AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಜೀವ ತೆಗೆಯುತ್ತಿರುವ ಗಾಳಿಪಟ ಮಾಂಜಾ ದಾರ: ಕೇರ್ ಟೇಕರ್ ದುರಂತ ಸಾವು

ತಂದೆ-ತಾಯಿಗೆ ಆತನೊಬ್ಬನೇ ಮಗ. ಅಪ್ಪ-ಅಮ್ಮ ಬೆಂಗಳೂರಲ್ಲಿ ನೆಲೆಸಿದ್ರೆ ಈತ ಓದಿನ ಜೊತೆಗೆ ತನ್ನ ಅಜ್ಜಿಗೂ ಆಸರೆ ಆಗಿದ್ದ. ಐಟಐ ವ್ಯಾಸಂಗ ಮಾಡುತ್ತಿದ್ದ ಆತ, ರಾತ್ರಿ ಹೊತ್ತಲ್ಲಿ ಕೇರ್ ಟೇಕರ್ ಕೆಲಸ ಮಾಡಿ ಹಲವು ಹಿರಿಯ ಜೀವಗಳಿಗೆ ಆಸರೆ ಆಗಿದ್ದ. ಚೆನ್ನಾಗಿ ಓದಿ ಉದ್ಯೋಗ ಹಿಡಿಯುವ ಕನಸು ಕಂಡಿದ್ದ 19 ವರ್ಷದ ಯುವಕನ ಜೀವವನ್ನೇ ಒಂದು ದಾರ ಬಲಿ ಪಡೆದಿದೆ. ಇನ್ನು ಇದ್ದ ಓರ್ವ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನೂ ಅಂತೀರಾ ಈ ಸ್ಟೋರಿ ನೋಡಿ.

ಬೆಳಗಾವಿಯಲ್ಲಿ ಜೀವ ತೆಗೆಯುತ್ತಿರುವ ಗಾಳಿಪಟ ಮಾಂಜಾ ದಾರ: ಕೇರ್ ಟೇಕರ್ ದುರಂತ ಸಾವು
ದ್ರುವ (ಮೃತ ಯುವಕ)
ಸಹದೇವ್​ ಮಾನೆ
| Edited By: |

Updated on: Oct 02, 2026 | 6:46 PM

Share

ಬೆಳಗಾವಿ/ಹುಬ್ಬಳ್ಳಿ, (ಅಕ್ಟೋಬರ್ 02): ನಾಡಿನಲ್ಲಿ ಈಗ ದಸರಾ ಹಬ್ಬದ ಸಂಭ್ರಮಕ್ಕೆ ದಿನಗಣನೇ ಶುರುವಾಗಿದೆ. ದಸರಾ ಹಬ್ಬದ ರಜೆಯಲ್ಲಿ ಗಾಳಿಪಟ ಹಾರಿಸುವುದು ಉತ್ತರ ಕರ್ನಾಟಕದ ಸಂಪ್ರದಾಯ. ಆದ್ರೆ, ಗಾಳಿಪಟಕ್ಕೆ ಮಾಂಜಾದಾರವನ್ನು ನಿಷೇಧಿಸಲಾಗಿದೆ. ಆದರೂ ಕೆಲವು ಕಡೆ ಮಂಜಾದಾರವನ್ನು ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಪೂರಕವೆಂಬಂತೆ ಬೆಳಗಾವಿಯಲ್ಲಿ ನಿಷೇಧಿತ ಮಾಂಜಾದಾರಕ್ಕೆ  ಇಬ್ಬರು ಯುವಕ ಬಲಿಯಾಗಿದ್ದಾನೆ. ಇನ್ನೊಂದೆಡೆ ಹುಬ್ಬಳ್ಳಿಯಲ್ಲಿ ಸ್ಕೂಟಿ ಮೇಲೆ ಹೋಗುತ್ತಿದ್ದ ಮಹಿಳೆ ಕುತ್ತಿಗೆಗೆ ಮಾಂಜಾದಾರ ಸಿಲುಕಿದ್ದು, ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿಯಲ್ಲಿ ಮಾಂಜಾದಾರಕ್ಕೆ ಇಬ್ಬರು ಬಲಿ

