Anti cow slaughter bill ವಿಧಾನಪರಿಷತ್ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ
ವಿಧಾನಪರಿಷತ್ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರವಾಗಿದೆ. ಗದ್ದಲದ ನಡುವೆಯೂ ಧ್ವನಿಮತದ ಮೂಲಕ ಅಂಗೀಕಾರವಾಗಿದೆ. ಈ ನಡುವೆ, ಮಸೂದೆ ಪ್ರತಿ ಹರಿದು ಹಾಕಿ ಕಾಂಗ್ರೆಸ್ ಸದಸ್ಯರ ಆಕ್ರೋಶ ಹೊರಹಾಕಿದರು.
ಬೆಂಗಳೂರು: ವಿಧಾನಪರಿಷತ್ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರವಾಗಿದೆ. ಗದ್ದಲದ ನಡುವೆಯೂ ಧ್ವನಿಮತದ ಮೂಲಕ ಅಂಗೀಕಾರವಾಗಿದೆ. ಈ ನಡುವೆ, ಮಸೂದೆ ಪ್ರತಿ ಹರಿದು ಹಾಕಿ ಕಾಂಗ್ರೆಸ್ ಸದಸ್ಯರ ಆಕ್ರೋಶ ಹೊರಹಾಕಿದರು. Anti cow slaughter bill
MLC ನಾರಾಯಣಸ್ವಾಮಿ, ಆರ್.ಬಿ.ತಿಮ್ಮಾಪುರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ, ವಿಧೇಯಕದ ಪ್ರತಿ ಎಸೆದು ನಸೀರ್ ಅಹ್ಮದ್ ಪ್ರತಿಭಟನೆ ನಡೆಸಿದರು. ಜೆಡಿಎಸ್ ಪಕ್ಷದ ಸದಸ್ಯರಿಂದಲೂ ಸಹ ಕಾಯ್ದೆಗೆ ವಿರೋಧ ವ್ಯಕ್ತವಾಯಿತು.
ಸದ್ಯ, ಮಸೂದೆ ಅಂಗೀಕಾರ ಬಳಿಕ ಪರಿಷತ್ ಕಲಾಪ ಮುಂದೂಡಿಕೆಯಾಗಿದೆ. ವಿಧಾನಪರಿಷತ್ ಕಲಾಪವನ್ನು ಸಭಾಪತಿ ನಾಳೆಗೆ ಮುಂದೂಡಿದರು.
ಪರಿಷತ್ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ ಬಳಿಕ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ ಅಜೆಂಡಾ ಪ್ರಕಾರ ಕಾಯ್ದೆ ಇಂದು ಅಂಗೀಕಾರ ಆಗಿದೆ. ಕಾಂಗ್ರೆಸ್ನವರಿಗೆ ಈ ಕುರಿತು ಚರ್ಚಿಸಲು ಆಸಕ್ತಿ ಇಲ್ಲ. ಅವರು ದನ ಕೊಲ್ಲುವವರು, ನಾವು ದನ ಕಾಯುವವರು. ಸಂವಿಧಾನದ ಆಶಯದಂತೆ ಬಿಲ್ ಪಾಸ್ ಮಾಡಿದ್ದೇವೆ ಎಂದು ಹೇಳಿದರು.
ಈ ಬಗ್ಗೆ ಸದನದಲ್ಲಿ ಚರ್ಚಿಸದೇ ರಾಜಕೀಯ ಮಾಡಿದ್ದಾರೆ. ಬಜೆಟ್ನಲ್ಲಿ ಗೋರಕ್ಷಣೆಗೆ ವಿಶೇಷ ಅನುದಾನ ಮೀಸಲು ಇಡುತ್ತೇವೆ ಎಂದು ಹೇಳಿದರು.
