ಬೆಳಗಾವಿ, ಡಿ.14: ಅಧಿವೇಶನದ (Belagavi Session) ನಡುವೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಲವು ಸಂಘಟನೆಗಳು ಸುರ್ವಣ ವಿಧಾನಸೌಧದ ಬಳಿ ಪ್ರತಿಭಟನೆಗಳನ್ನು (Protest) ನಡೆಸುತ್ತಿವೆ. ಈ ನಡುವೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ತುಂಬುವ ಮದ್ಯ ಪ್ರಿಯರು ಕೂಡ ಪ್ರತಿಭಟನೆಗೆ ಇಳಿದಿದ್ದಾರೆ. ಇವರ ವಿವಿಧ ಬೇಡಿಕೆಗಳನ್ನು ಕೇಳಿ ಸಚಿವ ಸಂತೋಷ್ ಲಾಡ್ ಅವರು ಅಚ್ಚರಿ ಹಾಗೂ ಶಾಕ್ ಆಗಿದ್ದಾರೆ.
ಸುವರ್ಣಗಾರ್ಡನ್ ಟೆಂಟ್‌ನಲ್ಲಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘ ಪ್ರತಿಭಟನೆ ನಡೆಸುತ್ತಿದ್ದು, “ನಿತ್ಯ ದುಡಿ.. ಸತ್ಯ ನುಡಿ.. ಸ್ವಲ್ಪ ಕುಡಿ.. ಮನೆಗೆ ನಡಿ” ಎಂಬ ಘೋಷವಾಕ್ಯದಡಿ ಹೋರಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಚಿವ ಸಂತೋಷ್ ಲಾಡ್, ಪ್ರತಿಭಟನಾನಿರತ ಮದ್ಯಪ್ರಿಯರ ಜೊತೆ ಕುಳಿತು ಶಾಂತಚಿತ್ತದಿಂದ ಸಮಸ್ಯೆ ಆಲಿಸಿದರು.
ಇದನ್ನೂ ಓದಿ: BBMP ವಾರ್ಡ್ ಮರು ವಿಂಗಡಣೆ ಬಳಿಕ RTE ಶಿಕ್ಷಣದಿಂದ ವಂಚಿತರಾದ ಬಡ ಮಕ್ಕಳು, ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ
ಈ ವೇಳೆ ಮದ್ಯಪ್ರಿಯರ ಮನವಿ ಕೇಳಿ ಸಚಿವ ಸಂತೋಷ್ ಲಾಡ್ ಅವರು ಅಚ್ವರಿಗೊಳಗಾಗಿದ್ದಾರೆ. ಹಾಗಿದ್ದರೆ ಮದ್ಯ ಪ್ರಿಯರು ಮುಂದಿಟ್ಟ ಬೇಡಿಕೆಗಳು ಯಾವುವು? ಈ ಕೆಳಗಿನಂತಿವೆ.
ಹೀಗೆ ವಿವಿಧ ಬೇಡಿಕೆಗಳನ್ನು ಮದ್ಯ ಪ್ರಿಯರು ಸಚಿವ ಸಂತೋಷ್ ಲಾಡ್ ಮುಂದಿಟ್ಟಿದ್ದಾರೆ. ಮದ್ಯಪ್ರಿಯರ ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಸಂತೋಷ್ ಲಾಡ್ ಭರವಸೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Thu, 14 December 23