ಗಾಳಿಪಟ ಹಾರಿಸುವ ಸಂಭ್ರಮವು ಬೆಳಗಾವಿ ನಗರದಲ್ಲಿ ಸಾರ್ವಜನಿಕರ ಜೀವಕ್ಕೆ ಭಾರಿ ಕಂಟಕವಾಗಿ ಪರಿಣಮಿಸಿದೆ. ನಗರದಲ್ಲಿ ಅಪಾಯಕಾರಿ ಮಾಂಜಾ ದಾರ ಮತ್ತು ಗಾಳಿಪಟದ ಹುಚ್ಚಾಟಕ್ಕೆ ಇಬ್ಬರು ಪ್ರಾಣ ಕಳೆದುಕೊಂಡಿಕೊಂಡಿದ್ದಾರೆ. ವಡಗಾವಿಯ ನಿಜಾಮಿಯಾನಗರದಲ್ಲಿ ಗಾಳಿಪಟ ಹಿಡಿಯಲು ಯತ್ನಿಸುವಾಗ ಎರಡನೇ ಮಹಡಿಯ ಟೆರೇಸ್‌ನಿಂದ ಬಿದ್ದು 9 ವರ್ಷದ ಬಾಲಕ ಮೃತಪಟ್ಟ ಘಟನೆ ಮಾಸುವ ಮುನ್ನವೇ, ಮತ್ತೊಂದು ಘಟನೆ ನಡೆದಿದ್ದು, ಬೈಕ್ ಮೇಲೆ ಹೋಗುತ್ತಿದ್ದ ಮಹಾಂತೇಶ ನಗರದ ನಿವಾಸಿ ದ್ರುವ ಕರ್ಜಗಿ (19) ಮಾಂಜಾದಾರಕ್ಕೆ ಸಿಲುಕಿ ದುರಂತ ಅಂತ್ಯಕಂಡಿದ್ದಾನೆ.

ಇದನ್ನೂ ನೋಡಿ: ದಾವಣಗೆರೆ: ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಚನ್ನಗಿರಿಯಲ್ಲಿ ಪತ್ತೆ

ಬೈಕ್ ಮೇಲೆ ಹೋಗುವಾಗ ಕುತ್ತಿಗೆಗೆ ಸುಲುಕಿದ ಮಾಂಜಾದಾರ

ಮಾಂಜಾ ದಾರದ ದುರಂತಕ್ಕೆ ಬಲಿಯಾದ ಯುವಕನನ್ನು ಮಹಾಂತೇಶನಗರದ ನಿವಾಸಿ ಧ್ರುವ ಸಂತೋಷ ಕರಜಗಿ (19) ಎಂದು ಗುರುತಿಸಲಾಗಿದೆ. ಧ್ರುವ ನಿನ್ನೆ (ಅ.01) ಬೈಕ್​​​ನಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಏಕಾಏಕಿ ಗಾಳಿಪಟದ ಹರಿತವಾದ ಮಾಂಜಾ ದಾರ ಆತನ ಕುತ್ತಿಗೆಗೆ ಸಿಲುಕಿಕೊಂಡಿದ್ದು, ಮಾಂಜಾ ದಾರವು ಕುತ್ತಿಗೆಗೆ ಆಳವಾಗಿ ಕೊಯ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಪರಿಣಾಮ ಬೈಕ್ ಮೇಲೆಯೇ ಉಸಿರು ಚೆಲ್ಲಿದ್ದಾನೆ.

