ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಪ್ರಕರಣ; ಸಿಸಿಟಿವಿ ದೃಶ್ಯದಲ್ಲಿ ಇದ್ದ ಓರ್ವ ಶಂಕಿತನನ್ನು ವಶಕ್ಕೆ ಪಡೆದ ಪೊಲೀಸರು
ಸಿಸಿಟಿವಿಯಲ್ಲಿ ಇರುವ ವ್ಯಕ್ತಿಗೂ ಶಂಕಿತನಿಗೂ ಸಾಮ್ಯತೆ ಕಂಡು ಬಂದಿದೆ. ಆದರೆ ಶಂಕಿತನೇ ಕೃತ್ಯ ಎಸಗಿದ್ನಾ ಎಂಬುದು ಖಚಿತವಿಲ್ಲ. ತಾನು ಭಾಗಿ ಆಗಿಲ್ಲ, ಬೇರೆಡೆ ಇದ್ದೆ ಎಂದು ಶಂಕಿತ ಉತ್ತರಿಸಿದ್ದಾನೆ.
ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಟಿವಿ ದೃಶ್ಯದಲ್ಲಿ ಇದ್ದ ಓರ್ವ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನಿಲ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಈ ಹಿಂದೆ ಹಲ್ಲೆ, ಗಲಾಟೆ ಪ್ರಕರಣಗಳಲ್ಲಿ ಬಂಧಿತನಾಗಿದ್ದ. ಸದ್ಯ ಈತನ ಮೇಲೆ ಶಂಕೆ ವ್ಯಕ್ತವಾಗಿದ್ದು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಶಂಕಿತ ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.
ಸಿಸಿಟಿವಿಯಲ್ಲಿ ಇರುವ ವ್ಯಕ್ತಿಗೂ ಶಂಕಿತನಿಗೂ ಸಾಮ್ಯತೆ ಕಂಡು ಬಂದಿದೆ. ಆದರೆ ಶಂಕಿತನೇ ಕೃತ್ಯ ಎಸಗಿದ್ನಾ ಎಂಬುದು ಖಚಿತವಿಲ್ಲ. ತಾನು ಭಾಗಿ ಆಗಿಲ್ಲ, ಬೇರೆಡೆ ಇದ್ದೆ ಎಂದು ಶಂಕಿತ ಉತ್ತರಿಸಿದ್ದಾನೆ.
ಹೊಸ ರೀತಿ ಬೆದರಿಕೆ ಒಡ್ಡುವ ದೃಷ್ಟಿಯಿಂದ ಕೃತ್ಯ ಸಾಧ್ಯತೆ ಇನ್ನು ಪ್ರಕರಣ ಸಂಬಂಧ ಟಿವಿ9ಗೆ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹೇಳಿಕೆ ನೀಡಿದ್ದಾರೆ. ವಿಡಿಯೋ ಕ್ಯಾಮೆರಾದಲ್ಲಿ ಸೆರೆ ಆಗಿರುವ ಕೆಲವರನ್ನು ಅನುಮಾನದ ಮೇರೆಗೆ ಕರಿಸಲಾಗಿತ್ತು. ಒಬ್ಬರ ಚಹರೆ ಮಾತ್ರ ಮ್ಯಾಚ್ ಆಗ್ತಿದೆ, ಇನ್ನೂ ಗೊತ್ತಾಗ್ಬೇಕಿದೆ. ಮೂವರು ಬಂದು ಐದು ನಿಮಿಷಕ್ಕೊಮ್ಮೆ ಬಟ್ಟೆ ಬದಲಿಸಿದ್ದಾರೆ. ಅನುಮಾನ ಸಾಕಷ್ಟು ವಿಚಾರದಲ್ಲಿದೆ, ಗೊತ್ತಾಗ್ಬೇಕಾದ್ರೆ ಆರೋಪಿಗಳ ಬಂಧನವಾಗಬೇಕು.
