ಇಂದು ಕಾಯಕ ಯೋಗಿ ಶಿವಕುಮಾರ ಶ್ರೀಗಳ 2ನೇ ವರ್ಷದ ಪುಣ್ಯಸ್ಮರಣೆ!
ಶಿವಕುಮಾರ ಶ್ರೀಗಳೆಂದರೆ ಜ್ಞಾನದ ಬೆಳಕು.. ಭಕ್ತರನ್ನು ಸಂತೈಸುತ್ತಿದ್ದ ಭಗವಂತ.. ಅವರ ಒಂದೊಂದು ಕೆಲಸವು ಇತಿಹಾಸವೇ. ಹೀಗೆ ಕಾಯಕದ ಮೂಲಕವೇ ನಡೆದಾಡುವ ದೇವರು ಎಂದು ಖ್ಯಾತಿಗಳಿಸಿದ್ದ ಶಿವಕುಮಾರಸ್ವಾಮೀಜಿಯನ್ನ ಕಳೆದುಕೊಂಡು ಎರಡು ವರ್ಷ ಕಳೆದಿದ್ದು, ಇಂದು ಪುಣ್ಯಸ್ಮರಣೆ ಕಾರ್ಯಕ್ರಮ ನಡೆದಿದೆ.
ತುಮಕೂರು: ಕಾಯಕ ಯೋಗಿ.. ಭಕ್ತರ ಪಾಲಿನ ಭಗವಂತ. ಅದೆಷ್ಟೋ ಜನರ ಬದುಕಿನ ದಾರಿ ದೀಪ.. ಅರಿವಿನ ಜ್ಯೋತಿ ಬೆಳಗಿಸಿದ ಪರಮ ಗುರು. ಅದೆಷ್ಟೋ ಮಕ್ಕಳ ಭವಿಷ್ಯ ರೂಪಿದ ದೇವರು. ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳು ಲಿಂಗದೊಳಗೆ ಐಕ್ಯರಾಗಿ ಎರಡು ವರುಷ ಕಳೆದಿದೆ. ಶ್ರೀಗಳ ಎರಡನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಸಕಲ ತಯಾರಿ ನಡೆದಿದೆ.
ಇಂದು ಕಾಯಕ ಯೋಗಿ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ! ಕಾಯಕ ಯೋಗಿ ಶಿವಕುಮಾರ ಶ್ರೀಗಳ ಎರಡನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಸರ್ವ ತಯಾರಿ ನಡೆದಿದೆ. ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪುಣ್ಯಸ್ಮರಣೆ ನಡೆಯುತ್ತಿದ್ದು, ಸಿಎಂ ಬಿಎಸ್‌ವೈ ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುವ ಸಾಧ್ಯತೆಯಿದೆ. ಶ್ರೀ ಗಳ ಗದ್ದುಗೆ ವಿವಿಧ ಪುಷ್ಟಗಳಿಂದ ಅಲಂಕಾರ ಮಾಡಿದ್ದು, ಕಣ್ಮನ ಸೆಳೆಯುತ್ತಿದೆ.
ಈಗಾಗಲೇ ಶಿವಕುಮಾರಶ್ರೀಗಳ ಗದ್ದುಗೆಗೆ ಪೂಜೆ ಆರಂಭವಾಗಿದೆ. ಇದು ಮುಗಿದ ಬಳಿಕ ಬೆಳಗ್ಗೆ 8 ಗಂಟೆಗೆ ಶ್ರೀ ಗಳ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ವಿವಿಧಕಲಾತಂಡಗಳ ಮೂಲಕ ವಿವಿಧ ಮಠಾಧಿಶರ ನೇತೃತ್ವದಲ್ಲಿ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಬಳಿಕ ಬೆಳಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ವೇದಿಕೆ ಸಮಾರಂಭ ನಡೆಯಲಿದೆ. ಈ ವೇಳೆ ಸಿಎಂ ಯಡಿಯೂರಪ್ಪ ಸೇರಿದಂತೆ ಗಣ್ಯಾತಿ ಗಣ್ಯರು ಹಾಗೂ ಮಠಾಧಿಶರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಸಿಎಂ ಯಡಿಯೂರಪ್ಪ ಮಠಕ್ಕೆ ಆಗಮಿಸಲಿದ್ದು ಶ್ರೀ ಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ. ಬರುವ ಭಕ್ತರಿಗೆ 60 ಕ್ವಿಂಟಾಲ್ ಸಿಹಿ ಬೂಂದಿ, 2 0 ಕ್ವಿಂಟಾಲ್ ಮಾಲ್ದಿ ಪುಡಿ, 10 ಕ್ವಿಂಟಾಲ್ ಕಾರ ಬೂಂದಿ, ಚಿತ್ರಾನ್ನ, ಪಾಯಸ, ಅನ್ನ, ಸಾಂಬಾರು, ವಿವಿಧ ರೀತಿಯ ಪಲ್ಯಗಳು ಸೇರಿದಂತೆ ಬೋರಿ ಬೋಜನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗೇ ಬಿಗಿ ಪೊಲೀಸ್ ಭದ್ರತೆ ಕೂಡ ಕೈಗೊಳ್ಳಲಾಗಿದೆ.
ಒಟ್ಟಾರೆ ಶಿವೈಕ್ಯ ಶ್ರೀಗಳ ಪುಣ್ಯಸ್ಮರಣೆಗೆ ಸಕಲ ತಯಾರಿ ನಡೆದಿದ್ದು,ಮಠಕ್ಕೆ ಭಕ್ತರ ದೇಣಿಗೆ ಸಹ ಅಪಾರವಾಗಿ ಹರಿದುಬಂದಿದೆ. ಶ್ರೀಗಳ ಎರಡನೇ ಅಭೂತಪೂರ್ವ ಪುಣ್ಯಸ್ಮರಣೆಗೆ ತ್ರಿವಿಧ ದಾಸೋಹದ ನೆಲ ಸಾಕ್ಷಿಯಾಗಲಿದೆ.
Published On - 6:41 am, Thu, 21 January 21