‘ಇಂದು ನಾವು ಪುಣ್ಯರಾಗಿದ್ದೇವೆ, ಐತಿಹಾಸಿಕ ತೀರ್ಮಾನವಾಗಿದೆ’ ಇಂದು ನಾವು ಪುಣ್ಯರಾಗಿದ್ದೇವೆ, ಐತಿಹಾಸಿಕ ತೀರ್ಮಾನವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದರು. ಗೋವಿನ ಸಂತತಿ ಭಾರತದಲ್ಲಿ ಹೆಚ್ಚಬೇಕೆಂಬ ಮಹಾತ್ಮ ಗಾಂಧೀಜಿಯವರ ಕನಸು ನನಸಾದ ದಿನ ಇವತ್ತು. ಕಾಂಗ್ರೆಸ್ನವರು ಬೆಂಬಲಿಸಬೇಕಿತ್ತು ಆದರೆ, ವಿರೋಧಿಸಿದ್ದಾರೆ. ಹಿಂದೆ ಕಾಂಗ್ರೆಸ್ ಪಕ್ಷದವರ ಗುರುತು ಹಸು ಹಾಗೂ ಕರು. ನಾವು ಕೈ ಯಿಂದ ಹಸು, ಕರುವನ್ನು ರಕ್ಷಿಸಿದ್ದೇವೆ ಎಂದು R.ಅಶೋಕ್ ಹೇಳಿದರು.
ಕಾಂಗ್ರೆಸ್ನವರಿಗೆ ವೋಟ್ಬ್ಯಾಂಕ್ಗಾಗಿ ಗೋಹತ್ಯೆ ಆಗಬೇಕು. ಕಾಂಗ್ರೆಸ್ ಪಕ್ಷದವರ ಕನಸು ಬೇರೆ ಇತ್ತು ಎಂದು ಹೇಳಿದರು.
‘ಸರ್ಕಾರಿ ಕಚೇರಿಯಲ್ಲಿ ನೆಲವನ್ನ ಸಗಣಿಯಿಂದ ಸಾರಿಸಿ’ ಇನ್ನು, ಈ ಹಿಂದೆ, ಮಸೂದೆಯನ್ನು ವಿಧಾನಪರಿಷತ್ನಲ್ಲಿ ಮಂಡಿಸಿದ ವೇಳೆ ಈ ಬಗ್ಗೆ ಎರಡೂ ಕಡೆಯಿಂದ ಬಿಸಿ ಬಿಸಿ ಚರ್ಚೆ ಸಹ ನಡೆಯಿತು. ಈ ಕುರಿತು ಮಾತನಾಡಿದ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿ.ಕೆ ರವಿ ಈ ಬಿಲ್ ಮುಟ್ಟಿದರೇ ಕರೆಂಟ್ ಹೊಡೆಯೋ ಹಾಗಿದೆ. ಗೋವಿನ ಬಗ್ಗೆ ನಮಗೆ ಪ್ರೇಮ ಇದೆ. ನಾವು ಶಿವನ ಆರಾಧಕರು. ಹಾಲು ಹಾಕಿಕೊಂಡು ನಾವು ಜೀವನ ಮಾಡಿದ್ದೇವೆ. ಆದರೆ, ವಾಸ್ತವವಾಗಿ ಇದು ಸರಿಯಾದ ವಿಧೇಯಕ ಅಲ್ಲ ಎಂದು ಹೇಳಿದರು.
ಹಂದಿ, ನಾಯಿ, ಕೋಳಿ ಹಾವುಗಳನ್ನ ದೇವರ ರೂಪದಲ್ಲಿ ನೋಡುತ್ತೇವೆ. ಈ ಕಾನೂನು ತಂದಿರೋದು ಬಿಜೆಪಿ ಭಾಷಣ ಮಾಡಿ ಮತ ಬ್ಯಾಂಕ್ ಮಾಡಿಕೊಳ್ಳೋಕೆ. ಜನರ ಭಾವನೆಯ ಜೊತೆ ಚೆಲ್ಲಾಟ ಆಡಲು ಈ ಕಾಯ್ದೆಯನ್ನು ಬಿಜೆಪಿ ತಂದಿದೆ. ಬಾಬಾ ರಾಮ್ದೇವ್ ಕೂಡಾ ನಮ್ಮ ಬಮೂಲ್ ತುಪ್ಪ ತಗೊಂಡು ಅವ್ರ ಲೇಬಲ್ ಹಾಕ್ತಿದ್ದಾರೆ ಎಂದು ಹೇಳಿದರು.
