ಗ್ರಾಮ ಪಂಚಾಯಿತಿ ಅಧ್ಯಕ್ಷನ ಮನೆಗೆ ಕನ್ನ: 8 ದುಷ್ಕರ್ಮಿಗಳಿಂದ 23 ಲಕ್ಷ ಹಣ, 120 ಗ್ರಾಂ ಚಿನ್ನ ದರೋಡೆ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 25, 2022 | 3:25 PM

ಮಧ್ಯರಾತ್ರಿ ಮನೆ ಬಾಗಿಲು ಒಡೆದು ದುಷ್ಕರ್ಮಿಗಳು ಒಳ ನುಗ್ಗಿದ್ದಾರೆ.  ಚಂದ್ರಶೇಖರ್ ಮತ್ತು ಪತ್ನಿ, ಸೊಸೆಯನ್ನ ಬೆಡ್ ರೂಮ್​ನಲ್ಲಿ ಕೂಡಿಹಾಕಿ ನಂತರ ದರೋಡೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷನ ಮನೆಗೆ ಕನ್ನ: 8 ದುಷ್ಕರ್ಮಿಗಳಿಂದ 23 ಲಕ್ಷ ಹಣ, 120 ಗ್ರಾಂ ಚಿನ್ನ ದರೋಡೆ
ದರೋಡೆಯಾಗಿರುವುದನ್ನು ಪರಿಶೀಲಿಸುತ್ತಿರುವ ಪೊಲೀಸ್.
Follow us on

ಬೆಳಗಾವಿ: ಗ್ರಾಮ ಪಂಚಾಯಿತಿ ಅಧ್ಯಕ್ಷನ ಮನೆಯಲ್ಲಿ ದರೋಡೆ (Robbery) ನಡೆದಿದ್ದು, ಎಂಟು ಜನ ದುಷ್ಕರ್ಮಿಗಳಿಂದ 23 ಲಕ್ಷ ಹಣ, 120 ಗ್ರಾಂ ಚಿನ್ನ ದರೋಡೆ ಮಾಡಿರುವಂತಹ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಬನ್ನೂರ ತಾಂಡಾದಲ್ಲಿ ನಡೆದಿದೆ. ಚಂದ್ರಶೇಖರ್ ರಜಪೂತ ಗ್ರಾಮ ಪಂಚಾಯಿತಿ ಅಧ್ಯಕ್ಷ. ಮಧ್ಯರಾತ್ರಿ ಮನೆ ಬಾಗಿಲು ಬಡೆದು ದುಷ್ಕರ್ಮಿಗಳು ಒಳ ನುಗ್ಗಿದ್ದಾರೆ.  ಚಂದ್ರಶೇಖರ್ ಮತ್ತು ಪತ್ನಿ, ಸೊಸೆಯನ್ನ ಬೆಡ್ ರೂಮ್​ನಲ್ಲಿ ಕೂಡಿಹಾಕಿ ನಂತರ ದರೋಡೆ ಮಾಡಲಾಗಿದೆ ಎನ್ನಲಾಗುತ್ತಿದೆ. ಪಿಡಿಓ ಆಗಿದ್ದ ಮಗ ಅಕಾಲಿಕ ಮರಣ ಹೊಂದಿದ್ದು, ಮಗನ ಸಾವು ಹಿನ್ನೆಲೆ ವಿಮೆ ಹಣವನ್ನು ಚಂದ್ರಶೇಖರ್​ ಮನೆಯಲ್ಲಿಟ್ಟಿದ್ದರು. ಸ್ಥಳಕ್ಕೆ ಎಎಸ್‌ಪಿ ಮಹಾನಿಂಗ ನಂದಗಾವಿ, ಶಾಸಕ ಮಹಾದೇವಪ್ಪ ಯಾದವಾಡ ಭೇಟಿ ನೀಡಿದ್ದಾರೆ. ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾತ್ರೋರಾತ್ರಿ ಜಮೀನಿಗೆ ನುಗ್ಗಿ ಶುಂಠಿ ಬೆಳೆ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಕಳ್ಳರ ಕೈಚಳಕ ಸೆರೆ

ಮೈಸೂರು: ಜಿಲ್ಲೆಯಲ್ಲಿ ಕಳ್ಳರ ಗ್ಯಾಂಗ್ ಒಂದು ನಿರಂತರವಾಗಿ ಶುಂಠಿ ಬೆಳೆ ಕದ್ದು ಲಾರಿಯಲ್ಲಿ ಸಾಗಿಸಿರುವಂತಹ ಘಟನೆ ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ. ರಾತ್ರೋರಾತ್ರಿ ಜಮೀನಿಗೆ ನುಗ್ಗಿ ಕಳ್ಳರು ಶುಂಠಿ ಬೆಳೆ ಕದ್ದು ಸಾಗಾಟ ಮಾಡಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಕಷ್ಟಪಟ್ಟು ಬೆಳೆದ ಶುಂಠಿ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಮತ್ತೊಂದೆಡೆ ರಾತ್ರಿ ವೇಳೆ ಜಮೀನಿಗೆ ನುಗ್ಗಿ ಶುಂಠಿ ಬೆಳೆ ಕಳವು ಮಾಡಲಾಗುತ್ತಿದೆ. ಹೀಗಾಗಿ ಶುಂಠಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದಾರೆ. ಇನ್ನು ಈ ಕುರಿತಾಗಿ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಪಾರ್ಕ್ ಮಾಡಿದ್ದ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆ..!

