ಬೆಳಗಾವಿ: ವರದಕ್ಷಿಣೆ ನೀಡಿಲ್ಲವೆಂದು ವಧುವಿಗೆ ತಾಳಿ ಕಟ್ಟದ ವರ ಅರೆಸ್ಟ್

| Updated By: Rakesh Nayak Manchi

Updated on: Jan 01, 2024 | 10:33 PM

ಇನ್ನೇನು ವಧುವಿಗೆ ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ಮದುವೆ ಮುರಿದು ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನಡೆದಿದೆ. ವರದಕ್ಷಿಣಿ ಕೊಡದ ಹಿನ್ನೆಲೆ ವಧುವಿಗೆ ತಾಳಿ ಕಟ್ಟಲು ವರ ನಿರಾಕರಿಸಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ, ವರನ ವಿರುದ್ಧ ವಧು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಬೆಳಗಾವಿ: ವರದಕ್ಷಿಣೆ ನೀಡಿಲ್ಲವೆಂದು ವಧುವಿಗೆ ತಾಳಿ ಕಟ್ಟದ ವರ ಅರೆಸ್ಟ್
ಬೆಳಗಾವಿಯಲ್ಲಿ ವರದಕ್ಷಿಣೆ ನೀಡಿಲ್ಲವೆಂದು ವಧುವಿಗೆ ತಾಳಿ ಕಟ್ಟದ ವರ ಅರೆಸ್ಟ್
Follow us on

ಬೆಳಗಾವಿ, ಜ.1: ತಾಳಿ ಕಟ್ಟುವ ಸಮಯದಲ್ಲಿ ಮದುವೆ ‌ಮುರಿದು ಬಿದ್ದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನಡೆದಿದೆ. ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹಳೆ ಹುಬ್ಬಳ್ಳಿ ನಿವಾಸಿ ವರ ಸಚಿನ್ ಪಾಟೀಲ್ ಎಂಬವನೊಂದಿಗೆ ಯುವತಿಯೊಬ್ಬಳ ಮದುವೆ ನಿಶ್ಚಯವಾಗಿತ್ತು. ಖಾನಾಪುರ ಪಟ್ಟಣದ ಲೋಕಮಾನ್ಯ ಕಲ್ಯಾಣ ಮಂಟಪ ಕೂಡ ಬುಕ್ ಮಾಡಲಾಗಿತ್ತು. 2023ರ ಡಿಸೆಂಬರ್ 30 ರಂದು ನಡೆದ ಮದುವೆ ನಿಶ್ಚಿತಾರ್ಥ ಸಂದರ್ಭದಲ್ಲಿ 100 ಗ್ರಾಂ ಚಿನ್ನ,‌ 10 ಲಕ್ಷ ವರದಕ್ಷಿಣೆ ನೀಡುವ ಮಾತುಕತೆ ನಡೆದಿತ್ತು.

ಇದನ್ನೂ ಓದಿ: ವರದಕ್ಷಿಣೆಯಾಗಿ ಬಿಎಂಡಬ್ಲ್ಯೂ ಕಾರು ಕೊಡಲಿಲ್ಲ ಎನ್ನುವ ಕಾರಣಕ್ಕೆ ನಿಂತ ಮದುವೆ, ವೈದ್ಯೆ ಆತ್ಮಹತ್ಯೆ

ಆದರೆ, ‌ವರದಕ್ಷಿಣೆ ನೀಡದ ಹಿನ್ನೆಲೆಯಲ್ಲಿ ತಾಳಿ ಕಟ್ಟಲು ವರ ಸಚಿನ್ ಒಲ್ಲೆ ಎಂದಿದ್ದಾನೆ. ಇದರಿಂದ ಬೆಸತ್ತ ವಧುವಿನ ಕುಟುಂಬಸ್ಥರು ಖಾನಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವರನ ವಿರುದ್ಧ ವಧು ನೀಡಿದ ದೂರಿನ ಅನ್ವಯ ಪೊಲೀಸರು, ಸಚಿನ್​ ಪಾಟೀಲ್​ನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:33 pm, Mon, 1 January 24