ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಪ್ರಕರಣ; ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ತಮ್ಮ ಆಪ್ತನನ್ನೇ ಜೈಲಿಗೆ ಕಳಿಸಿದ್ರೆಂಬ ಜಿದ್ದು ದುಷ್ಕೃತ್ಯಕ್ಕೆ ಕಾರಣನಾ?
ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದಿದ್ದರು. ಈ ವೇಳೆ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಸೇರಿ ಹಲವರ ಬಂಧನವಾಗಿತ್ತು. ತಮ್ಮ ಆಪ್ತನನ್ನೇ ಜೈಲಿಗೆ ಕಳಿಸಿದ್ರೆಂಬ ಜಿದ್ದು ಸಂಬಂಧಿಕರಿಗಿತ್ತಾ? ಎಂಬ ಶಂಕೆ ವ್ಯಕ್ತವಾಗಿದ್ದು ಈ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೂ ಅನೇಕ ಅಯಾಮಗಳಲ್ಲಿ ಪೊಲೀಸರು ಆರೋಪಿಗಳನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಮತ್ತೊಂದು ಅನುಮಾನ ಹುಟ್ಟುಕೊಂಡಿದೆ. ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದಿದ್ದಕ್ಕೆ ದುಷ್ಕೃತ್ಯ ನಡೆದಿದೆ? ಎಂಬ ಅನುಮಾನ ಉಂಟಾಗಿದೆ.
ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದಿದ್ದರು. ಈ ವೇಳೆ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಸೇರಿ ಹಲವರ ಬಂಧನವಾಗಿತ್ತು. ತಮ್ಮ ಆಪ್ತನನ್ನೇ ಜೈಲಿಗೆ ಕಳಿಸಿದ್ರೆಂಬ ಜಿದ್ದು ಸಂಬಂಧಿಕರಿಗಿತ್ತಾ? ಎಂಬ ಶಂಕೆ ವ್ಯಕ್ತವಾಗಿದ್ದು ಈ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಡ್ ಬ್ಲಾಕ್ ದಂಧೆ ಸಂಬಂಧ 2 ಎಫ್ಐಆರ್ ದಾಖಲಾಗಿತ್ತು. ಜಯನಗರ ಮತ್ತು ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಸಂಬಂಧ 11 ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿತ್ತು. ಇದೇ ಜಿದ್ದಿಗೆ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿರು ಸಾಧ್ಯತೆ ಇದೆ.
ಇಬ್ಬರು ವಶಕ್ಕೆ, ಅಜ್ಞಾತ ಸ್ಥಳದಲ್ಲಿ ಮುಂದುವರಿದ ಖಾಕಿ ವಿಚಾರಣೆ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ನಿವಾಸದಲ್ಲಿ ಮೊನ್ನೆ ಮಧ್ಯರಾತ್ರಿ 1.27ಕ್ಕೆ ಕಾಂಪೌಂಡ್ ಹಾರಿ ಒಳ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಗೇಟ್ ಒಳಗಡೆ ಪಾರ್ಕ್ ಮಾಡಲಾಗಿದ್ದ ಎರಡು ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ರು. ಇಷ್ಟು ದಿನ ಬೆಂಗಳೂರಿನ ಸಾಮಾನ್ಯ ಗಲ್ಲಿಗಳಲ್ಲಿ ಇಂಥಾ ಘಟನೆಗಳು ನಡೀತಿದ್ವು. ಆದ್ರೆ ಜನಪ್ರತಿನಿಧಿಗೆ ಸೇರಿರೋ ಕಾರುಗಳನ್ನೇ ಬೆಂಕಿ ಹಚ್ಚಿ ಸುಟ್ಟುಹಾಕಿರೋ ಘಟನೆಯಿಂದ ರಾಜಧಾನಿ ಬೆಚ್ಚಿಬಿದ್ದಿತ್ತು. ಘಟನೆ ಬೆಳಕಿಗೆ ಬರ್ತಿದ್ದಂತೆ ಐದು ಟೀಂಗಳನ್ನು ರಚನೆ ಮಾಡಿರೋ ಪೊಲೀಸರು ಹಲವು ಏರಿಯಾಗಳಲ್ಲಿ ದುಷ್ಕರ್ಮಿಗಳಿಗಾಗಿ ಜಾಲಾಡಿದ್ದಾರೆ. ಕೊನೆಗೆ ಏರಿಯಾ ಸಿಸಿಟಿವಿ ದೃಶ್ಯ, ಮೊಬೈಲ್ ಟವರ್ ಲೊಕೇಷನ್ ಆಧರಿಸಿ 20 ಜನ್ರನ್ನು ವಿಚಾರಣೆ ನಡೆಸಿದ್ರು. ಈ ಪೈಕಿ ಇಬ್ಬರು ಶಂಕಿತರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿರೋ ಪೊಲೀಸರು ತಮ್ಮದೇ ಭಾಷೆಯಲ್ಲಿ ಬಾಯಿಬಿಡಿಸ್ತಿದ್ದಾರೆ.
