ಪೊಲೀಸ್​ ಇಲಾಖೆ ಸೇರಲು ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸುವ ಯತ್ನ; ಇಬ್ಬರು ‘ಕುಳ್ಳರು’ ಅರೆಸ್ಟ್! ಏನಿವರ ಮೋಡಸ್​ ಆಪರೆಂಡಿ?

| Updated By: ಸಾಧು ಶ್ರೀನಾಥ್​

Updated on: Aug 15, 2021 | 12:16 PM

PSI Selection: ಅಭ್ಯರ್ಥಿಯೊಬ್ಬ ನಕಲಿ ಹೈಟ್​ ತೀರಿಸಲು ಹೋಗಿ ಅಂದರ್​ ಆಗಿದ್ದಾನೆ. ತಲೆಯ ಮೇಲೆ ಫೆವಿಕೋಲ್ ಸುರಿದುಕೊಂಡು ಅದರ ಮೇಲೆ ಕೂದಲಿನ ಗುಚ್ಛವಿಟ್ಟಿದ್ದ ಈ ಆಸಾಮಿ. ಅದರಿಂದ ತನಗೂ ಪೊಲೀಸ್​ ಹೈಟ್​ ಇದೆ ಎಂಬುದನ್ನು ಸಾಬೀತು ಪಡಿಸುವ ಉದ್ದೇಶವಿತ್ತು. ಆದರೆ ಅದಾಗಲೇ ಇಲಾಖೆ ಸೇರಿರುವ ಪೊಲೀಸರು ಖತರ್ನಾಕ್​ ಅಭ್ಯರ್ಥಿಯ ಜುಟ್ಟು ಹಿಡಿದು, ಅವನ ಪ್ರಯತ್ನಕ್ಕೆ ಕತ್ತರಿ ಹಾಕಿದ್ದಾರೆ.

ಪೊಲೀಸ್​ ಇಲಾಖೆ ಸೇರಲು ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸುವ ಯತ್ನ; ಇಬ್ಬರು ‘ಕುಳ್ಳರು’ ಅರೆಸ್ಟ್! ಏನಿವರ ಮೋಡಸ್​ ಆಪರೆಂಡಿ?
ಪೊಲೀಸ್​ ಇಲಾಖೆ ಸೇರಲು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಯತ್ನ; ಇಬ್ಬರು ‘ಕುಳ್ಳರು’ ಅರೆಸ್ಟ್! ಏನಿವರ ಮೋಡಸ್​ ಆಪರೆಂಡಿ?
Follow us on

ಬೆಳಗಾವಿ: ಪೊಲೀಸ್​ ಇಲಾಖೆಗೆ ಸೇರುವ ಪ್ರಯತ್ನದಲ್ಲಿ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ ಇಬ್ಬರು ಐನಾತಿ ಯುವಕರನ್ನು ನೇಮಕಾತಿ ಪೊಲೀಸರು ಸೆರೆ ಹಿಡಿದಿದ್ದಾರೆ. ಏನಿವರ ಮೋಡಸ್​ ಆಪರೆಂಡಿ? ಇಲ್ಲಿದೆ ನೋಡಿ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪ್ರೊಬೆಷನರಿ ಸಬ್​​​ಇನ್ಸ್​​ಪೆಕ್ಟರ್​​ (ಪಿಎಸ್ಐ) ಆಗಲು‌ ಯತ್ನಿಸಿದ ಇಬ್ಬರು ಅಭ್ಯರ್ಥಿಗಳನ್ನು ಅರೆಸ್ಟ್ ಮಾಡಲಾಗಿದೆ. ಬೆಳಗಾವಿಯಲ್ಲಿ ಪಿಎಸ್ಐ ಹುದ್ದೆಯ ದೇಹದಾರ್ಢ್ಯತೆ ಪರೀಕ್ಷೆ ವೇಳೆ ಈ ‌ಘಟನೆ ನಡೆದಿದೆ. ದೇಹದಾರ್ಢ್ಯತೆ ಪರೀಕ್ಷೆ ವೇಳೆ ತಮ್ಮ ಎತ್ತರವನ್ನು (Hight) ಹೆಚ್ಚಿಸಲು ಖತರ್ನಾಕ್ ಐಡಿಯಾ ಮಾಡಿದ್ದ ‘ಕುಳ್ಳರು’ ಅಂದರ್ ಆಗಿದ್ದಾರೆ.

