MES, ಶಿವಸೇನೆ ಪುಂಡಾಟ.. ಡಿಸಿ ಮಾತಿಗೆ ಅಡ್ಡಿಪಡಿಸಿ ಹಿಂದಿಯಲ್ಲಿ ಮಾತನಾಡುವಂತೆ ಆಗ್ರಹ, 6 ಮಂದಿ ಪೊಲೀಸ್​ ವಶಕ್ಕೆ

ಕೈಯಲ್ಲಿ ಧ್ವಜಸ್ತಂಭ ಹಿಡಿದು ಮಹಾನಗರ ಪಾಲಿಕೆ ಕಚೇರಿಯತ್ತ ಧಾವಿಸುತ್ತಿದ್ದ ಎಂಇಎಸ್ ನಾಯಕಿಯರಾದ ರೇಣು ಕಿಲ್ಲೇಕರ್, ಸರಿತಾ ಪಾಟೀಲ್ ಸೇರಿ 6 ಜನರನ್ನು ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

MES, ಶಿವಸೇನೆ ಪುಂಡಾಟ.. ಡಿಸಿ ಮಾತಿಗೆ ಅಡ್ಡಿಪಡಿಸಿ ಹಿಂದಿಯಲ್ಲಿ ಮಾತನಾಡುವಂತೆ ಆಗ್ರಹ, 6 ಮಂದಿ ಪೊಲೀಸ್​ ವಶಕ್ಕೆ
MES, ಶಿವಸೇನೆ ಪ್ರತಿಭಟನೆ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Mar 08, 2021 | 5:16 PM

ಬೆಳಗಾವಿ: ಜಿಲ್ಲೆಯಲ್ಲಿ ಮತ್ತೆ ನಾಡದ್ರೋಹಿ MES, ಶಿವಸೇನೆ ಕ್ಯಾತೆ ತೆಗೆದಿದೆ. ಬೆಳಗಾವಿ ಪಾಲಿಕೆ ಮುಂಭಾಗದ ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ MES ಜಿಲ್ಲಾಧ್ಯಕ್ಷ ದೀಪಕ್ ದಳವಿ ನೇತೃತ್ವದಲ್ಲಿ ರ್ಯಾಲಿ ಹಮ್ಮಿಕೊಂಡಿದ್ದು ಬೆಳಗಾವಿ ಮಹಾನಗರ ಪಾಲಿಕೆ ಎದುರು ಭಗವಾ ಧ್ವಜ ನೆಡಲು ತೆರಳುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೈಯಲ್ಲಿ ಧ್ವಜಸ್ತಂಭ ಹಿಡಿದು ಮಹಾನಗರ ಪಾಲಿಕೆ ಕಚೇರಿಯತ್ತ ಧಾವಿಸುತ್ತಿದ್ದ ಎಂಇಎಸ್ ನಾಯಕಿಯರಾದ ರೇಣು ಕಿಲ್ಲೇಕರ್, ಸರಿತಾ ಪಾಟೀಲ್ ಸೇರಿ 6 ಜನರನ್ನು ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ಒಂದೆಡೆ ಸರ್ದಾರ್ ಮೈದಾನದ ಎದುರು MES, ಶಿವಸೇನೆ ಪುಂಡರ ಪ್ರತಿಭಟನೆ ನಡೆಯುತ್ತಿದ್ದು ಮತ್ತೊಂದೆಡೆ ಬೆಳಗಾವಿ ಮಹಾನಗರ ಪಾಲಿಕೆ ಎದುರು ಭಗವಾ ಧ್ವಜ ನೆಡಲು ಯತ್ನ ನಡೆಯುತ್ತಿದೆ. ಈ ವೇಳೆ ಮಹಿಳಾ ನಾಯಕಿಯರನ್ನು ಮುಂದೆ ಬಿಟ್ಟು ಭಗವಾ ಧ್ವಜ ನೆಡಲು ಎಂಇಎಸ್, ಶಿವಸೇನೆ ಮುಂದಾಗಿದೆ. ಮಾರ್ಕೆಟ್ ಠಾಣೆ ಎಸಿಪಿ ಸದಾಶಿವ ಕಟ್ಟಿಮನಿ ಜೊತೆ ಮಹಿಳೆಯರು ವಾಗ್ವಾದ ನಡೆಸಿದ್ದು 6 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದವರನ್ನು ಮಾಳಮಾರುತಿ ಠಾಣೆಗೆ ಕರೆದೊಯ್ಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಮಹಾನಗರ ಪಾಲಿಕೆ ಎದುರು ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಡಿಸಿ ಮಾತಿಗೆ ಅಡ್ಡಿಪಡಿಸಿ ಹಿಂದಿಯಲ್ಲಿ ಮಾತನಾಡುವಂತೆ ಆಗ್ರಹ ಇನ್ನು ಮನವಿ ಸ್ವೀಕರಿಸಲು ಬಂದ ಡಿಸಿ ಎಂ.ಜಿ.ಹಿರೇಮಠ ಎದುರೇ MES, ಶಿವಸೇನೆ ಉದ್ಧಟತನ ಪ್ರದರ್ಶಿಸಿದೆ. ಮನವಿ ಸ್ವೀಕರಿಸಲು ಬಂದಾಗ ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ಕನ್ನಡದಲ್ಲಿ ಮಾತು ಶುರು ಮಾಡಿದ್ರು. ಈ ವೇಳೆ MES, ಶಿವಸೇನೆ ಅವರ ಮಾತಿಗೆ ಅಡ್ಡಿ ಪಡಿಸಿ ಪುಂಡಾಟ ಮೆರೆದಿದ್ದಾರೆ. ಮರಾಠಿ ಇಲ್ಲವೇ ಹಿಂದಿಯಲ್ಲಿ ಡಿಸಿ ಮಾತನಾಡಲಿ ಎಂದು ಉದ್ಧಟತನ ತೋರಿದ್ದಾರೆ. ನಾಡದ್ರೋಹಿಗಳ ಒತ್ತಾಯಕ್ಕೆ ಮಣಿದು ಹಿಂದಿಯಲ್ಲಿ ಮಾತನಾಡಿದ ಡಿಸಿ ಎಂ.ಜಿ.ಹಿರೇಮಠ ಬೆಳಗಾವಿಯಲ್ಲಿ ಕನ್ನಡ ಮರಾಠಿಗರು ಸಹೋದರರಂತೆ ಸಹಬಾಳ್ವೆ ಮಾಡುತ್ತಿದ್ದಾರೆ.