ಎಲ್ಲಾ ಸರ್ಕಾರಿ ಕಚೇರಿಯಲ್ಲಿ ನೆಲವನ್ನ ಸಗಣಿಯಿಂದ ಸಾರಿಸಿ. ಕ್ಯಾಬಿನೆಟ್ ಹಾಲ್ನ ಸಗಣಿಯಿಂದ ಸಾರಿಸಿ ಅದರ ಮೇಲೆ ಸಭೆ ಮಾಡಿ ಎಂದು ಹೇಳಿದರು.
‘ನಮ್ಮ ನಿರುದ್ಯೋಗಿ ವಿದ್ಯಾವಂತರು ದನ ಕಾಯಲೆಂದು ಕಾಯ್ದೆ ಜಾರಿ ಮಾಡಿದ್ದಾರೆ’ RSS, ಸಂಘ ಪರಿವಾರ ಎಂಬ ವಿ.ವಿಯ ಉದ್ದೇಶವೇ ಅಶಾಂತಿ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದು ಎಂದು ಕಾಂಗ್ರೆಸ್ MLC B.K.ಹರಿಪ್ರಸಾದ್ ಹೇಳಿದರು.
ಪ್ರಧಾನಿಗಳು ಕೋಟ್ಯಂತರ ಉದ್ಯೋಗ ಸೃಷ್ಟಿಸ್ತೀವಿ ಎಂದಿದ್ದರು. ಆದರೆ ಕೋಟ್ಯಂತರ ಉದ್ಯೋಗ ಸೃಷ್ಟಿ ಆಗಲಿಲ್ಲ. ಹೀಗಾಗಿ, ನಮ್ಮ ನಿರುದ್ಯೋಗಿ ವಿದ್ಯಾವಂತರು ದನ ಕಾಯಲೆಂದು ಕಾಯ್ದೆ ಜಾರಿ ಮಾಡಿದ್ದಾರೆ. ಸರ್ಕಾರ ಸಹ ದನ ಕಾಯ್ತಿದೆ ಎಂದು ಹರಿಪ್ರಸಾದ್ ಕಿಡಿಕಾರಿದರು. ಈ ವೇಳೆ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶ ಮಾಡಿ ನಾವು ದನ ಕಾಯ್ತೀವಿ, ನೀವು ದನ ಕೊಲ್ತೀರೆಂದು ತಿರುಗೇಟು ಕೊಟ್ಟರು.
‘ಕುರಿ, ಕೋಳಿ ಪ್ರಾಣಿಗಳಲ್ಲವೇ?, ಅವುಗಳ ಹತ್ಯೆ ನಿಷೇಧಿಸಿ’ ಕುರಿ, ಕೋಳಿ ಪ್ರಾಣಿಗಳಲ್ಲವೇ?, ಅವುಗಳ ಹತ್ಯೆ ನಿಷೇಧಿಸಿ ಎಂದು ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಸಚಿವ ಅಶೋಕ್ ಪ್ರತಿಕ್ರಿಯಿಸಿದರು.
ಭಾರತ ಸಂಸ್ಕೃತಿಯಲ್ಲಿ ಗೋವನ್ನು ಪೂಜೆ ಮಾಡುತ್ತೇವೆ. ಗೃಹಪ್ರವೇಶ ವೇಳೆ ಹಸುಗಳನ್ನು ಹೊಸ್ತಿಲು ದಾಟಿಸುತ್ತೇವೆ. ಶತಮಾನಗಳಿಂದಲೂ ಇದು ನಡೆದುಕೊಂಡು ಬರುತ್ತಿದೆ. ಹೆತ್ತ ತಾಯಿಯ ಹಾಲು ಕೆಲ ತಿಂಗಳಷ್ಟೇ ಕುಡಿಯುತ್ತೇವೆ. ಆದರೆ, ಹಸುವಿನ ಹಾಲನ್ನು ಜೀವನ ಪರ್ಯಂತ ಕುಡಿಯುತ್ತೇವೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಸಚಿವ ಅಶೋಕ್ ಪ್ರತಿಕ್ರಿಯಿಸಿದರು.
