕ್ಯಾಪ್ಟನ್ ಹಾಗೂ ಸಿಬ್ಬಂದಿ ತಕ್ಷಣವೇ ವಿಮಾನವನ್ನ ಮತ್ತೆ ಶಿಕಾಗೋದತ್ತ ತಿರುಗಿಸಿದ್ದಾರೆ. ಇದರ ಬಗ್ಗೆ ಅಲರ್ಟ್ ಆದ ಪ್ರಯಾಣಿಕರು ಗಲಾಟೆ ಮಾಡಿದಾಗ ಟಾಯ್ಲೆಟ್ ಸಮಸ್ಯೆಯ ಬಗ್ಗೆ ಸಿಬ್ಬಂದಿ ಹೇಳಿದ್ದಾರೆ. ಮಾರ್ಚ್ 6ರಂದು ನಡೆದ ಈ ಘಟನೆ ಬಗ್ಗೆ ಸಾರ್ವಜನಿಕವಾಗಿ ಈಗ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಬಸ್ ತಡೆದು ನಿಲ್ಲಿಸಿ ನಡು ರಸ್ತೆಯಲ್ಲಿ ಹೈಡ್ರಾಮಾ ಮಾಡಿದ ಮಹಿಳೆ; ವಿಡಿಯೋ ವೈರಲ್
ವಿಮಾನದಲ್ಲಿದ್ದ 12 ಟಾಯ್ಲೆಟ್‌ಗಳ ಪೈಕಿ 11 ಟಾಯ್ಲೆಟ್‌ಗಳು ಬ್ಲಾಕ್ ಆಗಿ ಉಪಯೋಗಿಸಲು ಸಾಧ್ಯವಿಲ್ಲದ ಸ್ಥಿತಿ ತಲುಪಿದ್ದವು. ಇದನ್ನ ಮನಗಂಡ ಸಿಬ್ಬಂದಿ ಚೆಕ್ ಮಾಡಿದಾಗ, ವಿಮಾನ ಅಟ್ಲಾಂಟಿಕ್ ಸಾಗರದ ಮೇಲೆ ಅಂದ್ರೆ ಗ್ರೀನ್‌ಲ್ಯಾಂಡ್ ನಡುಗಡ್ಡೆ ಮೇಲೆ ಪ್ರಯಾಣಿಸುವುದು ಗೊತ್ತಾಗಿದೆ. ಸಮೀಪದ ಯುರೋಪಿಯನ್ ನಗರಗಳಲ್ಲಿ ವಿಮಾನ ಲ್ಯಾಂಡ್ ಮಾಡೋಣ ಅಂದರೆ ರಾತ್ರಿ ಈ ವಿಮಾನ ನಿಲ್ದಾಣಗಳು ಆಪರೇಟ್ ಆಗಲ್ಲ. ಹೀಗಾಗಿ ಬೇರೆ ದಾರಿ ಕಾಣದೇ ವಿಮಾನವನ್ನ ದೆಹಲಿ ಬದಲು ಶಿಕಾಗೋದತ್ತ ತಿರುಗಿಸಲಾಗಿದೆ ಎಂದು ಏರ್ ಇಂಡಿಯಾ ಆಡಳಿತ ಸಮಜಾಯಿಸಿ ನೀಡಿದೆ.
ಟಾಯ್ಲೆಟ್ ಬ್ಲಾಕ್‌ಗೆ ಪ್ರಯಾಣಿಕರ ಬೇಜವಬ್ದಾರಿ ಕಾರಣ!
ಈ ಬಗ್ಗೆ ಮಾತನಾಡಿರುವ ವಿಮಾನದ ಸಿಬ್ಬಂದಿ ಕೆಲ ಪ್ರಯಾಣಿಕರು ಪೇಪರ್, ಒಳಉಡುಪು ಹಾಗೂ ಕೆಲ ಪ್ಲಾಸ್ಟಿಕ್ ವಸ್ತುಗಳನ್ನ ಟಾಯ್ಲೆಟ್‌ನೊಳಗೆ ಹಾಕಿ ಫ್ಲಸ್ ಮಾಡಿರೋದೇ ಕಾರಣ ಎಂದು ಆರೋಪಿಸಿದ್ದಾರೆ. ಆದರೆ ಕೆಲವರು ವಿಮಾನ ಶಿಕಾಗೋದಿಂದ ದೆಹಲಿಯತ್ತ ಟೇಕ್ ಆಫ್ ಆಗುವಾಗಲೇ ಟಾಯ್ಲೆಟ್ ಪ್ಲಾಬ್ಲಂ ಬಗ್ಗೆ ಕ್ಯಾಪ್ಟನ್‌ಗೆ ಗೊತ್ತಿತ್ತು. ಆದರೂ ಮ್ಯಾನೇಜ್ ಮಾಡಬಹುದು ಎಂದು ಟೇಕ್ ಆಫ್ ಮಾಡಿದ್ರು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮುಂಬೈ: ಹೋಟೆಲ್ಗೆ ಪಾರ್ಟಿಗೆಂದು ಹೋದ ಮಹಿಳೆಯರು, ಮಂಚೂರಿಯಲ್ಲಿ ಇಲಿ ಮರಿ ಪತ್ತೆ
ಇದೇನೇ ಇರಲಿ ಇಂಥ ಬೇಜವಾಬ್ದಾರಿ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನ ನಗೆಪಾಟಲಿಗೆ ಈಡು ಮಾಡುವುದಷ್ಟೇ ಅಲ್ಲ, ಪ್ರಯಾಣಿಕರ ಜೀವಕ್ಕೂ ಆಪತ್ತು ತರುವ ಸಾಧ್ಯತೆ ಇದೆ. ಹೀಗಾಗಿ ಈ ಘಟನೆ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ.
ವರದಿ: ಬ್ಯೂರೋ ರಿಪೋರ್ಟ್, ಟಿವಿ9
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




