ಬೆಳಗಾವಿ: ಖತರ್ನಾಕ್ ಐಡಿಯಾ ಮೂಲಕ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪಿಯನ್ನು ಅಬಕಾರಿ ಇಲಾಖೆಯ (Department of Excise) ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ವಾರಣಾಸಿ ಮೂಲದ ವೀರೇಂದ್ರ ಮಿಶ್ರಾ (34) ಬಂಧಿತ ಆರೋಪಿ. ಆರೋಪಿ ಲಾರಿಯನ್ನ ಮಾಡಿಫೈ ಮಾಡಿಸಿ ಗೋವಾದಿಂದ ಪ್ಲೈವುಡ್ ಸಾಗಿಸುತ್ತಿದ್ದನು. ಈ ಪ್ಲೈವುಡ್ಗಳ ಮಧ್ಯೆ 18 ವಿವಿಧ ನಮೂನೆ ಮದ್ಯದ 208 ರಟ್ಟಿನ ಬಾಕ್ಸ್ಗಳನ್ನು ಗೋವಾದಿಂದ (Goa) ಬೆಳಗಾವಿ (Belagavi) ಮಾರ್ಗವಾಗಿ ಹೊರ ರಾಜ್ಯಕ್ಕೆ ಸಾಗಿಸುತ್ತಿದ್ದನು. ಬೆಳಗಾವಿ ಗಡಿಯಲ್ಲಿ ಅಬಕಾರಿ ಅಧಿಕಾರಿಗಳ ಟೈಟ್ ತಪಾಸಣೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಮದ್ಯ ಸಿಕ್ಕಿದೆ.
ಬೆಳಗಾವಿ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ನಾಲ್ಕು, ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಕೆಎ 25 ಎಎ 6469 ನಂಬರ್ನ ವಾಹನ ತಡೆದು ತಪಾಸಣೆ ನಡೆಸಿದೆವು. ಈ ವೇಳೆ ಅಕ್ರಮವಾಗಿ ಗೋವಾದಿಂದ ಹೊರ ರಾಜ್ಯಕ್ಕೆ ಮದ್ಯ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ತಪಾಸಣೆ ವೇಳೆ 28 ಲಕ್ಷ ರೂ. ಮೌಲ್ಯದ ಮದ್ಯ ಸಿಕ್ಕಿದೆ. ಸದ್ಯ ಮದ್ಯ ಮತ್ತು ವಾಹನವನ್ನು ಜಪ್ತಿ ಮಾಡಲಾಗಿದೆ. ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಪರ ಅಬಕಾರಿ ಆಯುಕ್ತ ಡಾ.ವೈ ಮಂಜುನಾಥ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:46 am, Sun, 3 September 23