ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನೆ ಪುಂಡಾಟ.. 2ನೇ ದಿನವೂ ಕೆಎಸ್ಅರ್‌ಟಿಸಿ ಬಸ್‌ ಸಂಚಾರ ಸ್ಥಗಿತ

|

Updated on: Mar 14, 2021 | 11:24 AM

ಬೆಳಗಾವಿ ಮಾರ್ಗವಾಗಿ ನಿತ್ಯ ಮಹಾರಾಷ್ಟ್ರಕ್ಕೆ 400ಕ್ಕೂ ಹೆಚ್ಚು ಬಸ್‌ಗಳ ಸಂಚರಿಸುತ್ತಿದ್ದವು. ಮಹಾರಾಷ್ಟ್ರದಿಂದ ಬೆಳಗಾವಿಗೆ 58 ಬಸ್‌ಗಳ ಬರುತ್ತಿದ್ದವು. ಆದ್ರೆ ಶಿವಸೇನೆ ಪುಂಡಾಟದಿಂದಾಗಿ ಕರ್ನಾಟಕ, ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಸ್ಥಗಿತಗೊಂಡಿದೆ.

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನೆ ಪುಂಡಾಟ.. 2ನೇ ದಿನವೂ ಕೆಎಸ್ಅರ್‌ಟಿಸಿ ಬಸ್‌ ಸಂಚಾರ ಸ್ಥಗಿತ
ಸಾಂದರ್ಭಿಕ ಚಿತ್ರ
Follow us on

ಬೆಳಗಾವಿ: ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನೆ ಪುಂಡಾಟ ಮುಂದುವರೆದ ಹಿನ್ನೆಲೆಯಲ್ಲಿ 2ನೇ ದಿನವೂ ಕೆಎಸ್​ಆರ್​‌ಟಿಸಿ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಕರ್ನಾಟಕ ಗಡಿವರೆಗೆ ಮಾತ್ರ KSRTC ಬಸ್ ಸಂಚಾರವಿದ್ದು ಕರ್ನಾಟಕ, ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಜನ ಸಾಮಾನ್ಯರು ಕಷ್ಟಪಡುವಂತಾಗಿದೆ.

ಬೆಳಗಾವಿ ಮಾರ್ಗವಾಗಿ ನಿತ್ಯ ಮಹಾರಾಷ್ಟ್ರಕ್ಕೆ 400ಕ್ಕೂ ಹೆಚ್ಚು ಬಸ್‌ಗಳ ಸಂಚರಿಸುತ್ತಿದ್ದವು. ಮಹಾರಾಷ್ಟ್ರದಿಂದ ಬೆಳಗಾವಿಗೆ 58 ಬಸ್‌ಗಳ ಬರುತ್ತಿದ್ದವು. ಆದ್ರೆ ಶಿವಸೇನೆ ಪುಂಡಾಟದಿಂದಾಗಿ ಕರ್ನಾಟಕ, ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಗಡಿ ಭಾಗದವರೆಗೆ ಮಾತ್ರ ಕರ್ನಾಟಕ ಸಾರಿಗೆ ಬಸ್‌ಗಳ ಸಂಚರಿಸುತ್ತಿವೆ. ನಿನ್ನೆ(ಮಾರ್ಚ್ 13) ಕೊಲ್ಹಾಪುರ, ಕಾಗಲ್ ಗ್ರಾಮದಲ್ಲಿ ಶಿವಸೇನೆ ಮತ್ತೆ ಪುಂಡಾಟ‌ ಮೆರೆದಿತ್ತು. NWKRTC ಚಿಕ್ಕೋಡಿ ವಿಭಾಗದ ಬಸ್‌ಗೆ ಕಪ್ಪು ಮಸಿ ಬಳೆದಿತ್ತು.

ಶಿವಸೇನೆ ಕೆಲ ದಿನಗಳ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ರದ್ಧಾಂತ ಮಾಡಿದ್ದರು. ಬಳಿಕ ಕೊಲ್ಹಾಪುರದಲ್ಲಿ ಮಳಿಗೆಗಳ ಮೇಲಿದ್ದ ಕನ್ನಡದ ಅಕ್ಷರಗಳಿಗೆ ಕಪ್ಪು ಮಸಿ ಬಳಿದು ದರ್ಪ ಪ್ರದರ್ಶಿಸಿದ್ದರು. ಮಹಾಲಕ್ಷ್ಮಿ ಯಾತ್ರಿ ನಿವಾಸದ ಕಟ್ಟಡ ಸೇರಿದಂತೆ ಮಳಿಗೆಗಳಲ್ಲಿ ಹಾಕಿದ್ದ ಕನ್ನಡ ಅಕ್ಷರಗಳಿರುವ ಬೋರ್ಡ್​ಗಳಿಗೆ ಕಪ್ಪು ಮಸಿ ಬಳಿದು ಮಳಿಗೆ ಮಾಲೀಕರಿಗೆ ಶಿವಸೇನೆ ಮುಖಂಡ ಸಂಜಯ್ ಪವಾರ್‌ ಬೆದರಿಕೆ ಒಡ್ಡಿದ್ದರು. ಈ ರೀತಿ ದಿನೇ ದಿನೇ ಶಿವಸೇನೆ ಪುಂಡಾಟ ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಬೆಳಗಾವಿ: ಕನ್ನಡ ಅಕ್ಷರಗಳಿಗೆ ಕಪ್ಪು ಮಸಿ ಬಳಿದು ಶಿವಸೇನೆ ಪುಂಡಾಟ