‘ಬಸ್ ನಿಲ್ದಾಣಗಳಲ್ಲಿ ಕಸ ತಿನ್ನುವ ಹಸುಗಳು ಎಷ್ಟಿವೆ?.. ಇವು ಗೋಮಾತೆ ಅಲ್ಲವೇ’ ಪರಿಷತ್ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಕುರಿತು ಚರ್ಚೆ ನಡೆದ ವೇಳೆ ‘ಕೈ’ ಸದಸ್ಯ ಸಿ.ಎಂ.ಇಬ್ರಾಹಿಂ ಕಾಯ್ದೆಗೆ ಜಾತಿ, ಧರ್ಮದ ಬಣ್ಣ ಕೊಡುವುದಕ್ಕೆ ಹೋಗಬೇಡಿ. ರೈತರ ಹಿತಾಸಕ್ತಿ ಮುಖ್ಯ ಆಗಿದ್ದರೆ ಸಲಹಾ ಸಮಿತಿಗೆ ವಹಿಸಿ. ಈ ಕಾಯ್ದೆಯನ್ನು ಜಂಟಿ ಸಲಹಾ ಸಮಿತಿಗೆ ವಹಿಸಿ. ಸಾಕಷ್ಟು ರೈತ ಮುಖಂಡರು ಈ ಕಾಯ್ದೆ ವಿರೋಧಿಸಿದ್ದಾರೆ. ಈ ಕಾಯ್ದೆ ವಿರೋಧಿಸಿ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಇವರೆಲ್ಲ ಮುಸಲ್ಮಾನರಾ ? ಎಂದು ಸಿ.ಎಂ.ಇಬ್ರಾಹಿಂ ಪ್ರಶ್ನೆ ಹಾಕಿದರು. ಜೊತೆಗೆ, ಬಸ್ ನಿಲ್ದಾಣಗಳಲ್ಲಿ ಕಸ ತಿನ್ನುವ ಹಸುಗಳು ಎಷ್ಟಿವೆ? ಇವು ಗೋಮಾತೆ ಅಲ್ಲವೇ ? ಸಹ ಇಬ್ರಾಹಿಂ ಪ್ರಶ್ನಿಸಿದರು.
ಬಿಲ್ ಮಂಡನೆಗೆ ಆತುರ ಬೇಡ ಎಂದ ಸಿ.ಎಂ.ಇಬ್ರಾಹಿಂ ರೈತ ಸಂಘಟನೆ, ವಿಪಕ್ಷ ಸೇರಿ ಎಲ್ಲರ ಜತೆ ಚರ್ಚೆ ಮಾಡಿ. ಹಾಲು ನಿಲ್ಲಿಸಿದ ಗೋವುಗಳನ್ನು ಯಾರು ಸಲಹುತ್ತಾರೆ? 13 ವರ್ಷದ ತನಕ ಸಾಕುವ ರೈತನಿಗೆ ಹಣ ನೀಡ್ತಾರಾ? ಸರ್ಕಾರ ತಿಂಗಳಿಗೆ ಇಷ್ಟು ಅಂತ ಹಣ ನೀಡುತ್ತದೆಯೇ? ಇಂತಹ ವಿಚಾರಗಳ ಬಗ್ಗೆ ನೀವು ಯೋಚನೆ ಮಾಡಿದ್ದೀರಾ. ವಯಸ್ಸಾದ ಹಸುಗಳಿಂದ ಬೇಸಾಯ ಮಾಡಕ್ಕೆ ಆಗಲ್ಲ. ಆಗ ರೈತ ಏನು ಮಾಡಬೇಕು? ಎಂದು ಇಬ್ರಾಹಿಂ ಪ್ರಶ್ನೆ ಮಾಡಿದರು. ಕೇವಲ ಮತ ಪಡೆಯುವುದಕ್ಕೆ ಈ ಕಾಯ್ದೆ ತರಬೇಡಿ ಎಂದು ಹೇಳಿದರು.
Published On - 7:26 pm, Mon, 8 February 21