ಪಾಲಿಕೆ ಮುಂದಿನ‌ ಧ್ವಜದ ವಿಚಾರ ಕನ್ನಡ ಸಂಘಟನೆಗಳ ಜೊತೆಗೆ ಚರ್ಚಿಸಿ ತೀರ್ಮಾನ ಮಾಡುವೆ ಎಂದ ಡಿಸಿ ಭರವಸೆ ನೀಡಿದ್ದಾರೆ. ಆದ್ರೆ ಡಿಸಿ ಭರವಸೆಗೆ ಒಪ್ಪದೇ ಕನ್ನಡ ಧ್ವಜ ತೆರವುಗೊಳಿಸುವಂತೆ ನಾಡದ್ರೋಹಿಗಳು ಆಗ್ರಹಿಸಿದ್ದಾರೆ. ಡಿಸಿ ಮನವಿ ಸ್ವೀಕರಿಸಿ ಹೋದರೂ ರಸ್ತೆ ಮೇಲೆ ಕುಳಿತು MES, ಶಿವಸೇನೆ ಪ್ರತಿಭಟನೆ ನಡೆಸಿದ್ದು ಪೊಲೀಸರು ಹರಸಾಹಸದಿಂದ ಪ್ರತಿಭಟನಾ ನಿರತ MES ಪುಂಡರನ್ನು ಚದುರಿಸಿದೆ.

MES and Shiv sena Protest

ಎಂಇಎಸ್ ನಾಯಕಿಯರಾದ ರೇಣು ಕಿಲ್ಲೇಕರ್, ಸರಿತಾ ಪಾಟೀಲ್ ಸೇರಿ 6 ಜನ ವಶಕ್ಕೆ

ಇದನ್ನೂ ಓದಿ: Shiv Sena ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರಿಂದ ಕನ್ನಡ ವಿರೋಧಿ ಘೋಷಣೆ

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು