ಬೆಳಗಾವಿ: ಅಬಕಾರಿ ಅಧಿಕಾರಿಗಳ ಭರ್ಜರಿ ಬೇಟೆ; ಪುಷ್ಪ ಸಿನೆಮಾ ಮಾದರಿಯಲ್ಲಿ ಮದ್ಯ ಸಾಗಿಸಲು ಹೋಗಿ ತಗ್ಲಾಕ್ಕೊಂಡ ಗ್ಯಾಂಗ್​

ಗೋವಾದಲ್ಲಿ ಕಡಿಮೆ ದರಕ್ಕೆ ಮದ್ಯ ಸಿಗುತ್ತೆ ಎನ್ನುವ ಕಾರಣಕ್ಕೆ ಕೆಲವು ಕಿರಾತಕರು ಅಡ್ಡದಾರಿ ಹಿಡಿದು ಅಲ್ಲಿಂದ ಹೊರ ರಾಜ್ಯಗಳಿಗೆ ಅಕ್ರಮವಾಗಿ ಮದ್ಯ ಸಾಗಿಸುತ್ತಾರೆ. ಅಬಕಾರಿ ಮತ್ತು ಪೊಲೀಸರ ಕಣ್ತಪ್ಪಿಸಿ ಮದ್ಯ ಸಾಗಿಸಲು ಖತರ್ನಾಕ ಐಡಿಯಾಗಳನ್ನು ಮಾಡಿ ಸಾಗಿಸಲು ಯತ್ನಿಸಿ ತಗ್ಲಾಕ್ಕೊಂಡಿದ್ದಾರೆ. ಪುಷ್ಪ ಸಿನೆಮಾ ಮಾದರಿಯಲ್ಲಿ ಮದ್ಯ ಸಾಗಿಸಲು ಯತ್ನಿಸಿದ ಗ್ಯಾಂಗ್ ಇದೀಗ ಅಂದರ್ ಆಗಿದ್ದು, ಇಲ್ಲಿದೆ ನೋಡಿ.

ಬೆಳಗಾವಿ: ಅಬಕಾರಿ ಅಧಿಕಾರಿಗಳ ಭರ್ಜರಿ ಬೇಟೆ; ಪುಷ್ಪ ಸಿನೆಮಾ ಮಾದರಿಯಲ್ಲಿ ಮದ್ಯ ಸಾಗಿಸಲು ಹೋಗಿ ತಗ್ಲಾಕ್ಕೊಂಡ ಗ್ಯಾಂಗ್​
ಬೆಳಗಾವಿ ಅಕ್ರಮ ಮದ್ಯೆ ವಶಕ್ಕೆ
Follow us
Sahadev Mane
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 03, 2023 | 3:24 PM

ಬೆಳಗಾವಿ, ಸೆ.03: ಲೋಡ್ ಆದ ಲಾರಿ ತಾಡಪಲ್ ಓಪನ್ ಮಾಡಿ ನೋಡಿದ್ರೇ ಒಳಗೆ ಪ್ಲೈವುಡ್​ಗಳು, ಎನೂ ಇಲ್ಲವೆಂದು ಸರ್ಚ್ ಮಾಡಿದ ಅಬಕಾರಿ ಸಿಬ್ಬಂದಿಗೆ (Excise Officials) ಶಾಕ್ ಕಾದಿತ್ತು. ಹೌದು, ಪ್ಲೈವುಡ್ ಮಧ್ಯ (liquor) ದಲ್ಲಿ ಸುರಂಗದ ರೀತಿಯಲ್ಲಿ ಕೊರೆದು ಮದ್ಯದ ಬಾಕ್ಸ್​ಗಳಿಟ್ಟಿರುವುದು ಬೆಳಗಾವಿ(Belagavi) ಯ ಅಬಕಾರಿ ಕಚೇರಿ ಎದುರು ಬೆಳಕಿಗೆ ಬಂದಿದೆ. ಗೋವಾದಿಂದ ದುಬಾರಿ ಬೆಲೆಯ ಮದ್ಯವನ್ನು ಅಕ್ರಮವಾಗಿ ಸಾಗಿಸಲು ನಾನಾ ರೀತಿ ಟ್ರಿಕ್ಸ್​ಗಳನ್ನು ಖದೀಮರು ಮಾಡುತ್ತಾರೆ. ಕೆಲವೊಮ್ಮೆ ಅಬಕಾರಿ ಅಧಿಕಾರಿಗಳ ಕಣ್ತಪ್ಪಿಸಿ ಮದ್ಯ ಸಾಗಿಸಿ ಸಕ್ಸಸ್ ಕೂಡ ಆಗಿದ್ದಾರೆ.

