ಹೋಳಿ ಬಣ್ಣ ತಾಕದಂತೆ ಸಂಭಾಲ್‌ನ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಮೆರವಣಿಗೆಯ ಸಮಯದಲ್ಲಿ ಮುಚ್ಚಲಾಗುವ 10 ಮಸೀದಿಗಳಲ್ಲಿ ಸಂಭಾಲ್‌ನ ಜಾಮಾ ಮಸೀದಿ ಕೂಡ ಒಂದು. ಹೋಳಿ ಮೆರವಣಿಗೆಯ ಮಾರ್ಗದಲ್ಲಿರುವ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಐತಿಹಾಸಿಕ ಜಾಮಾ ಮಸೀದಿ ಸೇರಿದಂತೆ 10 ಮಸೀದಿಗಳನ್ನು ಟಾರ್ಪೌಲಿನ್‌ಗಳಿಂದ ಮುಚ್ಚಲಾಗಿದೆ. ಸಂಭಾಲ್‌ನಲ್ಲಿರುವ ಜಾಮಾ ಮಸೀದಿಯನ್ನು ಬಿಳಿ ಟಾರ್ಪೌಲಿನ್‌ನಿಂದ ಮುಚ್ಚಲಾಗಿದೆ. ಅದೇ ರೀತಿ, ಹೋಳಿ ಬಣ್ಣಗಳು ಅವುಗಳ ಮೇಲೆ ಬೀಳದಂತೆ ಒಟ್ಟು 10 ಮಸೀದಿಗಳನ್ನು ಮುಚ್ಚಲಾಗುತ್ತಿದೆ.
ಸಂಭಾಲ್, (ಮಾರ್ಚ್ 13): ಉತ್ತರ ಪ್ರದೇಶದ ಸಂಭಾಲ್ ಪೊಲೀಸರು ಮಾರ್ಚ್ 14ರಂದು ನಡೆಯಲಿರುವ ಹೋಳಿ ಹಬ್ಬದ ಮೆರವಣಿಗೆಯ ಮಾರ್ಗದಲ್ಲಿರುವ ಜಾಮಾ ಮಸೀದಿ ಮತ್ತು ಇತರೆ ಮಸೀದಿಗಳನ್ನು ಟಾರ್ಪೌಲಿನ್‌ನಿಂದ ಮುಚ್ಚಲಾಗಿದೆ. ಈ ವರ್ಷ, ಹೋಳಿ ಹಬ್ಬ ಪವಿತ್ರ ರಂಜಾನ್ ತಿಂಗಳಲ್ಲಿ ಶುಕ್ರವಾರದ ಪ್ರಾರ್ಥನೆಯೊಂದಿಗೆ ಬಂದಿರುವುದರಿಂದ ಧಾರ್ಮಿಕ ಸಂಘರ್ಷ ಉಂಟಾಗುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಪೊಲೀಸರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿಂದು ಮತ್ತು ಮುಸ್ಲಿಂ ಎರಡೂ ಧಾರ್ಮಿಕ ಕಾರ್ಯಕ್ರಮಗಳ ಸುಗಮ ಪ್ರಕ್ರಿಯೆಗಳನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