ಬೆಡ್ ಬ್ಲಾಕಿಂಗ್ ದಂಧೆ ವಿಚಾರಕ್ಕೂ ಇದಕ್ಕೂ ಸಂಬಂಧ ಇಲ್ಲ ಅನಿಸುತ್ತೆ. ಎಲ್ಲಾ ಆಯಾಮದಲ್ಲೂ ಪೊಲೀಸರು ತನಿಖೆ ಮಾಡ್ತಿದ್ದಾರೆ. ನಿನ್ನೆ ರಾತ್ರಿ 1 ಗಂಟೆಗೂ ಕೂಡ ಪೊಲೀಸ್ ಅಧಿಕಾರಿ ಜೊತೆ ಮಾತಾಡಿದ್ದೇನೆ. ಯಾರ ಮನೆ ಆದ್ರು ನಾವು ಬಿಡಲ್ಲ ಅನ್ನೋ ಸಂದೇಶ ನೀಡಲು ಈ ರೀತಿ ಮಾಡಿರಬಹುದು. ಬೇರೆ ಬೇರೆ ಶಾಸಕರ ಮನೆಯನ್ನು ಟಾರ್ಗೆಟ್ ಮಾಡಿರಬಹುದು. ನಮ್ಮ ಮನೆ ಸುಲಭವಾಗಿ ಇದ್ದಿದ್ದರಿಂದ ಬಂದು ಈ ರೀತಿ ಮಾಡಿದ್ದಾರೆ. ರಾಜಕೀಯವಾಗಿ ನನಗೆ ಯಾವುದೇ ವಿರೋಧಿಗಳಿಲ್ಲ. ಹೊಸ ರೀತಿ ಬೆದರಿಕೆ ಒಡ್ಡೊ ದೃಷ್ಟಿಯಿಂದ ಮಾಡಿದ್ದಾರೆ ಅನಿಸುತ್ತೆ ಎಂದರು.
ಸಿಸಿಟಿವಿಯಲ್ಲಿ ಸೆರೆಯಾಗಿದೆ ಆರೋಪಿಗಳ ಮತ್ತೊಂದು ಸುಳಿವು ಇನ್ನು ಪೊಲೀಸರ ತನಿಖೆಯ ವೇಳೆ ಮತ್ತಷ್ಟು ಮಾಹಿತಿ ಬಯಲಿಗೆ ಬರುವ ಸಾಧ್ಯತೆ ಇದೆ. ಘಟನೆ ಬಳಿಕ 1-2 ಗಂಟೆ ಏರಿಯಾದಲ್ಲೇ ಸುತ್ತಾಡಿರುವ ಆರೋಪಿಗಳು ಗಲ್ಲಿಗಲ್ಲಿ ಸುತ್ತಿ ವಾಪಸ್ ಸತೀಶ್ ರೆಡ್ಡಿ ಮನೆ ಕಡೆ ಬಂದಿದ್ದಾರೆ. ನಂತರ ಮತ್ತೆ ವಾಪಸ್ ಹೋಗಿರುವ ಆರೋಪಿಗಳು ದಾರಿ ಮಧ್ಯೆ ಚಪ್ಪಲಿ, ಬಟ್ಟೆ ಬದಲಾವಣೆ ಮಾಡಿದ್ದಾರೆ. ಏಳರಿಂದ ಎಂಟು ಮನೆಗಳ ಮೇಲೆ ಹತ್ತಿ ಓಡಾಡಿದ್ದಾರೆ. ಕೆಲ ಮನೆಗಳ ಮೇಲೆ ಕುಳಿತು ವಿಶ್ರಾಂತಿ ಪಡೆದಿದ್ದಾರೆ. ಬಳಿಕ ಒಂದು ಬೈಕ್ನ ಲಾಕ್ ಬ್ರೇಕ್ ಮಾಡಿದ್ದಾರೆ. ತಳ್ಳಿ ಬ್ರೇಕ್ ಸ್ಟಾರ್ಟ್ ಮಾಡಲು ಯತ್ನಿಸಿದ್ದಾರೆ ಆಗಿಲ್ಲ ಬಳಿಕ ಆಟೋ ತಳ್ಳಿ ಸ್ಟಾರ್ಟ್ ಮಾಡಿದ್ದಾರೆ ಅದೂ ಆಗಿಲ್ಲ. ಕೊನೆಗೆ ಬೇರೆ ವಾಹನದಲ್ಲಿ ಎಸ್ಕೇಪ್ ಆಗಿರುವ ಸಾಧ್ಯತೆ ಇದೆ.
ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಮನೆಯಂಗಳ ಸ್ವಚ್ಛ ಮಾಡಲು 15ಕ್ಕೂ ಹೆಚ್ಚು ಪೌರಕಾರ್ಮಿಕರ ಬಳಕೆ
Published On - 9:20 am, Fri, 13 August 21