ಬೆಳಗಾವಿ ಮಾರ್ಗವಾಗಿ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಅಕ್ರಮವಾಗಿ ಮದ್ಯ ಸಾಗಿಸಿದ್ದಾರೆ. ಹೀಗೆ ಸಾಗಿಸುವವರು ಲಾರಿ, ಕಂಟೇನರ್ ವಾಹನಗಳನ್ನು ಮೊಡಿಫೈ ಮಾಡಿ ಸಂಶಯ ಬಾರದ ರೀತಿಯಲ್ಲಿ ಸಾಗಾಟ ಮಾಡಲು ಯತ್ನಿಸಿ ಸಿಕ್ಕಿ ಹಾಕಿಕೊಂಡು ಜೈಲು ಸೇರಿದ್ದು ಇವೆ. ಆದರೆ, ಯಾರು ಕಲ್ಪನೆ ಮಾಡದ ಮತ್ತು ಊಹೆ ಕೂಡ ಮಾಡದ ರೀತಿಯಲ್ಲಿ ಮದ್ಯ ಸಾಗಿಸಲು ಯತ್ನಿಸಿ ಸಿಕ್ಕಿಹಾಕಿಕೊಂಡಿದ್ದಾರೆ.

ಇದನ್ನೂ ಓದಿ:ಹಾಸನ: ಮದ್ಯದ ಚಟ ಬಿಡಿಸುತ್ತೇವೆಂದು ಪುನರ್ವಸತಿ ಕೇಂದ್ರದಲ್ಲಿ ವ್ಯಕ್ತಿಯ ಕೊಲೆ; ಪೋಷಕರ ಆರೋಪ

ಪುಷ್ಪ ಸಿನೆಮಾ ಮಾದರಿಯಲ್ಲಿ ಮದ್ಯ ಸಾಗಿಸಲು ಯತ್ನ

ಪುಷ್ಪ ಸಿನೆಮಾದಲ್ಲಿ ರಕ್ತಚಂದನ ಸಾಗಿಸಲು ಬಳಿಸಿದ ಟ್ರಿಕ್ಸ್ ಮಾದರಿಯಂತೆ ಇಲ್ಲಿ ದುಬಾರಿ ಬೆಲೆಯ ಮದ್ಯ ಸಾಗಿಸಲು ಉಪಯೋಗಿಸಿದ್ದಾರೆ. ಹೌದು ಗೋವಾದಿಂದ ಪ್ಲೈವುಡ್ ಸಾಗಿಸುವಂತೆ ಪ್ಲ್ಯಾನ್ ಮಾಡಿ ಆ ಪ್ಲೈವುಡ್ ಮಧ್ಯದಲ್ಲಿ ಸುರಂಗ ರೀತಿಯಲ್ಲಿ ಕೊರೆದು, ಅದರಲ್ಲಿ ಮದ್ಯದ ಬಾಕ್ಸ್​ಗಳನ್ನಿಟ್ಟುಕೊಂಡು ಸಾಗಿಸುವಾಗ ಬೆಳಗಾವಿ ಅಬಕಾರಿ ಕೈಯಲ್ಲಿ ತಗ್ಲಾಕ್ಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದ ಸಿಬ್ಬಂದಿ ಮತ್ತು ಅಧಿಕಾರಿಗಳು ಇದೀಗ ಮದ್ಯವನ್ನು ಜಪ್ತಿ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.

