Sign In

By signing in or creating an account, you agree with Associated Broadcasting Company's Terms & Conditions and Privacy Policy.

World Organ Donation Day 2021: ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತೇನೆ, ನೀವೂ ಹಾಕಿ – ಸಿಎಂ ಬೊಮ್ಮಾಯಿ

ನಮ್ಮಿಂದ ಇನ್ನೊಂದು ಜೀವ ಉಳಿಸಲು ಸಾಧ್ಯವಿದ್ದರೆ ಅದನ್ನು ಯಾಕೆ ಮಾಡಬಾರದು. ಎಲ್ಲರೂ ಕೂಡ ಈ ಕುರಿತು ಸಂಕಲ್ಪ ಮಾಡೋಣ. ನಮ್ಮ ಕಿಡ್ನಿ ,ಹಾರ್ಟ್ ,ಲಿವರ್ ಇನ್ನೊಬ್ಬರ ಉಪಯೋಗಕ್ಕೆ ಬರಲಿ. ನಮ್ಮ ಮರಣಾನಂತರ ಅದು ಮತ್ತೆ ಜೀವ ನೀಡುತ್ತದೆ ಎಂದರೆ ಅದಕ್ಕಿಂತ ಉತ್ತಮ ಸಂಗತಿ ಇನ್ನೇನಿದೆ.

World Organ Donation Day 2021: ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತೇನೆ, ನೀವೂ ಹಾಕಿ - ಸಿಎಂ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us
TV9 Web
| Updated By: Skanda

Updated on: Aug 13, 2021 | 9:52 AM

ಉಡುಪಿ: ಇಂದು (ಆಗಸ್ಟ್​ 13) ವಿಶ್ವ ಅಂಗಾಂಗ ದಾನ ದಿನವಾಗಿದ್ದು (World Organ Donation Day) ಈ ಸಂದರ್ಭದಲ್ಲಿ ಉಡುಪಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Karnataka CM Basavaraj Bommai), ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ಇತರರು ಕೂಡ ಸಹಿ ಹಾಕಬೇಕೆಂದು ಕರೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಇತ್ತೀಚಿಗೆ ಅಂಗಾಂಗ ಕಸಿ ಮಾಡುವ ತಂತ್ರಜ್ಞಾನ ಬಂದಿದೆ. ಅದು ಯಶಸ್ವಿಯಾಗುತ್ತಿದೆ. ಅಂಗಾಂಗ ದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಸಬಹುದಾದ್ದರಿಂದ ಹೆಚ್ಚಿನ ಜನ ಅಂಗಾಂಗ ದಾನಕ್ಕೆ (organ donation) ಮುಂದೆ ಬರಬೇಕು. ಇದರಿಂದ ಸಾವಿರಾರು ಜೀವ ಉಳಿಸಲು ಸಾಧ್ಯವಿದೆ ಎಂದು ಕರೆ ನೀಡಿದ್ದಾರೆ.

ನಮ್ಮಿಂದ ಇನ್ನೊಂದು ಜೀವ ಉಳಿಸಲು ಸಾಧ್ಯವಿದ್ದರೆ ಅದನ್ನು ಯಾಕೆ ಮಾಡಬಾರದು. ಎಲ್ಲರೂ ಕೂಡ ಈ ಕುರಿತು ಸಂಕಲ್ಪ ಮಾಡೋಣ. ನಮ್ಮ ಕಿಡ್ನಿ ,ಹಾರ್ಟ್ ,ಲಿವರ್ ಇನ್ನೊಬ್ಬರ ಉಪಯೋಗಕ್ಕೆ ಬರಲಿ. ನಮ್ಮ ಮರಣಾನಂತರ ಅದು ಮತ್ತೆ ಜೀವ ನೀಡುತ್ತದೆ ಎಂದರೆ ಅದಕ್ಕಿಂತ ಉತ್ತಮ ಸಂಗತಿ ಇನ್ನೇನಿದೆ. ಹೀಗಾಗಿ ಜನರು ಅಂಗಾಂಗ ದಾನಕ್ಕೆ ಮನಸ್ಸು ಮಾಡಬೇಕು. ವಿಶ್ವ ಅಂಗಾಂಗ ದಾನ ದಿನದ ಸಂದರ್ಭದಲ್ಲಿ ನಾನು ಅಂಗಾಂಗ ದಾನಕ್ಕೆ ಸಹಿ ಹಾಕುವ ನಿರ್ಧಾರ ತೆಗೆದುಕೊಂಡಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಈ ಸತ್ಕಾರ್ಯಕ್ಕೆ ಮುಂದಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೊರೊನಾ ನಿಯಂತ್ರಣ: ಇಂದು ತಜ್ಞರ ತುರ್ತು ಸಭೆ ಇದೇ ಸಂದರ್ಭದಲ್ಲಿ ಕೊರೊನಾ ನಿಯಂತ್ರಣ ವಿಚಾರವಾಗಿ ಮಾತನಾಡಿದ ಅವರು ಇಂದು ಕರಾವಳಿಯಿಂದ ಬೆಂಗಲುರಿಗೆ ತೆರಳುತ್ತಿದ್ದು, ಇಂದೇ ತಜ್ಞರ ತುರ್ತು ಸಭೆ ಕರೆಯುತ್ತೇನೆ. ಬೆಂಗಳೂರಿಗೆ ತೆರಳಿದ ತಕ್ಷಣ ತಜ್ಞರ ಜೊತೆ ಮಾತನಾಡುವೆ. ಅವರು ನೀಡುವ ವರದಿ ಆಧಾರಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ಕೊರೊನಾ ಮತ್ತೆ ಉಲ್ಬಣಿಸುತ್ತಿರುವುದು ಕಂಡುಬಂದಿರುವುದರಿಂದ ಅದರ ನಿಯಂತ್ರಣಕ್ಕೆ ತಜ್ಞರ ಸಲಹೆ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ದಕ್ಷಿಣ ಕನ್ನಡ ಗಡಿ ಭಾಗದ ಭೇಟಿಯನ್ನು ದಿಢೀರ್​ ರದ್ದುಪಡಿಸಿದ ಸಿಎಂ ಬೊಮ್ಮಾಯಿ 

ಉಡುಪಿ ಜನರು ಹೃದಯ ವೈಶಾಲ್ಯವುಳ್ಳವರು; ಕಷ್ಟಕ್ಕೆ ಪರಿಹಾರ ಕೇಳುವರೇ ವಿನಃ ವೈಯಕ್ತಿಕವಾಗಿ ಏನೂ ಕೇಳಲ್ಲ: ಸಿಎಂ ಬೊಮ್ಮಾಯಿ

(World Organ Donation Day 2021 Karnataka CM Basavaraj Bommai urge people to sign for organ donation)

ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
2 ಕೋಟಿ ಹಣ ಬೇಕು ಶಿವ, ಹುಂಡಿಯಲ್ಲಿ ಸಿಕ್ತು ಬೇಡಿಕೆ ಪತ್ರ
2 ಕೋಟಿ ಹಣ ಬೇಕು ಶಿವ, ಹುಂಡಿಯಲ್ಲಿ ಸಿಕ್ತು ಬೇಡಿಕೆ ಪತ್ರ