ಇರಲಾರದೇ ಇರುವೆ ಬಿಟ್ಟುಕೊಂಡ: ಮಹಿಳೆ ಮೇಲೆ ಪಾನ್ ಮಸಾಲ ಉಗಿದು ಪೊಲೀಸರ ಕೈಗೆ ಸಿಕ್ಕಿಬಿದ್ದ
ಕರ್ನಾಟಕದಲ್ಲಿ ಮಹಿಳೆಯರ (Women) ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರಲ್ಲೂ ಬೆಂಗಳೂರಿನ ಅಪರಾಧ ಚಟುವಟಿಕೆಗಳು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದರಂತೆ ಬೆಂಗಳೂರಿನಲ್ಲಿ ರಸ್ತ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಪಾನ್ ಮಸಲಾ ತಿಂದು ಉಗಿದು ವಿಕೃತಿ ಮೆರೆದಿರುವ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, (ಮಾರ್ಚ್ 13): ದಾರಿಯಲ್ಲಿ ತನ್ನ ಪಾಡಿಗೆ ತಾನು ನಡೆದುಕೊಂಡು ಮಹಿಳೆ ಹೋಗುತ್ತಿದ್ದ ಮಹಿಳೆ ಮೇಲೆ ವ್ಯಕ್ತಿಯೋರ್ವ ಪಾನ್ ಮಸಲಾ ತಿಂದು ಉಗಿದು ವಿಕೃತ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಇಂದಿರಾನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಫೆಬ್ರವರಿ 25ರಂದು ಈ ಘಟನೆ ನಡೆದಿದ್ದು, ಇಂದು (ಮಾರ್ಚ್ 13) ಆರೋಪಿ ಹರೀಶ್ನನ್ನು ಬಂಧಿಸಿದ್ದಾರೆ. ದೊಮ್ಮಲೂರು ನಿವಾಸಿ ಅರ್ಚನಾ ಅವರನ್ನು ಹರೀಶ್ ಹಿಂಬಾಲಿಸಿಕೊಂಡು ಬಂದು ಪಾನ್ ಮಸಾಲಾ ಉಗಿದು ನಾಪತ್ತೆಯಾಗಿದ್ದ. ಈ ಸಂಬಂಧ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿ ಹರೀಶ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಫೆಬ್ರವರಿ 5ರ ರಾತ್ರಿ 9.30ರ ಸುಮಾರಿಗೆ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಕ್ ಬಳಿ ಅರ್ಚನಾ ಅವರು ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿದ್ದರು. ಆ ವೇಳೆ ಹರೀಶ್ ಅರ್ಚನಾ ಅವರನ್ನು ಹಿಂಬಾಲಿಸಿಕೊಂಡು ಬಂದು ಪಾನ್ ಮಸಾಲಾ ಉಗಿದು ಪರಾರಿಯಾಗಿದ್ದ. ಬಳಿಕ ಅದೇ ದಿನ ರಾತ್ರಿ 11 ಗಂಟೆಗೆ ಮತ್ತೆ ಮಹಿಳೆ ಕಣ್ಣಿಗೆ ಬಿದ್ದಿದ್ದ. ಇದರಿಂದ ಭಯಗೊಂಡ ಅರ್ಚನಾ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಉಲ್ಬಣಿಸಿದ ಕಸ ಸಮಸ್ಯೆ, ನಿಂತಲ್ಲೇ ನಿಂತ ಕಸ ವಿಲೇವಾರಿ ವಾಹನಗಳು
ಅರ್ಚನಾ ಅವರು ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಬಿಎನ್ಎಸ್ ಸೆಕ್ಷನ್ 78, 79ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಘಟನೆ ನಡೆದ ಅಕ್ಕಾಪಕ್ಕದಲ್ಲಿನ ಸಿಸಿ ಟವಿಗಳನ್ನು ಪರಿಶೀಲನೆ ಮಾಡಿ ಕೊನೆ ಹರೀಶ್ನನ್ನು ಬಂಧಿಸಿದ್ದಾರೆ. ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ತಿಪ್ಪಸಂದ್ರದ ನಿವಾಸಿಯಾಗಿರುವ ಹರೀಶ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅಚಾನಕ್ ಆಗಿ ಉಗಿದಿದ್ದೆ ಎಂದಿದ್ದಾನೆ.
ಒಟ್ಟಿನಲ್ಲಿ ತನ್ನ ಪಾಡಿಗೆ ತಾನು ಹೋಗುತ್ತಿದ್ದ ಮಹಿಳೆ ಮೇಲೆ ಉಗುಳಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಅದೇನೋ ಅಂತಾರಲ್ಲ ಸುಮ್ಮನೆ ಇರಲಾರದೇ ಇರುವೆ ಬಿಟ್ಟುಕೊಂಡರಂತೆ. ಹೀಗೆ ಇರಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