ಕೇರ್ ಟೇಕರ್ ಆಗಿದ್ದ ದ್ರುವ

ಇನ್ನೂ ಉಪಜೀವನಕ್ಕೆ ಇತನ ತಂದೆ-ತಾಯಿ ಬೆಂಗಳೂರಲ್ಲಿ ನೆಲೆಸಿದ್ದಾರೆ. ಇತ್ತ ಅಜ್ಜಿಯ ಆಶ್ರಯದಲ್ಲಿ ಬೆಳೆದ ದ್ರುವ ಅಜ್ಜಿ ಜೊತೆಗೆ ಬೆಳಗಾವಿಯಲ್ಲಿ ಇದ್ದ. ಐಟಿಐ ವ್ಯಾಸಂಗ ಮಾಡ್ತಿದ್ದ ದ್ರುವ ರಾತ್ರಿ ಹೊತ್ತಲ್ಲಿ ಮಕ್ಕಳಿಲ್ಲದ ಹಿರಿಯ ಜೀವಗಳ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ. ಹೀಗೆ ತನ್ನ ಅಜ್ಜಿಯ ಜೊತೆಗೆ ಹಲವು ಜೀವಗಳಿಗೂ ಈ 19 ವರ್ಷದ ದ್ರುವ ಆಶ್ರವಾಗಿದ್ದ. ಕೇರ್ ಟೇಕರ್ ಕೆಲಸದಿಂದ ಬರುತ್ತಿದ್ದ ಅಲ್ಪಸ್ವಲ್ಪ ಹಣದಲ್ಲೇ ದ್ರುವ ತನ್ನ ಅಜ್ಜಿಯನ್ನು ಸಲುಹುವ ಜೊತೆಗೆ ತನ್ನ ವಿದ್ಯಾಭ್ಯಾಸಕ್ಕೂ ಬಳಸುತ್ತಿದ್ದ.

ನಿಷೇಧವಿದ್ದರೂ ಬೆಳಗಾವಿಯಲ್ಲಿ ಮಾಂಜಾದಾರ ಮಾರಾಟ

ಮಾಂಜಾದಾರಕ್ಕೆ ಬೆಳಗಾವಿಯಲ್ಲಿ ಸಾಕಷ್ಟು ಯುವಕರು ಸಾವನಪ್ಪಿದ್ದಾರೆ. ಈ ಕಾರಣಕ್ಕೆ ಬೆಳಗಾವಿಯ ಹಿಂದಿನ ಡಿಸಿ ಎಂ.ಜಿ ಹಿರೇಮಠ ಬೆಳಗಾವಿ ಜಿಲ್ಲೆಯಾದ್ಯಂತ ಮಾಂಜಾದಾರ ಬಳಕೆ ಹಾಗೂ ಮಾರಾಟಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದ್ದರು. ನಿಷೇಧ ಆದೇಶ ಇದ್ದರೂ ರಾಜಸ್ಥಾನ ಮೂಲದ ವ್ಯಾಪಾರಿಗಳು ಅಕ್ರಮವಾಗಿ ಬೆಳಗಾವಿಯ ಪಾಂಗುಳ್ ಗಲ್ಲಿ ಸೇರಿದಂತೆ ಹಲವಡೆ ಮಾಂಜಾದಾರ ಮಾರಾಟ ಮಾಡ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಂಜಾದಾರಕ್ಕೆ ಸಿಲುಕಿ ನೆಲಕ್ಕೆ ಬಿದ್ದ ಮಹಿಳೆ

ಇನ್ನೊಂದೆಡೆ ಹುಬ್ಬಳ್ಳಿಯಲ್ಲಿ ಓರ್ವ ಮಹಿಳೆ ಸಹ ಈ ನಿಷೇಧಿತ ಮಾಂಜಾದಾರಕ್ಕೆ ಸಿಲುಕಿ ಬೈಕ್ ಮೇಲಿಂದ ಬಿದ್ದಿರುವ ಘಟನೆ ನಡೆದಿದೆ. ಹುಬ್ಬಳ್ಳಿಯ ಬಂಕಾಪುರ ಚೌಕದಲ್ಲಿ ನಿನ್ನೆ (ಅ.01) ಬೈಕ್​​​ ಚಲಾಯಿಸಿಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಗೆ ಏಕಾಏಕಿ ಮಂಜಾದಾರ ಸಿಲುಕಿದೆ. ಪರಿಣಾಮ ಮಹಿಳೆ ಸ್ಕೂಟಿ ಮೇಲಿಂದ ಕೆಳಕಕ್ಕೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಈ ಮಾಂಜಾ ದಾರ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸಹದೇವ್​ ಮಾನೆ
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More