ತಲೆಯ ಮೇಲೆ ಥರ್ಮಾಕೋಲ್ ತುಣುಕಿಟ್ಟುಕೊಂಡು ತಮ್ಮ ತಲೆಯ ಮೇಲೆ ತಾವೇ ಚಪ್ಪಡಿ ಎಳೆದುಕೊಂಡರು!
ಬೆಳಗಾವಿಯ ಕೆ‌ಎಸ್‌ಆರ್‌ಪಿ 2ನೇ ಪಡೆ ಮೈದಾನದಲ್ಲಿ ದೇಹದಾರ್ಢ್ಯತೆ ಪರೀಕ್ಷೆ (Physical Fitness Test) ನಡೆಯುತ್ತಿತ್ತು. ಆದರೆ ಇಬ್ಬರು ಖತರ್ನಾಕ್​ ಕುಳ್ಳರು ತಮ್ಮ ಹೈಟ್​​ ಪೊಲೀಸ್​​ ಇಲಾಖೆಗೆ ಫಿಟ್​ ಆಗುವುದಿಲ್ಲ ಎಂದು ಪೂರ್ವಾಲೋಚಿಸಿ, ತಮ್ಮ ತಲೆಯ ಮೇಲೆ ಥರ್ಮಾಕೋಲ್ ತುಣುಕಿಟ್ಟುಕೊಂಡು ಅದರ ಮೇಲೆ ವಿಗ್ ಹಾಕಿಕೊಂಡು ತಾವೂ ಇಲಾಖೆಗೆ ಅಗತ್ಯವಿರುವ ಹೈಟ್​ ಹೊಂದಿದ್ದೇವೆ ಎಂಬುದನ್ನು ಸಾಬೀತು ಪಡಿಸಲು ಯತ್ನಿಸಿದ್ದಾರೆ ಆ ಇಬ್ಬರು ಚಾಲಾಕಿಗಳು. ಆದರೆ ತಮ್ಮ ತಲೆಯ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ! ಹಾಗಾಗಿ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಾಳೇಶ ಸನ್ನಪ್ಪ ದುರದುಂಡಿ ಎಂಬ ಕೃತ್ರಿಮ ಅಭ್ಯರ್ಥಿಯನ್ನು ಬಂಧಿಸಿದ್ದಾರೆ.

ಖತರ್ನಾಕ್​ ಅಭ್ಯರ್ಥಿಯ ಜುಟ್ಟು ಹಿಡಿದು, ಪೊಲೀಸ್​ ಇಲಾಖೆ ಸೇರುವ ಯತ್ನಕ್ಕೆ ಕತ್ತರಿ!
ಮತ್ತೊಂದೆಡೆ ಡಿಎಆರ್ ಮೈದಾನದಲ್ಲಿಯೂ ಇದೇ ಮಾದರಿಯ ದೈಹಿಕ ಪರೀಕ್ಷೆ ನಡೆದಿತ್ತು. ಅಲ್ಲೂ ಇದೇ ಮಾದರಿಯಲ್ಲಿ ಅಭ್ಯರ್ಥಿಯೊಬ್ಬ ನಕಲಿ ಹೈಟ್​ ತೋರಿಸಲು ಹೋಗಿ ಅಂದರ್​ ಆಗಿದ್ದಾನೆ. ಆದರೆ ಇವನ ಮೋಡಸ್​ ಆಪರೆಂಡಿ (modus operandi -MO) ತುಸು ಭಿನ್ನವಾಗಿತ್ತು. ತಲೆಯ ಮೇಲೆ ಫೆವಿಕಾಲ್ ಸುರಿದುಕೊಂಡು ಅದರ ಮೇಲೆ ಕೂದಲಿನ ಗುಚ್ಛವಿಟ್ಟಿದ್ದ ಈ ಆಸಾಮಿ. ಅದರಿಂದ ತನಗೂ ಪೊಲೀಸ್​ ಹೈಟ್​ ಇದೆ ಎಂಬುದನ್ನು ಸಾಬೀತು ಪಡಿಸುವುದು ಈತನ ಉದ್ದೇಶವಾಗಿತ್ತು. ಆದರೆ ಅದಾಗಲೇ ಇಲಾಖೆ ಸೇರಿರುವ ಪೊಲೀಸರು ಖತರ್ನಾಕ್​ ಅಭ್ಯರ್ಥಿಯ ಜುಟ್ಟು ಹಿಡಿದು, ಅವನ ಪ್ರಯತ್ನಕ್ಕೆ ಕತ್ತರಿ ಹಾಕಿದ್ದಾರೆ. ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಈ ಕೃತ್ರಿಮ ಅಭ್ಯರ್ಥಿ ಉಮೇಶ್ ಎಂಬಾತನನ್ನು ಬಂಧಿಸಿದ್ದಾರೆ. ಬೆಳಗಾವಿ ಗ್ರಾಮೀಣ ಹಾಗೂ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕೇಸ್ ದಾಖಲಾಗಿದೆ.

ಪ್ರಾಣ ಪಣಕ್ಕಿಟ್ಟು ಕಳ್ಳರನ್ನ ಹಿಡಿದ ಬೆಳಗಾವಿ ಪೊಲೀಸ್‌!

(Belagavi police sub inspector selection two wrong doers arrested during physical test)

Published On - 10:02 am, Fri, 13 August 21