Shiv Sena ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರಿಂದ ಕನ್ನಡ ವಿರೋಧಿ ಘೋಷಣೆ
Shiv Sena ಬೆಳಗಾವಿಯಲ್ಲಿ ಹುತಾತ್ಮ ದಿನ ಆಚರಿಸಿದ ಶಿವಸೇನೆಯ ಸದಸ್ಯರು ಹೀಗೆ ಘೋಷಣೆ ಕೂಗಿದ್ದಾರೆ. ಕರ್ನಾಟಕದ ಕೆಲ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಬೇಕು ಎಂದಿದ್ದಾರೆ.
ಬೆಳಗಾವಿ: ರಾಜ್ಯದ ಗಡಿಯಲ್ಲಿ ಮಹಾರಾಷ್ಟ್ರ ಪರವಾಗಿರುವವರು ಹಾಗೂ ಶಿವಸೇನೆ ಕಾರ್ಯಕರ್ತರ ಪುಂಡಾಟ ಮತ್ತೆ ಮುಂದುವರಿದಿದೆ. ಕರ್ನಾಟಕದ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಶಿವಸೇನೆಯ ಕೆಲ ಸದಸ್ಯರು ಇಂದು (ಫೆ.8) ನಗರದ ರಾಮಲಿಂಗ ಖಿಂಡ್ ಗಲ್ಲಿಯಲ್ಲಿ ಘೋಷಣೆ ಕೂಗಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ಘೋಷಣೆ ಹಾಕಿದ್ದಾರೆ.
ಬೆಳಗಾವಿಯ ರಾಮಲಿಂಗ ಖಿಂಡ್ ಗಲ್ಲಿಯಲ್ಲಿ ಹುತಾತ್ಮ ದಿನ ಆಚರಿಸಿದ ಶಿವಸೇನೆಯ ಸದಸ್ಯರು, ಬಳಿಕ ಹೀಗೆ ಘೋಷಣೆ ಕೂಗಿದ್ದಾರೆ. ಮರಾಠಿ ಹೋರಾಟದಲ್ಲಿ ಮಡಿದವರಿಗೆ ಅಮರ್ ರಹೇ ಎಂದಿದ್ದಾರೆ. ನಂತರ, ಕರ್ನಾಟಕದ ಕೆಲ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಮಾಡಿದ್ದಾರೆ. ಹುತಾತ್ಮ ದಿನಾಚರಣೆ ನೆಪದಲ್ಲಿ ಪಕ್ಷ ಸಂಘಟನೆಗೂ ಪ್ರಯತ್ನ ನಡೆಸಿದ್ದಾರೆ.
ಮುಂಬರುವ ಬೆಳಗಾವಿ ಕ್ಷೇತ್ರದ ಲೋಕಸಭೆ ಉಪ ಚುನಾವಣೆ, ಬೆಳಗಾವಿ ಪಾಲಿಕೆ, ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳ ಹಿನ್ನೆಲೆಯಲ್ಲಿ ಶಿವಸೇನೆ ಸದಸ್ಯರು ಹೀಗೆ ವರ್ತಿಸಿದ್ದಾರೆ ಎಂದು ಹೇಳಲಾಗಿದೆ. ಮರಾಠಿಗರ ಪ್ರಚೋದಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಗಡಿ ವಿವಾದ ಕೆಣಕುತ್ತಿದ್ದಾರೆ.
ಪದೇಪದೆ ಗಡಿ ವಿವಾದವನ್ನು ಕೆಣಕುತ್ತಿರುವ ಶಿವಸೇನೆ ಪುಂಡರು, ಮರಾಠಿಗರು ಮಹಾರಾಷ್ಟ್ರಕ್ಕೆ ಸೇರಲು ಸಂಘಟಿತರಾಗುವಂತೆ ಕರೆ ನೀಡಿದ್ದಾರೆ. ಶಿವಸೇನೆಯ ಬೆಳಗಾವಿ ಜಿಲ್ಲಾಧ್ಯಕ್ಷ ಪ್ರಕಾಶ್ ಶಿರೋಳ್ಕರ್, ಈ ವಿಧಾನದಲ್ಲಿ ಮರಾಠಿಗರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದಾರೆ. ಪದೇಪದೆ ಗಡಿ ವಿವಾದ ಕೆಣಕುತ್ತಿರುವ ಶಿವಸೇನೆಯ ವಿರುದ್ಧ, ಹಲವು ಕನ್ನಡಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಮತ್ತೆ ನಾಡದ್ರೋಹ ಘೋಷಣೆ ಕೂಗಿದ ಶಿವಸೇನೆಯ ಪುಂಡರ ವಿರುದ್ಧ ಕನ್ನಡಾಭಿಮಾನಿಗಳು ಗರಂ ಆಗಿದ್ದಾರೆ.
ಶಿವಸೇನೆಯವರು ಕನ್ನಡಿಗರಿಗೆ ಚಿರಋಣಿ ಆಗಿರಬೇಕು: ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ
Published On - 6:38 pm, Mon, 8 February 21