ಬೆಳಗ್ಗೆ 7 ಗಂಟೆಗೆ ಸಚಿವರಿಗೆ ಖಾತೆ ಹಂಚಿಕೆ: ಸಿಎಂ ಬಿ.ಎಸ್.ಯಡಿಯೂರಪ್ಪ
ವಿಧಾನಸೌಧದಲ್ಲಿ ಇಂದು ಮಾತನಾಡಿದ ಯಡಿಯೂರಪ್ಪ, ನಾಳೆ ಬೆಳಗ್ಗೆ 7-8 ಗಂಟೆಯೊಳಗೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇನೆ. ಅವರ ಖಾತೆ ಹಂಚಿಕೆ ಪಟ್ಟಿ ಸಿದ್ಧವಿದೆ ಎಂದು ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು
ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಪುಟ ಸೇರಿರುವ ನೂತನ ಏಳು ಸಚಿವರಿಗೆ ಜ.21ರ ಬೆಳಗ್ಗೆ ಏಳು ಗಂಟೆಗೆ ಖಾತೆ ಹಂಚಿಕೆ ಆಗಲಿದೆ.
ವಿಧಾನಸೌಧದಲ್ಲಿ ಮಾತನಾಡಿದ ಯಡಿಯೂರಪ್ಪ, ಬೆಳಗ್ಗೆ 7-8 ಗಂಟೆಯೊಳಗೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇನೆ. ಅವರ ಖಾತೆ ಹಂಚಿಕೆ ಪಟ್ಟಿ ಸಿದ್ಧವಿದೆ ಎಂದು ಹೇಳಿದ್ದಾರೆ.
ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್, ಬೀಳಗಿ ಶಾಸಕ ಮುರುಗೇಶ್ ನಿರಾಣಿ, ವಿಧಾನ ಪರಿಷತ್ ಸದಸ್ಯ ಆರ್. ಶಂಕರ್, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಸುಳ್ಯ ಶಾಸಕ ಎಸ್. ಅಂಗಾರ ನೂತನ ಶಾಸಕರಾಗಿದ್ದಾರೆ.
CD ವಿಚಾರ ಪ್ರಸ್ತಾಪಿಸಿದವರೇ ಅದನ್ನ ಕ್ಲೋಸ್ ಮಾಡಬೇಕು: ಶಾಸಕ ಬಸನಗೌಡ ಯತ್ನಾಳ್
Published On - 8:52 pm, Wed, 20 January 21