ಆನೇಕಲ್: ಪಾರ್ಕ್ ಮಾಡಿದ್ದ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರುವಂತಹ ಘಟನೆ ಆನೇಕಲ್​ನ ಹೆನ್ನಾಗರ ಗೇಟ್ ಬಳಿ ನಡೆದಿದೆ. ಬೆಂಗಳೂರಿನ ವೀರಭದ್ರನಗರ ನಿವಾಸಿ ಚೇತನ್ ಕುಮಾರ್ (35) ಮೃತಪಟ್ಟ ವ್ಯಕ್ತಿ. ನಾಲ್ಕೈದು ದಿನಗಳಿಂದ ಕಾರಿನಲ್ಲಿದ್ದ ಶವ, ವಾಸನೆ ಬಂದ ನಂತರ ವಿಚಾರ ಬೆಳಕಿಗೆ ಬಂದಿದೆ. ಹೆನ್ನಾಗರ ಗೇಟ್ ಬಳಿ ಚೇತನ್ ಕಾರು ನಿಲ್ಲಿಸಿದ್ದು, ಡ್ರೈವರ್ ಸೀಟಿನಲ್ಲೇ ಕೊತು ಕೊನೆಯುಸಿಳೆದಿದ್ದಾನೆ. ತಿರುಪತಿಗೆ ಹೋಗಿ ಬರುತ್ತೇನೆಂದು ಮನೆಯಿಂದ ತೆರಳಿದ್ದು, ಮನೆಯವರು ತಿರುಪತಿ ಗೆ ಹೋಗಿದ್ದಾನೆ ಅಂತ ತಿಳಿದುಕೊಂಡಿದ್ದರು. ಇನ್ನು ವ್ಯಕ್ತಿ ಮಲಗಿರಬಹುದೆಂದು ಸ್ಥಳೀಯರು ಊಹಿಸಿದ್ದರು. ನಾಲ್ಕು ದಿನವಾದ್ರೂ ಕಾರು ಒಂದೇ ಕಡೆ ಪಾರ್ಕ್ ಆಗಿದ್ದು, ‌ ಈ ಹಿನ್ನೆಲೆ ಅನುಮನಗೊಂಡು ಸ್ಥಳೀಯರಿಂದ ಕಾರು ಪರಿಶೀಲನೆ ಮಾಡಲಾಗಿದೆ. ಡೋರ್ ತೆಗೆದ ಬಳಿಕ ಕೊಳೆತ ರೂಪದಲ್ಲಿ ಶವ ಪತ್ತೆಯಾಗಿದೆ.

ಕಾರಿನಿಂದ‌ ಶವ ಹೊರ ತೆಗೆದ ಹೆಬ್ಬಗೋಡಿ ಪೊಲೀಸರು, ವಿಕ್ಟೋರಿಯಾ ಆಸ್ಪತ್ರೆಗೆ‌ ಮೃತದೇಹ ರವಾನೆ ಮಾಡಿದ್ದಾರೆ. ಸಾವಿಗೆ ಕಾರಣ ಏನೆಂದು ಪೊಲೀಸರು ಪರಿಶೀಲಿಸುತ್ತಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲು ಮಾಡಲಾಗಿದೆ.

ಕುಖ್ಯಾತ ಸರಗಳ್ಳ ಸೈಯದ್ ಪರ್ವೇಜ್ ಬಂಧನ:

ಬೆಂಗಳೂರು: ಕುಖ್ಯಾತ ಸರಗಳ್ಳ ಸೈಯದ್ ಪರ್ವೇಜ್​ನನ್ನು​ ತಿಲಕ್​ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಸೈಯದ್​ನಿಂದ 92 ಗ್ರಾಂ ತೂಕದ 2 ಚಿನ್ನದ ಸರಗಳು ವಶಕ್ಕೆ ಪಡೆಯಲಾಗಿದೆ. ಯಾರೂ ಇಲ್ಲದನ್ನು ಗಮನಿಸಿ ಮನೆಗೆ ನುಗ್ಗಿ ಸರಗಳ್ಳತನ ಮಾಡುತ್ತಿದ್ದ. 36 ಸರಗಳ್ಳತನ ಪ್ರಕರಣದಲ್ಲಿ ಸೈಯದ್ ಪರ್ವೇಜ್ ಬೇಕಾಗಿದ್ದ. ತಿಲಕ್​ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:23 pm, Tue, 25 October 22