28 ಲಕ್ಷ ಮೌಲ್ಯದ 208 ಬಾಕ್ಸ್​ಗಳು ಜಪ್ತಿ

ಗೋವಾದಿಂದ ಎರಡ್ಮೂರು ಬಾರಿ ಇದೇ ಮಾದರಿಯಲ್ಲಿ ಸಾರಾಯಿ ಸಾಗಿಸಿದ್ದ ಖದೀಮರು, ಮೊನ್ನೆ ಗೋವಾದಿಂದ ಲಾರಿಯಲ್ಲಿ 28 ಲಕ್ಷ ಮೌಲ್ಯದ 208 ಬಾಕ್ಸ್​ಗಳನ್ನು ತುಂಬಿಕೊಂಡು ಹೊರಟ ವಿಚಾರ ಅಬಕಾರಿ ಅಧಿಕಾರಿಗಳ ಗಮನಕ್ಕೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ಕೆಎ 25 ಎಎ6469 ನಂಬರ್ ನ ವಾಹನದಲ್ಲಿ ಮದ್ಯ ಸಾಗಿಸುತ್ತಿರುವ ವಿಚಾರ ತಿಳಿದು ಬೆಳಗಾವಿ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ನಾಲ್ಕು ಸುವರ್ಣ ವಿಧಾನಸೌಧದ ಬಳಿ ವಾಹನ ತಡೆದು ತಪಾಸಣೆ ಮಾಡಿದ್ದಾರೆ. ಬಳಿಕ ಲಾರಿಯನ್ನು ಜಪ್ತಿ ಮಾಡಿಕೊಂಡು ಅಬಕಾರಿ ಕಚೇರಿಗೆ ತಂದು ಪರಿಶೀಲನೆ ನಡೆಸಿದಾಗ ಪ್ಲೈವುಡ್ ಮಧ್ಯದಲ್ಲಿ ಮದ್ಯದ ಬಾಕ್ಸ್ ಗಳಿರುವುದು ಪತ್ತೆಯಾಗಿದೆ.

ಇದನ್ನೂ ಓದಿ:ಕಲಬುರಗಿ: ಸಹೋದರಿ ಮೇಲೆ ಕಣ್ಣು ಹಾಕಿದ್ದವನ ಕಾಲು ಮುರಿದಿದ್ದ ಸಹೋದರನ ಕೊಲೆ

ಉತ್ತರ ಪ್ರದೇಶ ಮೂಲದ ಚಾಲಕ ವಶಕ್ಕೆ

ಕೂಡಲೇ ಲಾರಿ ಡ್ರೈವರ್ ಉತ್ತರ ಪ್ರದೇಶದ ವಾರಣಾಸಿ ಮೂಲದ ವೀರೇಂದ್ರ ಮಿಶ್ರಾನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇನ್ನು ಹೀಗೆ ಮದ್ಯ ಸಾಗಿಸಲು ಒಂದು ಗ್ಯಾಂಗ್ ಇದ್ದು, ಸದ್ಯ ಅಬಕಾರಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಒಟ್ಟಾರೆ ಖದೀಮರು ಚಾಪೆ ಕೆಳಗೆ ನುಗ್ಗಿದ್ರೆ, ಅಬಕಾರಿ ಅಧಿಕಾರಿಗಳು ರಂಗೋಲಿ ಕೆಳಗೆ ನುಗ್ಗಿ ಖದೀಮರ ಪ್ಲ್ಯಾನ್ ಫೇಲ್ ಮಾಡಿ ಅಕ್ರಮವಾಗಿ ಮದ್ಯ ಸಾಗಿಸೊದಕ್ಕೆ ಕಡಿವಾಣ ಹಾಕಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