ಘಟನೆ ಬಳಿಕ ತಡ ಮಾಡದ ಪೊಲೀಸರು ಶೀಘ್ರ ತನಿಖೆ ಕೈಗೊಂಡು ಹಲವು ಆಯಾಮಗಳಲ್ಲಿ ಪೊಲೀಸ್ ತಂಡಗಳು ಕೆಲಸ ಮಾಡ್ತಿದ್ದು, ಏರಿಯಾದ ಸಿಸಿಟಿವಿ ದೃಶ್ಯ ವಶಕ್ಕೆ ಪಡೆದು ಸೂಕ್ಷ್ಮವಾಗಿ ಪರಿಶೀಲನೆ ನಡೆಸ್ತಿದ್ದಾರೆ. ಸಿಸಿಟಿವಿ ಪರಿಶೀಲನೆ ವೇಳೆ ಮೂವರು ಪಕ್ಕಾ ಪ್ಲಾನ್ ಮಾಡಿರೋದು ಬಯಲಾಗಿದೆ. ಸದ್ಯ ಸಿಸಿಟಿವಿ ದೃಶ್ಯಾವಳಿ ಮತ್ತು ಟವರ್ ಲೋಕೇಷನ್ ಆಧರಿಸಿ ಇಬ್ಬರ ಮೇಲೆ ಶಂಕೆ ವ್ಯಕ್ತವಾಗಿದ್ದು. ಓರ್ವನ ಬಗ್ಗೆ ಪೊಲೀಸರಿಗೆ ಮಾಹಿತಿ ಕೂಡಾ ಸಿಕ್ಕಿದೆ.
ಡ್ರಗ್ಸ್ ನಶೆಯಲ್ಲಿ ದುಷ್ಕರ್ಮಿಗಳು ನಡೆಸಿದ್ರಾ ಕುಕೃತ್ಯ..? ಇನ್ನು ಕಾರುಗಳಿಗೆ ಬೆಂಕಿ ಹಚ್ಚಿರೋ ಪ್ರಕರಣ ಸಂಬಂಧ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಸಂಚು ರೂಪಿಸಿ ಡ್ರಗ್ಸ್ ನಶೆಯಲ್ಲಿ ಕಿಡಿಗೇಡಿಗಳು ಕೃತ್ಯವೆಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದ್ರ ಹಿಂದೆ ಕಾಣದ ಕೈಗಳು ಷಡ್ಯಂತ್ರ ರೂಪಿಸಿ ಬೆಂಕಿ ಹಚ್ಚಿಸಿರುವ ಌಂಗಲ್ನಲ್ಲೂ ತನಿಖೆ ಮುಂದುವರಿದಿದೆ. ಇತ್ತ ಸುಟ್ಟುಕರಕಲಾದ ಎರಡು ಕಾರುಗಳನ್ನು ಟೋಯಿಂಗ್ ಮೂಲಕ ಗ್ಯಾರೇಜ್ಗೆ ಕೊಂಡೊಯ್ಯಲಾಯ್ತು.
ಶಿವನ ಮೂರ್ತಿ ವಿವಾದದ ಬೆನ್ನಲೇ ನಡೀತಾ ಬೆಂಕಿ ಹಚ್ಚೋ ಕೆಲಸ..? ಯೆಸ್ ಇಂಥದ್ದೊಂದು ಡೌಟ್ ಬರೋಕೆ ಕಾರಣ ಖುದ್ದು ಸತೀಶ್ ರೆಡ್ಡಿ ಹೇಳಿರೋ ಈ ಒಂದು ಮಾತು. ಅಂದಹಾಗೆ ಸತೀಶ್ ರೆಡ್ಡಿ ಮನೆ ಮುಂದೆ ಎರಡು ಕಾರು ಧಗಧಗಿಸಿದ ಹಿಂದೆ ಕಾರಣ ಹುಡುಕ್ತಾ ಹೋದ್ರೆ, ಇದೇ ಶಿವನಮೂರ್ತಿ ವಿವಾದ ತೆರೆದುಕೊಳ್ತಿದೆ. ಸತೀಶ್ ರೆಡ್ಡಿ ಪ್ರತಿನಿಧಿಸೋ ಬೊಮ್ಮನಹಳ್ಳಿ ಕ್ಷೇತ್ರ ಬೇಗೂರು ಕೆರೆಯಲ್ಲಿರೋ ಈ ಶಿವನ ಮೂರ್ತಿ ಬಗ್ಗೆಯೂ ತನಿಖೆ ಕೇಂದ್ರೀಕೃತವಾಗಿದೆ. ಈ ಸ್ಟ್ಯಾಚ್ಯು ವಿಚಾರವಾಗಿಯೇ ನಿನ್ನೆ ಸಂಜೆ ಸ್ವಲ್ಪ ಗೊಂದಲ ಎದ್ದಿತ್ತು. ಹೀಗಾಗಿ ಸತೀಶ್ ರೆಡ್ಡಿ ಮೂರ್ತಿ ಸ್ಥಳಕ್ಕೆ ಹೋಗಿದ್ರು. ಹೋಗಿ ಬಂದ ದಿನವೇ ರಾತ್ರಿ ಕಾರಿಗೆ ಬೆಂಕಿ ಬಿದ್ದಿದೆ. ಇದ್ರಿಂದ ಶಿವನ ಮೂರ್ತಿ ವಿವಾದಕ್ಕೂ, ಕಾರಿಗೆ ಬೆಂಕಿ ಇಟ್ಟಿರೋದಕ್ಕೂ ಲಿಂಕ್ ಇದ್ದರೂ ಇರಬಹುದು ಅನ್ನೋ ಅನುಮಾನ ಸತೀಶ್ ರೆಡ್ಡಿಗೂ ಇದೆ. ಆದ್ರೂ ನೇರವಾಗಿ ಆರೋಪ ಮಾಡದ ಸತೀಶ್ ರೆಡ್ಡಿ, ಎಲ್ಲ ಆಯಾಮದಲ್ಲೂ ತನಿಖೆಯಾಗಲಿ ಅಂತಿದ್ದಾರೆ.
ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದವರು ಇಬ್ಬರಲ್ಲ, ಮೂವರು! ಸಿಸಿಟಿವಿ ದೃಶ್ಯದಿಂದ ಬಯಲಾದ ಸತ್ಯ
Published On - 7:39 am, Fri, 13 August 21